ಬೆಂಗಳೂರು: ಜೈನ ಧರ್ಮ, ಬುದ್ದನ ವಿಚಾರಧಾರೆಗಳನ್ನ ಜನರು ಅಳವಡಿಸಿಕೊಳ್ಳಬೇಕು, ಈ ಮೂಲಕ ಜೈನ ಧರ್ಮವನ್ನು ಪಾಲನೆ ಮಾಡಬೇಕು ಎಂದು ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್ ಸಂದೇಶ ಸಾರಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಮಹಾವೀರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೈನ ಸಮಾಜದ ತತ್ವಗಳು, ಸಿದ್ಧಾಂತಗಳನ್ನು ನಾಡಿನ ಎಲ್ಲರೂ ಅಳವಡಿಸಿಕೊಳ್ಳಬೇಕು. ಅಹಿಂಸಾ ಸಂಸ್ಕೃತಿ ಪಾಲನೆ ಮಾಡಬೇಕು, ಆಗ ರಾಮ ರಾಜ್ಯವಾಗುತ್ತದೆ ಎಂದರು. ಜೈನ ಸಮಾಜದವರು ರಾಜಕೀಯವಾಗಿ ಬಹಳ ಕಡಿಮೆ ಇದ್ದಾರೆ, ಅದರಲ್ಲೂ ಕೇಂದ್ರದಲ್ಲಿ ಇಲ್ಲವೇ ಇಲ್ಲ, ನಾನೊಬ್ಬನೇ ಇರುವುದು ಎಂದರು. ಅದೆಲ್ಲ ಪ್ರಧಾನಮಂತ್ರಿಗಳ ಕೃಪೆ ಎಂದರು.
ಕರ್ನಾಟಕದಲ್ಲಿ ಜೈನ್ ಸಮಾಜದಿಂದ ಕೇಂದ್ರಕ್ಕೆ ಆಯ್ಕೆಯಾಗುವುದು ಅದರಲ್ಲೂ ರಾಜ್ಯ,ಲೋಕಸಭೆಗೆ ಆಯ್ಕೆಯಾಗಬೇಕಾಗಿದೆ, ಈ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾಗಿದೆ. ಕೇವಲ ಇಬ್ಬರು ಮೂವರು ಮಾತ್ರ ಇದ್ದಾರೆ, ಇದು ಸಾಲದು ಎಂದರು.
ರಾಜಕೀಯ ಹಿತಾಸಕ್ತಿಗಳೇ ಬೇರೆ, ಜೈನ ಸಮಾಜದ ಸಿದ್ಧಾಂತಗಳೇ ಬೇರೆ ಹೀಗಾಗಿ ನಾಡಿನೆಲ್ಲೆಡೆ ಸಂದೇಶ ಸಾರುವ ಕೆಲಸವಾಗಬೇಕು, ಅಹಿಂಸಾ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಶಿವರಾಜ್ ತಂಗಡಗಿ ಮಾತನಾಡಿ, ಜೈನ ಧರ್ಮ ಶಾಂತಿ ಸಂದೇಶ ಕೊಡುವ ಧರ್ಮವಾಗಿದೆ, ಸಮಾಜದಲ್ಲಿ ಸೇವೆ ಮಾಡಿದವರಿಗೆ ಜೈನ್ ಸಮಾಜದಿಂದ ಪ್ರಶಸ್ತಿ ಕೊಡುವ ಕೆಲಸವನ್ನು ಮಾಡಲಾಗಿದೆ ಅದು ಸರ್ಕಾರದ ಮಟ್ಟದಲ್ಲಿ ನಡೆಯಲಿದೆ, ಪ್ರಶಸ್ತಿಯು 10 ಲಕ್ಷ ಇದೆ,
ಜಯಂತಿಗಳು ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಾಗಿದೆ, ಧರ್ಮಗಳನ್ನು ಉಳಿಸುವ ಬೆಳೆಸುವ ಕೆಲಸ ಮಾಡಬೇಕು. ಕಾಂಗ್ರೆಸ್ ಕಾಲದಲ್ಲಿ ಎಲ್ಲಾ ರೀತಿಯಿಂದಲು ಕೆಲಸ ಮಾಡಲಾಗಿದೆ. ಅಂಬೇಡ್ಕರ್, ಗಾಂಧೀಜಿ, ಬಸವಣ್ಣ, ಕನಕದಾಸರು, ಸಮಾಜಕ್ಕೆ ಏನು ಮಾಡಿದರೂ ಎಂಬುದರ ಬಗ್ಗೆ ಚರ್ಚೆಗಳು ನಡೆಯಬೇಕು, ದೇಶಕ್ಕೆ ಸಂದೇಶ ಸಾರುವ ಕೆಲಸ ಮಾಡಬೇಕು ಎಂದರು.
ಸಾಂಖ್ಯಿಕ ಸಚಿವ ಡಿ ಸುಧಾಕರ್ ಮಾತನಾಡಿ, ದೊಡ್ಡ ಮಟ್ಟದಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಸರ್ಕಾರ ಸಮುದಾಯಕ್ಕೆ ಅಂದರೆ 2020,23 ನಲ್ಲಿ 50 ಕೋಟಿ, 2023,24 ನಲ್ಲಿ 80 ಕೋಟಿ, 2025,26 ರ ಅವಧಿಗೆ 100 ಅನುದಾನ ಮೀಸಲಿಡುವ ಮೂಲಕ ಸಮಾಜಕ್ಕೆ ಒಳ್ಳೆ ಕೆಲಸ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ 200 ಕೋಟಿಯಷ್ಟು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಬಹಳಷ್ಟು ಹಣವನ್ನು ಸಮುದಾಯಗಳಿಗೆ ಬಳಸಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಅನುದಾನವನ್ನು ರಾಜ್ಯದಲ್ಲಿರುವ ಜೈನ ಬಸದಿಗಳನ್ನು ಅಭಿವೃದ್ಧಿ ಮಾಡಲು ಸಮಾಜದವರು ಬಳಸಿಕೊಳ್ಳಬೇಕು, ಅದರಲ್ಲೂ ಶಿತಿಲೀಕರಣಗೊಂಡಿರುವ ಬಸದಿಗಳು ಉತ್ತರ ಕರ್ನಾಟಕದಲ್ಲಿ ಇವೆ ನಾನು ಪ್ರವಾಸಕ್ಕೆ ತೆರಳಿದಾಗ ಹೆಚ್ಚು ನನ್ನ ಗಮನಕ್ಕೆ ಬಂದಿವೆ. ಅದನ್ನು ಅಭಿವೃದ್ಧಿ ಮಾಡಿ ಎಂದು ಸಮಾಜಕ್ಕೆ ತಿಳಿಸಿದರು.
ಜೈನ ಸಮಾಜದವರನ್ನು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಜೈನರು ಬಹುತೇಕವಾಗಿ ಬಿಜೆಪಿಗೆ ಹೆಚ್ಚು ಬೆಂಬಲ ನೀಡುತ್ತಿದ್ದಾರೆ ಎಂಬುದು ಎಲ್ಲೆಡೆ ತಪ್ಪು ಕಲ್ಪನೆ ಹರಡಿದೆ, ಹೀಗಾಗಿ ಯಾವುದೇ ಸಹಾಯ, ಸಹಕಾರ ಸರಕಾರದಿಂದ ಆಗುತ್ತಿಲ್ಲ, ಅದನ್ನು ಸಿಎಂ ಸಿದ್ದರಾಮಯ್ಯ ಸೂಕ್ಷ್ಮವಾಗಿ ಪರಿಗಣಿಸಿ ಜೈನ್ ಸಮಾಜದವರಿಗೆ ಅನುಕೂಲವಾಗಲೆಂದು ತಿಳಿಸಿದರು.
ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಶ್ರೀಕ್ಷೇತ್ರ ಸಿಂಹನಗದ್ದೆ ಜೈನ ಮಠ, ನರಸಿಂಹರಾಜಪುರ ಅವರು ಮಾತನಾಡಿ, ಭಗವಾನ್ ಮಹಾವೀರ ಜೈನ್ ಅವರು ಆಡಳಿತದಲ್ಲಿ ಸಾಕಷ್ಟು ಸುಖ,ಸಂಪತ್ತು ವೈಭೋಗದಿಂದ ಬೆಳೆದು ಬಂದವರು,ಆದರೆ ಅವೆಲ್ಲವನ್ನೂ ಬಿಟ್ಟು ತ್ಯಾಗದ ಜೀವನಕ್ಕೆ ತಾಯಿಯ ಮಾತನ್ನು ಮೀರಿ ಬಂದು ಸಾಕಷ್ಟು ಸೇವೆ ಮಾಡಿದವರು. ಸರ್ಕಾರದ ಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜೈನ ಸಮಾಜದಲ್ಲಿ ಆಮೂಲಾಗ್ರ ಸೇವೆ ಮಾಡಿದವರಿಗೆ ಪ್ರಶಸ್ತಿ ನೀಡುವ ಕಾಯಕಕ್ಕೆ ಮುಂದಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಜೈನ ರಾಜ ಮನೆತನಗಳು ಆಡಳಿತ ಮಾಡಿರುವ ಕೆಲಸಗಳು ಇಂದಿಗೂ ಕುರುಹುಗಳಿವೆ.
ಜೈನ ರಾಜ ಮನೆತನಗಳು ರಾಜ್ಯದಲ್ಲಿ ಏನೆಲ್ಲಾ ಕೆಲಸ ಮಾಡಿದ್ದಾರೆ, ಕನ್ನಡ ನಾಡನ್ನು ಜೈನರು ಕಟ್ಟಿದ್ದಾರೆ. ಕನ್ಯಾಕುಮಾರಿಯಿಂದ ಪಾಕಿಸ್ತಾನದ ವರೆಗೆ ಜೈನರು ಆಳ್ವಿಕೆ ಮಾಡಿದ್ದಾರೆ. ಕೇವಲ ಜೈನ ಪುರುಷರಲ್ಲದೆ ಮಹಿಳೆಯರು ಕೊಡುಗೆ ಕೊಟ್ಟಿದ್ದಾರೆ ಅವರೆಲ್ಲರೂ ಮಹನೀಯರ ಆಗಿದ್ದಾರೆ. ನಾಡಿಗೆ ಹಲವು ರೀತಿಯ ಕೊಡುಗೆಗಳು ಇವೆ. ಮಹಾವೀರರು ಅಹಿಂಸೆಯ ಮೂಲಕ ರಾಜ್ಯ ದೇಶದಲ್ಲಿ ಆಳ್ವಿಕೆಯಲ್ಲಿ ಮಾಡಿದ್ದಾರೆ.
ರಾಜರ ಆಡಳಿತದಲ್ಲಿ ರಾಜಾಶ್ರಯ ಬಹಳ ಮುಖ್ಯವಾಗಿದೆ ಅದೇ ರೀತಿ ಈಗಿನ ರಾಜಾಶ್ರಾಯ ಮಾಡುತ್ತಿರುವುದು ಸಿಎಂ ಸಿದ್ದರಾಮಯ್ಯ, ಅವರು ಯಾವಕಾಲದಲ್ಲಿ ರಾಜರಾಗಿದ್ದಾರೋ ಗೊತ್ತಿಲ್ಲ, ಆದರೆ ಮಹಾವೀರ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಸಾಂಖ್ಯಿಕ ಸಚಿವ ಸುಧಾಕರ್, ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಶ್ರೀಕ್ಷೇತ್ರ ಸಿಂಹನಗದ್ದೆ ಜೈನ ಮಠ, ನರಸಿಂಹರಾಜಪುರ , ಪತ್ರಕರ್ತ ಪದ್ಮರಾಜ ದಂಡಾವತಿ, ಜೈನ್ ಸಮಾಜದ ಅಧ್ಯಕ್ಷರು ಎಸ್ ಜಿತೇಂದ್ರ ಕುಮಾರ್, ಇಲಾಖೆ ನಿರ್ದೇಶಕರಾದ ಗಾಯತ್ರಿ ಉಪಸ್ಥಿತರಿದ್ದರು.