ಬೆಂಗಳೂರು: ೧. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಶಿವಶಂಕರನಾಯ್ಕ ಮತ್ತಿತರರು ಸೇರಿ ಭ್ರಷ್ಟಾಚಾರ ನಡೆಸಿರುವುದು ಹಲವಾರು ಪ್ರಕರಣಗಳ ಮೂಲಕ ನಮಗೆ ತಿಳಿದು ಬಂದಿರುತ್ತದೆ. ಎಂ.ಡಿ ಅವರೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣಕಾಸು ಅಕ್ರಮ ನಡೆಸಿದ್ದಾರೆ ಎಂದು ಸ್ವತಃ ತಾಂಡ ನಿಗಮದ ಲೆಕ್ಕಾಧಿಕಾರಿಯೇ ಈ ಹಿಂದೆ ಸರ್ಕಾರಕ್ಕೆ ದೂರು ನೀಡಿದ್ದಾರೆ.
೨.ಸೇವಾಲಾಲ್ ಜನ್ಮಸ್ಥಳದಲ್ಲಿ ನಿಯಮ ಮೀರಿ ಜೈವಿಕ ಶೌಚಾಲಯ ನಿರ್ಮಾಣದಲ್ಲಿ ಕೋಟಿಗೂ ಹೆಚ್ಚು ಹಣ ಅವ್ಯವಹಾರ ನಡೆದಿದೆ. ಕಳಪೆ ಕಾಮಗಾರಿ ನಡೆದಿರುವ ಕುರಿತು ಸೇವಾಲಾಲ್ ಮಹಾಮಠ ಸಮಿತಿಯ ದೂರು ಸಲ್ಲಿಸಿದೆ.
೩. ನಿಗಮದ ಲೆಕ್ಕಪರಿಶೋಧನ ಮಾಡಿಸಿಲ್ಲದಿದ್ದರೂ ಅನಗತ್ಯವಾಗಿ ಒಂದು ಕೋಟಿ ಹಣವನ್ನು ಬೇರೆಯವರಿಗೆ ಪಾವತಿಸಲಾಗಿದೆ.
೪. ಲಂಬಾಣಿ ಕನೂತಿ ತರಬೇತಿಗಾಗಿ ಕೇಂದ್ರ ಸರ್ಕಾರದ ಎರಡು ಕೋಟಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ಕಸೂತಿ ತರಬೇತಿದಾರರು ಮತ್ತು ವಸ್ತು, ಬಟ್ಟೆ ಮತ್ತಿತರ ಯಾವುದೇ ಮಾಹಿತಿಗಳು ನಿಗಮದಲ್ಲಿ ಇಲ್ಲ. ಈ ಅನುದಾನ ದುರುಪಯೋಗವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಲಾಗಿದೆ.
೫. ತಾಂಡ ನಿಗಮದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವಾಗ ನಿಯಮ ಪಾಲಿಸಿಲ್ಲ. ಅಪೂರ್ಣ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ.
೬. ತಾಂಡ ನಿಗಮದ ಕಚೇರಿಯನ್ನು ಸ್ಥಳಾಂತರ ಮಾಡುವಾಗಲೂ ನಿಯಮಾನುಸಾರ ಟೆಂಡರ್ ನಡೆಸದೇ ಬೃಹತ್ ಕಾಮಗಾರಿಗಳಿಗೆ ಮಂಜೂರು ನೀಡಲಾಗಿದೆ.
ಮೈಸೂರು ನಗರದಲ್ಲಿ ಜಿಲ್ಲಾ ಬಂಜಾರ ಭವನ ನಿರ್ಮಾಣದ ಕಾಮಗಾರಿಯನ್ನು ಟೆಂಡರ್ ಕರೆಯದೆ ಒಂದೇ ದಿನದಲ್ಲಿ ಹಣ ಬಿಡುಗಡೆ ಪ್ರಕ್ರಿಯೆ ಪೂರೈನಲಾಗಿದೆ. ವಿಯದು ಮೀರಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ.
೮. ವಿಜಯಪುರ ಜಿಲ್ಲೆಯ ಖಂಡನಾರಿ ಕಾಂಡದಲ್ಲಿ ಕೃಷ್ಣಭಾಗ್ಯ ಜನ ನಿಗಮದಿಂದ ನಿರ್ಮಿಸಲಾಗಿರುವ ಈ ವಿಜಯನರರನಕ್ಕೆ ಸೇವಾಲಾಲ್ ಸಮುದಾಯ ಭವನ ಎಂದು ಬಣ್ಣ ಬಳಿದು 12 ಲಕ್ಷ ಬಿಟ್ ಮಾಡಲಾಗಿದೆ.
* ತಾಂಡ ನಿಗಮದಲ್ಲಿ ನಡೆದಿರಬಹುದಾದ ಭ್ರಷ್ಟಾಚಾರ ಮಾಹಿತಿಗಳು ಸೋರಿಕೆ ಹೋಗಬಾರದು ಎಂಬ ಕಾರಣ ನೀಡಿ ನಿಗಮದ ಹೊರಮೂಲ ನೌಕರರು ಸ್ಮಾರ್ಟ್ ಪೋನ್ ಗಳನ್ನು ಕಚೇರಿ ಅವರಣದಲ್ಲಿ ತರದಂತೆ ಆದೇಶ್ರ ಮಾಡಲಾಗಿದೆ.
೧೧. ವಿಜಯಪುರ ಜಿಲ್ಲೆಯ ಅರ್ಲಾಪುರ ತಾಂಡದ ವಾರ್ಡ್ ನಲ್ಲಿ ನಡೆದ ಕಾಮಗಾರಿ ಸೇರಿದಂತೆ ವಿವಿದ ತಾಂಡಗಳ ಕಾಮಗಾರಿ ಮಂಜೂರು ಪ್ರಕ್ರಿಯೆ ಸಂಬಂಧಿಸಿದಂತೆ ನಿಗಮದ ಎಂಡಿ ಲಂಚ ಪಡೆದಿದ್ದಾರೆ ಎಂಬ ಅಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
೧೨. ಸ್ವಯಂ ಉದ್ಯೋಗ, ನೇರ ಸೌಲಭ್ಯಗಳ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿಲ್ಲ ಮತ್ತು ಪಲಾನುಭವಿಗಳಿಗೆ ಕಿರುಕುಳ, ಕೆಲವರಿಂದ ಹಣ ವಸೂಲಿ ನಡೆದಿದೆ ಎಂಬುದು ತಿಳಿದು ಬಂದಿದೆ.
೧೩. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಭಾಗಿತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಗಾರ ಮಾಡಲು ನಿಗಮದ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ.
೧೪. ಮಹಾರಾಷ್ಟ್ರದಲ್ಲಿ ಸಂಘ ಪರಿವಾರದ ಅಂಗ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಿಯಮ ಮೀರಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಿಂದ ಹಣ ಬಿಡುಗಡೆ ಮಾಡಲಾಗಿದೆ.
15. ನೀತಿ ಸಂಹಿತೆ ಜಾರಿಯಲ್ಲಿದ್ದರೂ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುಮಾರು 15 ಕೋಟಿಗಳಷ್ಟು ಹಣವನ್ನು ಹಳೆಯ ದಿನಾಂಕವನ್ನು ನಮೂದಿಸಿ ಯಾವುದೇ ಟೆಂಡರ್ ಕರೆಯದೇ 15 ರಿಂದ 17 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುತ್ತಾರೆ.
16. ನಿಗಮದ ಕಷೇರಿಯನ್ನು ಸ್ಥಳಾಂತರಿಸಲು ಮೂವರ್ಸ್ ಪ್ಯಾಕರ್ಸ ಮೂಲಕ ದಸ್ತಾವೇಜುಗಳನ್ನು ಸರಬರಾಜು ಮಾಡಲು ಸುಮಾರು 60.000 ರೂ ವ್ಯಯಿಸಲಾಗಿದ್ದರೂ ಕೂಡ. ಅದರ ಖರ್ಚನ್ನು ಸುಮಾರು 50 ಲಕ್ಷಕ್ಕೆ ಏರಿಸಿ ನಿಗಮದ ಹಣವನ್ನು ಕೊಳ್ಳೆ ಹೊಡೆದಿರುತ್ತಾರೆ.
17.ಬಂಜಾರ ಪರಂಪರೆಯ ಸಿದ್ದ ಉಡುಪುಗಳ ತಯಾರಿಕೆಗೆ ಖಾಸಗಿ ಸಂಸ್ಥೆಗಳೊಂದಿಗೆ ವ್ಯವಹಾರ ಕುದುರಿಸಿಕೊಂಡು 2021-22 ರ ಅವಧಿಯಲ್ಲಿ ಸುಮಾರು 2ಕೋಟಿ ರಷ್ಟು ತಗುಲುವ ವೆಚ್ಚಕ್ಕೆ ಸುಮಾರು 5 ಕೋಟಿಗೂ ಅಧಿಕ ವೆಚ್ಚವನ್ನು ಬಿಡುಗಡೆ ಮಾಡಿ ಹಿಂದಿನ ಬಾಗಿಲಿನಿಂದ ನಿಗಮದ ಹಣವನ್ನು ಲೂಟಿ ಮಾಡಲಾಗಿರುತ್ತದೆ.
18. 2023-21 ಪದೇ ಅವದಿಯ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಜಯಂತಿಯ ಪರಿಧರ್ಭದಲ್ಲಿ ಯಾವುದೇ ಟೆಮಡರ್ ಸುಮಾರು ಕರಿಮಂತವನ್ನು ಹಾಡಿಟೇಟ್ ಸಂಸ್ಥೆಯ ಮೂಲಕ ನಿರ್ವಹಿಸಲು ಅನುಮೋದನೆ ನೀಡಿ ಕಾಮಗಾರಿ ನಿರ್ವಹಿಸಲಾಗಿರುತ್ತದೆ. ಇದರಲ್ಲಿ ಆಯದ ಸರಂಜಾಮುಗಳು ಕಳಪೆ ಗುಣಮಟ್ಟ ಹೊರಿದಿವೆ ಎಂದು ಸಾರಿಯ ಸಮೀತಿಯ ಅಧಧ್ಯಕ್ಷರು ನಿಗಮಕ್ಕೆ ಪತ್ರ ಬರೆದು ಸುಮಾರು 60 ಲಕ್ಷ ಹಣ ಸದರಿ ಕಾಮಗಾರಿಯಲ್ಲಿ ಲೂಟಿ ಮಾಡಲಾಗಿದೆ. ಕಂಗುಮಾರಿ ನಿರ್ವಹಿಸಿದ ವಿವರಗಳನ್ನು ನೀಡಿ ಎಂದು ಅರ್ಜಿ ಸರಿಸಿದ್ದರೂ ಅದಕ್ಕೆ ಪ್ರತಿಯಾಗಿ ನಿಗಮದ ವದಯವಸ್ಥಾಪಕರು ಸ್ಥಳೀಯ ಸಂಸ್ಥೆಗೆ 5 ಲಕ್ಷ ವಿಶೇಷ ಅನುದಾನ ನೀಡಿ ಈ ಪ್ರಕರಣವನ್ನು ಮುಚ್ಚಿಹಾಕಿರುತ್ತಾರೆ. ఈజడవాద సునీత బాయ్లాటో నిమినలు
19. ಸರ್ಕಾರದ ಯೋಜನೆಗಳಾಗಿರುವ ಭೂ ಒಡತನ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಐ.ಎಸ್.ಜಿ ಸಾಲಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ನಿಗಮದ ಎಫ್.ಡಿ.ಎ ಆಗಿರುವ ಎಲ್.ಜಿ.ನಾಯ್ಸ್ ಮೂಲಕ ಸಂಪರ್ಕಿಸಿ, ಪದರಿ ಫಲಾನುಭವಿಗಳಿಂದ ಹಣ ಒಸೂಲಿ ಮಾಡಿಕೊಂಡು ಪಲಾಣುಭವಿಗಳಿಗೆ ಯೋಜನೆಯನ್ನು ಮುಟ್ಟಿಸಿರುತ್ತಾರೆ.
20. ರಾಜ್ಯ ಸರ್ಕಾರದ ಯಾವುದೇ ಅಖಿತ ಆದೇಶ ಇರದೇ ಇದ್ದರೂ ಕೂಡ ನಿಗಮದಿಂದ. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಸುಮಾರು 3 ಕೋಟಿ ಹಣವನ್ನು ವರ್ಗಾಯಿಸಲಾಗಿರುತ್ತದೆ.
ಮೇಲ್ನೋಟಕ್ಕೆ ಈ ಪ್ರಕರಣಗಳು ಕಂಡು ಬಂದಿವೆಯಾದರೂ ಇನ್ನೂ ಹಲವಾರು ಅಕ್ರಮಗಳು ನಡೆದಿರುವ ಸಾದ್ಯತೆಗಳಿವೆ. ಹಾಗಾಗಿ ಕಳೆದ ಐದು ವರ್ಷಗಳಿಂದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಹಣಕಾಸು ವ್ಯವಹಾರ ತಪಾಸಣೆ, ಅವ್ಯವಹಾರಗಳನ್ನು ತನಿಖೆ ಮಾಡಲು ಸೂಕ್ತ ಸಮಿತಿಯನ್ನು ರಚಿಸಿ ತನಿಖೆ ಮಾಡಬೇಕು, ಈ ಅವ್ಯವಹಾರಗಳಿಗೆ ನೇರವಾಗಿ ಕಾರಣವಾಗಿರುವ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ನಾಯ್ಕ ಮತ್ತಿತರನ್ನು ತಕ್ಷಣದಿಂದಲೇ ಅವರ ಹುದ್ದೆಯಿಂದ ವಜಾಗೊಳಿಸಿ. ನಿಗಮದಲ್ಲಿ ಅಗಿರುವ ಅಕ್ರಮಗಳ ತನಿಖೆಗೆ ಸಿಐಡಿ ಸಂರ್ಸತೆಯ ಮೂಲಕ ತನಿಖೆಗೆ ಆದೇಶಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸುತ್ತೇವೆ. ಹಾಗೆಯೇ ಇನ್ನು ಮುಂದೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಹಣ ಪಾರದರ್ಶಕವಾಗಿ ನೇರವಾಗಿ ಸಮಾಜದ ಅಭಿವೃದ್ಧಿಗಾಗಿ ಬಳಕೆಯಾಗುವಂತೆ ಕ್ರಮವಹಿಸಲು ಮನವಿ ಮಾಡುತ್ತೇವೆ.