ಬೆಂಗಳೂರು: ರಾಜ್ಯ ಸರ್ಕಾರ ನಡೆಸಿರುವ ಸಾಮಾಜಿಕ ಶೈಕ್ಷಣಿಕ,ಆರ್ಥಿಕ ಸಮೀಕ್ಷೆಯಲ್ಲಿ ನೇಕಾರ ಸಮುದಾಯ ಗಳಿಗೆ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪ ದೋಷಗಳು ಕಂಡುಬಂದಿದ್ದು, ಸಮುದಾಯಕ್ಕೆ ಸರ್ಕಾರ ಸೂಕ್ತ ಪ್ರಾತಿನಿಧ್ಯ ಕೊಡಬೇಕು ಎಂದು ಒಕ್ಕೂಟದ ಸಮುದಾಯದ ಸ್ವಾಮಿಗಳಾದ ಗೂಳೆದ ಗುಡ್ಡದ ಶ್ರೀ ಬಸವರಾಜ ಪಟ್ಟಾಚಾರ್ಯ ಸ್ವಾಮೀಜಿ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ನೇಕಾರ ಸಮುದಾಯ ಹಿಂದುಳಿದ ಸಮುದಾಯವಾಗಿದ್ದು ರಾಜಕೀಯ ಆರ್ಥಿಕ ಶೈಕ್ಷಣಿಕವಾಗಿ ಸ್ಥಾನಮಾನಗಳು ಇಲ್ಲಿಯವರೆಗೂ ದೊರೆತಿಲ್ಲ. ರಾಜ್ಯದಲ್ಲಿ ನೇಕಾರ ಸಮುದಾಯ 20 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. 40 ಕ್ಕಿಂತ ಹೆಚ್ಚು ಒಳಪಂಗಡಗಳಿವೆ.
ಸರ್ಕಾರ ಮಾಡಿರುವ ಗೆಣತಿಯಲ್ಲಿ ಸಾಕಷ್ಟು ತೊಂದರೆಗಳು ಕಂಡು ಬಂದಿದೆ, ಹೀಗಾಗಿ ಸಮುದಾಯಕ್ಕೆ ಅನ್ಯಾಯವಾಗಿದೆ, ಸರ್ಕಾರ ಮರು ಪರಿಷ್ಕರಣೆ ಮಾಡಿ ಸಮುದಾಯದ ಜನಸಂಖ್ಯೆಯನ್ನು ನಿಖರವಾಗಿ ತಿಳಿಸಬೇಕಾಗಿದೆ. ಜಯಪ್ರಕಾಶ್ ಹೆಗಡೆಯವರ ಆಯೋಗದ ವರದಿಯು ಸಮಂಜಸವಾಗಿಲ್ಲ, ಹೀಗಾಗಿ ಮರು ಸಮೀಕ್ಷೆ ಆಗಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಿದರು.
ಸರ್ಕಾರದಲ್ಲಿ ಆಗಿರುವ ಲೋಪ ದೋಷಗಳ ಬಗ್ಗೆ ಮರುಪರಿಷ್ಕರಣೆ ಮಾಡಿ ಸಮುದಾಯದ ಒಳತಿಗೆ ನಾಂದಿ ಹಾಡಬೇಕಾಗಿದೆ. ಸರ್ಕಾರ ಮಧುರ ಸಮೀಕ್ಷೆಯಿಂದ ಸಮುದಾಯಕ್ಕೆ ಹಾಗೂ ಸಮುದಾಯದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಶ್ರೀ ಪ್ರಭುಲಿಂಗ ಸ್ವಾಮೀಜಿ, ದೊಡ್ಡಬಳ್ಳಾಪುರದ ಶ್ರೀ ದಿವ್ಯ ಜ್ಞಾನಾನಂದ ಗಿರಿ ಸ್ವಾಮೀಜಿ, ಶ್ರೀ ಗಣಲಿಂಗ ಸ್ವಾಮೀಜಿ, ಸಮಾಜದ ಮುಖಂಡರಾದ ಲಿಂಗರಾಜು, ರಘು, ದಯಾನಂದ ಶೆಟ್ಟಿಗಾರ್ ಸೇರದಂತೆ ಸಮಾಜದ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.