ದೇವನಹಳ್ಳಿ: ಅವತಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಕಬಡ್ಡಿ ಪಂದ್ಯಾ- ವಳಿಯಲ್ಲಿ 17 ವರ್ಷದ ಬಾಲಕಿಯರ ವಿಭಾಗದಲ್ಲಿ ಚನ್ನಹಳ್ಳಿ ಸರ್ಕಾರಿ ಪ್ರೌಢ ಶಾಲೆ ತಂಡ ಹಾಗೂ 14 ವರ್ಷದ ಬಾಲಕಿಯರ ವಿಭಾಗದಲ್ಲಿ ಬೂದಿಗೆರೆಯ ಶಾರದಾ ಶಾಲೆ ತಂಡ ಜಯ ಸಾಧಿಸಿ, ಪ್ರಥಮ ಸ್ಥಾನ ಪಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ಕಬಡಿ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಬೆಳಗ್ಗಿನಿಂದಲೇ ರೋಚಕ ಪಂದ್ಯ ವೀಕ್ಷಿಸಲು ಹಿರಿಯ ವಿದ್ಯಾರ್ಥಿಗಳು, ತಾಲ್ಲೂಕಿನ ಕಬಡ್ಡಿಪಟುಗಳು ಮತ್ತು ಮುಖಂಡರು ಮೈದಾನದಲ್ಲಿ ನೆರದಿದ್ದರು.
17 ವರ್ಷದ ಬಾಲಕಿಯರ ವಿಭಾಗದಲ್ಲಿ ಚನ್ನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ತಂಡವೂ ಪ್ರಥಮ, ಆವತಿಯ ಗ್ರಾಮಾಂತರ ಪ್ರೌಢ ಶಾಲೆಯೂ -ದ್ವಿತೀಯ, ಬಾಲಕರ ವಿಭಾಗದಲ್ಲಿ ಆವತಿಯ ಗ್ರಾಮಾಂತರ ಪ್ರೌಢ ಶಾಲೆಯ ತಂಡ ಮೊದಲ ಸ್ಥಾನ, ಕುಂದಾಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯೂ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
14 ವರ್ಷದ ಬಾಲಕಿಯರ ವಿಭಾಗದಲ್ಲಿ ಬೂದಿಗೆರೆ ಗ್ರಾಮದ ಶ್ರೀ ಶಾರದಾ ಶಾಲೆಯೂ ಪ್ರಥಮ, ಅವತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕರ ವಿಭಾಗದಲ್ಲಿ ದೇವನಹಳ್ಳಿ ಪಟ್ಟಣದ ಸ್ಟರ್ಲಿಂಗ್ ಶಾಲೆ ಮೊದಲ ಸ್ಥಾನ, ಸೋಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ದ್ವಿತೀಯ ಸ್ಥಾನಕ್ಕೆ ಪಡೆದುಕೊಂಡಿದೆ.
ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವತಿ ಗ್ರಾ.ಪಂ ಸದಸ್ಯ ನರಸಪ್ಪ, ‘ಈ ಬಾರಿ ಎಲ್ಲ ಸರ್ಕಾರಿ ಶಾಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.ಇತರೇ ತಂಡದವರ ಕಠಿಣ ಪರಿಶ್ರಮ ಪಂದ್ಯದಲ್ಲಿ ಕಂಡಿತು. ತಾಲ್ಲೂಕು ಮಟ್ಟದಲ್ಲಿ ವಿಜೇತರಾದವರು ರಾಜ್ಯ, ರಾಷ್ಟ್ರ ಮಟ್ಟಕ್ಕೆ ತಲುಪುವ ಗುರಿ ಇಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಕಬ್ಬಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಅವತಿ ಗ್ರಾ.ಪಂ ಅಧ್ಯಕ್ಷೆ ಮುನಿರತ್ನಮ್ಮ, ಉಪಾಧ್ಯಕ್ಷೆ ಸೌಭಾಗ್ಯಮ್ಮ, ಸದಸ್ಯರಾದ ರತ್ನಮ್ಮ, ಪ್ರೇಮಮ್ಮ, ಭವ್ಯ, ವಿಭಾಗದಲ್ಲಿಯೂ ಅವತಿ ಮುಖಂಡರಾದ ಅವತಿ ವೆಂಕಟೇಶ್, ನಿವೃತ್ತ ದೈಹಿಕ ಶಿಕ್ಷಕರಾದ ಚಂದ್ರಪ್ಪ, ಮುಖ್ಯ ಶಿಕ್ಷಕರಾದ ಲಕ್ಷ್ಮೀಕಾಂತ್, ತಾಲ್ಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಟಿ.ವೆಂಕಟೇಶ್, ಗ್ರಾಮ ಸಹಾಯಕ ಮಹೇಶ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ- ರಾದ ಚಂದ್ರಶೇಖರ್, ಮುಖಂಡರಾದ ನಾಗರಾಜು ಇದ್ದರು.