ಬೆಂಗಳೂರು : ತೋಟಗಾರಿಕೆ ಇಲಾಖೆ ವತಿಯಿಂದ 2025ನೇ ಸಾಲಿನ ಆಗಸ್ಟ್ ಮಾಹೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್ಬಾಗ್ನಲ್ಲಿ 2025ನೇ ಆಗಸ್ಟ್ 07 ರಿಂದ 18ರ ವರೆಗೆ “ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ” 218ನೇ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಸರ್ಕಾರಿ, ಖಾಸಗಿ ಅಲಂಕಾರಿಕ ತೋಟಗಳು, ತಾರಸಿ/ಕೈತೋಟಗಳು, ತರಕಾರಿ, ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು ಹಾಗೂ ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಇತರೆ ಪೂರಕ ಕಲೆಗೆ ಪ್ರದರ್ಶನದಲ್ಲಿ ಭಾಗವಹಿಸುವ ಆಸಕ್ತರು, ಅರ್ಜಿಗಳನ್ನು ತೋಟಗಾರಿಕೆ ಜಂಟಿ ನಿರ್ದೇಶಕರು (ಯೊಜನೆ), ಲಾಲ್ ಬಾಗ್, ಬೆಂಗಳೂರು ಇವರಿಂದ ಪಡೆದು ಆಗಸ್ಟ್ 01 ರಿಂದ 05 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಈ ಪ್ರದರ್ಶನದಲ್ಲಿ ಭಾಗವಹಿಸುವ ಆಸಕ್ತರಿಗೆ ಸ್ಪರ್ಧೆಯನ್ನು 2025ರ ಆಗಸ್ಟ್ 09 ರಂದು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ತಾರಕೇಶ್ವರಿ. ಕೆ. ಆರ್. ಮೊಬೈಲ್ ದೂರವಾಣಿ ಸಂಖ್ಯೆ 8497048733 ಅಥವಾ ಪುಷ್ಪಲತಾ ಎಂ. ಮೊಬೈಲ್ ದೂರವಾಣಿ ಸಂಖ್ಯೆ 890459212 ಇವರುಗಳನ್ನು ಸಂಪರ್ಕಿಸಬಹುದು.
ವಿವಿಧ ಅಲಂಕಾರಿಕ ತೋಟಗಳ ಸ್ಪರ್ಧೆ/ಕುಂಡದಲ್ಲಿ ಬೆಳೆದ ಗಿಡಗಳ ಸ್ಪರ್ಧೆ ಪ್ರದರ್ಶನದಲ್ಲಿ ಭಾಗವಹಿಸುವ ಆಸಕ್ತರು, ಅರ್ಜಿಗಳನ್ನು ತೋಟಗಾರಿಕೆ ಜಂಟಿ ನಿರ್ದೇಶಕರು (ತೋಟದ ಬೆಳೆಗಳು), ಲಾಲ್ಬಾಗ್, ಬೆಂಗಳೂರು ಇವರಿಂದ ಪಡೆದು ಜುಲೈ 17 ರಿಂದ 28ರೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರ ವೈ.ಸಿ ಮೊಬೈಲ್ ದೂರವಾಣಿ ಸಂಖ್ಯೆ 9845549545 ಅಥವಾ ನವೀನ್ ಕುಮಾರ್, ಮೊಬೈಲ್ ದೂರವಾಣಿ ಸಂಖ್ಯೆ 9844199867 ಇವರುಗಳನ್ನು ಸಂಪರ್ಕಿಸಬಹುದು.
ಇಲಾಖಾ ಮಳಿಗೆಗಳ ಹಂಚಿಕೆಗೆ ಸಂಬಂಧಿಸಿದಂತೆ ಭಾಗವಹಿಸುವ ಆಸಕ್ತರು, ಅರ್ಜಿಗಳನ್ನು ತೋಟಗಾರಿಕಾ ಅಪರ ನಿರ್ದೇಶಕರು, (ಹಣ್ಣುಗಳು) ಲಾಲ್ಬಾಗ್, ಬೆಂಗಳೂರು ಇವರಿಂದ ಪಡೆದು ಜುಲೈ 21 ರಿಂದ 25 ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶೃತಿ ಟಿ. ನಾಯಕ್, ಮೊಬೈಲ್ ದೂರವಾಣಿ ಸಂಖ್ಯೆ 9036986445 ಅಥವಾ ಪ್ರಮೋದ್, ಮೊಬೈಲ್ ದೂರವಾಣಿ ಸಂಖ್ಯೆ 8050592016 ಅಥವಾ ಉಮಾ, ಮೊಬೈಲ್ ದೂರವಾಣಿ ಸಂಖ್ಯೆ 9008094261 ಇವರುಗಳನ್ನು ಸಂಪರ್ಕಿಸಬಹುದು ಎಂದು ಲಾಲ್ಬಾಗ್ ಸಸ್ಯತೋಟ ತೋಟಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.