ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಸ್ಯಾಹಾರಿ ಬ್ರಾಂಡ್ ಅನಂತ ಫುಡ್ಸ್, ರಾಜರಾಜೇಶ್ವರಿ ನಗರದಲ್ಲಿ (ಆರ್. ಆರ್. ನಗರ) ತನ್ನ ಮೂರನೇ ಶಾಖೆಯನ್ನು ಅದ್ದೂರಿಯಾಗಿ ಆರಂಭ ಮಾಡಲಾಗಿದೆ.
ಮೂಲ ನಂಬಿಕೆ ಮತ್ತು ದಿಟ್ಟ ಧ್ಯೇಯವಾಕ್ಯವಾದ-“ವೆಜ್ ಎಬವ್ ಎವೆರಿಥಿಂಗ್”(ಸಸ್ಯಾಹಾರ ಎಲ್ಲದಕ್ಕೂ ಮೇಲೆ) ಗಳನ್ನು ಆಧರಿಸಿರುವ ಅನಂತ ಫುಡ್ಸ್ ಸಂಸ್ಥೆಯು, ಶುದ್ಧತೆ, ಗುಣಮಟ್ಟ ಮತ್ತು ರುಚಿಗಳ ಮೂಲಕ ಸಸ್ಯಾಹಾರಿ ಊಟವನ್ನು ಪುನರ್ನಿರೂಪಿಸುವ ತನ್ನ ಅಭಿಯಾನ ಮುಂದುವರೆಸಿದೆ.
ಅನಂತ ಫುಡ್ಸ್ ಸಂಸ್ಥೆಯು, ದಕ್ಷಿಣ ಭಾರತ, ಉತ್ತರ ಭಾರತ ಮತ್ತು ಚೀನೀ ಸಸ್ಯಾಹಾರಿ ಪಾಕಪದ್ಧತಿಗಳ ಧ್ಯೇಯವಾಗಿದೆ. ಮತ್ತು ರುಚಿಯಾದ ಆಯ್ಕೆ ಸಾದರಪಡಿಸುತ್ತದೆ, ರೆಸ್ಟೋರೆಂಟ್ ನಲ್ಲಿ ಸಿಗುವ ಆಹಾರ ಪದಾರ್ಥಗಳ ಮೌಲ್ಯ ಅಥವಾ ರುಚಿಯೊಂದಿಗೆ ರಾಜಿ ಮಾಡಿಕೊಳ್ಳದೆ ವೈವಿಧ್ಯತೆಯನ್ನು ಬಯಸುವ, ಯಾರಿಗಾದರೂ ಒಮ್ಮೆ ಭೇಟಿ ನೀಡುವಂತಹ ತಾಣವಾಗಿದೆ.
ದೇಶದ ಎಲ್ಲೆಡೆ 50ಕ್ಕೂ ಹೆಚ್ಚು ರೆಸ್ಟೋರೆಂಟ್ಗಳ ಮಾಲೀಕತ್ವವನ್ನು ಹೊಂದಿರುವ ಹಾಗೂ ಭಾರತದ ಅತ್ಯಂತ ಪ್ರಭಾವಶಾಲಿ ರೆಸ್ಟೋರೆಂಟ್ ಮಾಲೀಕರಲ್ಲಿ ಒಬ್ಬರಾಗಿರುವ ವಿಕಾಶ್ ಅಗ್ರವಾಲ್ ಅವರು ಸಸ್ಯಾಹಾರಿ ರೆಸ್ಟೋರೆಂಟ್ಗಳ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದ್ದಾರೆ.
ಸಸ್ಯಾಹಾರಿ ಆಹಾರವನ್ನು ಅನುಭವಿಸುವ ವಿಧಾನದಲ್ಲಿ ಕ್ರಾಂತಿ ಮಾಡುವ ದೃಷ್ಟಿಕೋನದಿಂದ “ಅನಂತ” ಜನಿಸಿದೆ. ಕೇವಲ ಎರಡು ವರ್ಷಗಳಲ್ಲಿ, ಈ ಬ್ರಾಂಡ್ ಅದ್ಭುತ ಬೆಳವಣಿಗೆ ಕಂಡಿದೆ, ಸಸ್ಯಾಹಾರಿ ಆಹಾರದಲ್ಲಿ ವಿಶ್ವಾಸಾರ್ಹತೆ ಮತ್ತು ನವೀನತೆಗೆ ಸಮಾನಾರ್ಥಕವಾದ ಹೆಸರಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ.
“ಅನಂತ ಕೇವಲ ಒಂದು ರೆಸ್ಟೋರೆಂಟ್ ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚಿನದಾಗಿ ನಾಡಿನ ಸಂಸ್ಕೃತಿ ಫೋಟೋ ಪ್ರಚಾರದ ಬಗೆಗಿನ ಮೌಲ್ಯವನ್ನು ಎತ್ತಿ ಹಿಡಿಯುವ ಶ್ರೇಷ್ಠ ರೆಸ್ಟೋರೆಂಟ್ ಆಗಿದೆ. ಸಸ್ಯಾಹಾರಿ ಆಹಾರವು ವೈವಿಧ್ಯಮಯವಾಗಿರಬಹುದು, ಆನಂದಕರವಾಗಿರಬಹುದು ಮತ್ತು ಗುಣಮಟ್ಟದಲ್ಲಿ ಹೆಸರು ಮಾಡಿ ತೋರಿಸುವ ಒಂದು ವಿಭಿನ್ನ ಆಹಾರ ಸಂಸ್ಥೆಯಾಗಿದೆ. ಆರ್ಆರ್ ನಗರದೊಂದಿಗೆ, ನಾವು ಭೋಜನ ಪ್ರಿಯರಿಗಾಗಿ ವಿಶೇಷ ಹಾಗೂ ರುಚಿಕರ ಆಹಾರ ಪದಾರ್ಥಗಳನ್ನು ತರುತ್ತಿದ್ದೇವೆ” ಎಂದು ವಿಕಾಶ್ ಅಗ್ರವಾಲ್ ಹೇಳಿದರು.
ಇನ್ನೂ ಆರ್ ಆರ್ ನಗರದ ನೂತನ ಅನಂತ ಫುಡ್ ರೆಸ್ಟೋರೆಂಟ್ ಉದ್ಘಾಟನೆಯನ್ನು ಕನ್ನಡ ಚಲನಚಿತ್ರರಂಗದ ಮೇರು ಖಳ ನಟ ಆಶಿಶ್ ವಿದ್ಯಾರ್ಥಿ ಅವರು ಭಾಗವಹಿಸಿದ್ದರು.
ಇನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ಬೇರೆ ಬೇರೆ ಕಡೆ ತಮ್ಮ ರೆಸ್ಟೋರೆಂಟ್ ಗಳನ್ನು ಆರಂಭ ಮಾಡುವುದಾಗಿ ಯೋಚನೆಯನ್ನು ಹಾಕಿಕೊಂಡಿದ್ದೇವೆ ಎಂದು ಇದೆ ವೇಳೆ ಅವರು ತಿಳಿಸಿದರು.