ಬೆಂಗಳೂರು: ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯ ಪ್ರಕಾರ ಒಳ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು, ಅಲ್ಲಿವರೆಗೂ ಯಾವುದೇ ಕಾರಣಕ್ಕೂ ಬ್ಯಾಕ್ ಲಾಕ್ ಹುದ್ದೆಗಳನ್ನು ನಿಯೋಜನೆ ಮಾಡಬಾರದು ಎಂದು ಅಗ್ರಹಿಸಿ ಫ್ರೀಡಂಪಾರ್ಕ್ ನಲ್ಲಿ ಮಾದಿಗ ದಂಡೋರ ಹೋರಾಟ ರಾಜ್ಯ ಸಮಿತಿಯಿಂದ ಧರಣಿ ನಡೆಸಿದರು.
ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ ಆದೇಶದ ಮೇರೆಗೆ ಮಾದಿಗ ದಂಡೋರ(MRPS) ನಾಯಕತ್ವದಲ್ಲಿ ಸತತ 8ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮಾದಿಗ ದಂಡೋರ(MRPS) ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರರವರು ಹಾಗೂ ರಾಜ್ಯ ಸಮಿತಿ ಪದಾಧಿಕಾರಿಗಳ ನಿಯೋಗವನ್ನು ಭೇಟಿ ಮಾಡಲು ತಮ್ಮ ಗೃಹ ಕಛೇರಿಗೆ ಆಹ್ವಾನಿಸಿದ್ದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಮಾದಿಗ ದಂಡೋರ MRPS ರಾಜ್ಯ ನಮಿತಿಯು ತಮ್ಮ ಬೇಡಿಕೆಗಳ ಕುರಿತು ಚರ್ಚಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ವಿಚಾರವಾಗಿ ಬೆಂಗಳೂರಿನ ಪುಷ್ಪರಿನಲ್ಲಿ ಪತ್ರಿಕೆ ಘೋಷ್ಠಿ ನಡೆಸಲಾಯಿತು, ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಮ್ಮೊಂದಿಗೆ ಚರ್ಚೆ ನಡೆಸಿ ಮೀಸಲಾತಿ ವರ್ಗೀಕರಣ ಹಾಗೂ ಬ್ಯಾಕ್ ಲಾಗ್ ಹುದ್ದೆಗಳ ತಡೆಯ ಬಗ್ಗೆ ಸಚಿವರೊಂದಿಗೆ ಮಾತನಾಡುತ್ತೇನೆ, ಈ ಸಂಬಂಧ ಕೆಲವು ದಿನಗಳ ಕಾಲಾವಕಾಶವನ್ನು ನೀಡಬೇಕೆಂದು ಮಾದಿಗ ದಂಡೋರ ಸಮಿತಿಯಲ್ಲಿ ಮನವಿ ಮಾಡಿಕೊಂಡರು. ನಿಮ್ಮ ಸಮಸ್ಯೆಗಳನ್ನು ಕೆಲವೇ ತಿಂಗಳಲ್ಲಿ ಇತ್ಯರ್ಥ ಮಾಡುತ್ತೇನೆ ಬಗೆಹರಿಸುತ್ತೇನೆ ಎಂದು ವಿಶ್ವಾಸವನ್ನು ಸಹ ನೀಡಿದರು.
ಮಾದಿಗ ದಂಡೋರದ ಪ್ರಮುಖ ಬೇಡಿಕೆಗಳು:
1) ಸಾಮಾಜಿಕ ನ್ಯಾಯಕ್ಕಾಗಿ 30 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ಮತ್ತು ಸುಪ್ರೀಂ ಕೋರ್ಟ್ತೀರ್ಪಿಗೆ ಮನ್ನಣೆ ನೀಡಿ ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ಆಯೋಗದಿಂದ ಮಧ್ಯಂತರ ವರದಿ ತರಿಸಿಕೊಂಡು ಮಾದಿಗ ಮತ್ತು ಮಾದಿಗ ಸಂಬಂಧಿತ ಉಪಜಾತಿಗಳಿಗೆ 6% ಒಳಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು.
2) ಒಳಮೀಸಲಾತಿ ಜಾರಿಯಾಗುವ ವರೆಗೆ ಯಾವುದೇ ಕಾರಣಕ್ಕೂ ಎಸ್ಪಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು ಮತ್ತು ಈ ಹಿಂದೆ ಬಿ.ಕೆ ಪವಿತ್ರ ಪ್ರಕರಣ ಮತ್ತು ಹೈದರಾಬಾದ್ ಕರ್ನಾಟಕದವರಿಗೆ ಮೀಸಲಾತಿ ನೀಡುವ ಸಮಯದಲ್ಲಿ ಮಾಡಿದ ಹಾಗೆ ಎಲ್ಲ ಮುಂಬಡ್ತಿ ಆದೇಶಗಳನ್ನು ಒಳಮೀಸಲಾತಿ ಜಾರಿಯಾಗುವವರೆಗೆ ತಡೆ ಹಿಡಿಯಬೇಕು.
3) ಭಾರತೀಯ ಯೋಜನಾ ಆಯೋಗದ(Planning Commission Of India) ನಿಯಮಗಳ ಅನುಸಾರವೇ SCSP/TSP ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು, ಯಾವುದೇ ಕಾರಣಕ್ಕೂ SCSP/TSP ನಿಧಿಯನ್ನು ಗ್ಯಾರಂಟಿ ಯೋಜನೆ ಅಥವಾ ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸಬಾರದು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಬ್ಯಾಕ್ ಲಾಗ್ ಉದ್ಯೋಗಗಳನ್ನು ಭರ್ತಿ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವರು ಡಾ.ಹೆಚ್ .ಸಿ.ಮಹದೇವಪ್ಪ ಅವರನ್ನು ಕರೆದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಹೇಳುತ್ತೇನೆ ಮತ್ತು ಒಳ ಮೀಸಲಾತಿಯನ್ನು ನಾನೇ ಜಾರಿ ಮಾಡುತ್ತೇನೆಂದು ಮಾತು ಕೊಟ್ಟಿದ್ದೇನೆ ಖಂಡಿತ ಜಾರಿ ಮಾಡಿ ನನ್ನ ಬದ್ಧತೆಯನ್ನು ತೋರಿಸುತ್ತೇನೆ ಎಂದು MRPS ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರ ಹಾಗೂ ರಾಜ್ಯ ಸಮಿತಿ ಇತರ ಪದಾಧಿಕಾರಿಗಳಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಯತೀಂದ್ರ ಸಿದ್ದರಾಮಯ್ಯ ಮತ್ತು ರವಿ ಬೋಸ್ ರಾಜ್ಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
MRPS ನಿಯೋಗದಲ್ಲಿ ಜೆ. ಎಮ್.ದೇವರಾಜ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು: ಫರ್ನಾಂಡಿಸ್ ಹಿಪ್ಪಳಗಾವ್ ರಾಜ್ಯ ಕಾರ್ಯಾಧ್ಯಕ್ಷರು, ಡಾ.ಎಸ್. ರಾಮಕೃಷ್ಣ ರಾಜ್ಯ ಉಪಾಧ್ಯಕ್ಷರು ಕತ್ತಿ ವೆಂಕಟೇಶ್ ರಾಜ್ಯ ವಕ್ತಾರರು. ಟಿ ಆರ್ ವಿಜಯಕುಮಾರ ಹಾಸನ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಂಜುನಾಥ ಕೊಂಡಪಲ್ಲಿ ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷರು ಹಾಗೂ ರಾಜ್ಯವಕ್ತಾರರು, ಶಾಮ್ ರಾಜ್ ಕಲಾಮಂಡಳಿ ಅಧ್ಯಕ್ಷರು, ತ್ರಿಲೋಕ ಚಂದರ್ ಬೆಂಗಳೂರು ಜಿಲ್ಲಾಧ್ಯಕ್ಷರು, ಪ್ರಮೋದ್ ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷರು, ವಿಜಯಕುಮಾರ್ ಹಿಪ್ಪಳ ಹಿಮೋದರಂ ದಲ್ಲಾಧ್ಯಕ್ಷರು, ಕಾಶಪ್ಪ ಹೆಗಹರ ಯಾದಗಿರಿ ಜಿಲ್ಲಾದ ಪರು ಮಂಜುನಾಥ ಚಿಕ್ಕಬಳ್ಳಾಪುರ ಜಿಲ್ಲಾದರಾವ್ ಬೀದರ್ ಮಂದಾರ ಜಿಲ್ಲಾ ಯುವ ಸೇನೆ ಅಧ್ಯಕ್ಷರು ರಾಯಚೂರು ಹಾಗೂ ಇನ್ನಿತರ ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಎಸ್ ರಾಮಕೃಷ್ಣ ರಾಜ್ಯ ಉಪಾಧ್ಯಕ್ಷರು, ಜೆಎಂ ದೇವರಾಜು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು, ವೆಂಕಟೇಶ್ ಕತ್ತಿ ರಾಜ್ಯ ವಕ್ತಾರರು, ಮಂಜುನಾಥ ಕೊಂಡಪಲ್ಲಿ ರಾಜ್ಯ ವಕ್ತಾರರ, ಮಂಜುನಾಥ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರು, ತ್ರಿಲೋಕ ಚಂದ್ರು ಬೆಂಗಳೂರು ಜಿಲ್ಲಾಧ್ಯಕ್ಷರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.