ಬೆಂಗಳೂರು: ಕನ್ನಡ, ಕರ್ನಾಟಕ ಎಂದ ಮೇಲೆ, ಧಕ್ಕೆ ಎದುರಾದರೆ ನಾಡಿನ ಸರ್ವರೂ ಎಲ್ಲರೂ ಎದ್ದು ನಿಲ್ಲಬೇಕು ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಾಡಿನ ಜನರಿಗೆ ಕರೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡ ಜಾಗೃತಿ ವೇದಿಕೆಯ 30 ನೇ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಸರ್ಕಾರ ಎಂದರೆ ರಾಜಕೀಯ, ಸರ್ಕಾರ ಬೇಕಿಲ್ಲ, ಸರ್ಕಾರ ನಂಬಿ ಏನು ಮಾಡಲು ಆಗಲ್ಲ ಕರ್ನಾಟಕ ಏಕೀಕರಣ 50 ವರ್ಷ ಆದರೂ ಅವರಿಗೆ ಗೊತ್ತಿಲ್ಲ, ಕನ್ನಡ ಪರ ಸಂಘಟನೆಗಳು ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳದಲ್ಲಿ ಕನ್ನಡ ಚಿತ್ರಗಳು ಪ್ರದರ್ಶನಗಲ್ಲ, ಅಲ್ಲಿ ಅವರದ್ದೇ ಭಾಷೆಗೆ ಹೆಚ್ಚು ಹೊತ್ತು ನೀಡುತ್ತಾರೆ.
ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ಅವಕಾಶ ನೀಡಬಾರದು,ಇಲ್ಲದಿದ್ದರೆ ಎಲ್ಲೋ ಒಂದುಕಡೆ ಅಪಾಯಕ್ಕೆ ಹೋಗುತ್ತದೆ. ಫೇ 11ರಂದು ಅತ್ತಿಬೆಲೆ ಗಡಿಯಲ್ಲಿ ಕನ್ನಡ ಉಳಿವಿಗೆ ಹೋರಾಟದ ಎಚ್ಚರಿಕೆ, ಬುಧವಾರ ಕನ್ನಡ ಸುಗ್ರೀವಾಜ್ಞೆಗೆ ಅನುಮತಿ ಕೊಡಬೇಕೆಂದು ಒತ್ತಾಯಿಸಿ ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ವಾಟಾಳ್ ಎಚ್ಚರಿಕೆ ನೀಡಿದರು.
ರಾಜ ಕುಮಾರ್ ಸಂಘದ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿ,ಕನ್ನಡ ಪರ ಪ್ರತಿಯೊಂದು ವಿಚಾರದಲ್ಲೂ, ಹೋರಾಟಗಳಲ್ಲಿ ಕೈಜೋಡಿಸಿರುವವರು ಮಂಜುನಾಥ್ ದೇವ ಅವರು, ಕನ್ನಡದ ಬಗ್ಗೆ ಸಂಭ್ರಮ ಆಚರಣೆ ಮಾಡಬೇಕಾದರೆ ಎಲ್ಲೋ ಒಂದು ಕಡೆ ಕನ್ನಡ ಮರೆಯುತ್ತಿರುವುದು ಅನ್ನಿಸುತ್ತಿದೆ. ಕನ್ನಡ ಏಕಿಕರ್ಣವಾಗಿ 50 ವರ್ಷ ನಂತರ ರಾಜ್ಯದಲ್ಲಿ ಏನೆಲ್ಲಾ ಬೆಳವಣಿಗೆ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
1947 ರಿಂದ ಆಡಳಿತ ಮಾಡಿಕೊಂಡು ಬಂದಿರುವ ರಾಜಕೀಯ ನಾಯಕರು ಇದಕ್ಕೆ ನೇರ ಹೊಣೆಯಾಗುತ್ತರೆ, ಕೇಂದ್ರದಲ್ಲಿ 28 ಜನ ಸಂಸತ್ ಸದಸ್ಯರು ಸಂಸತ್ ನಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಗೊತ್ತು. ಬೆಂಗಳೂರು ನಗರದಲ್ಲಿ ಕನ್ನಡ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಕರ್ನಾಟಕದಲ್ಲಿ ಕನ್ನಡ ಚಿತ್ರರಂಗ ಹರಾಜಾಗುತ್ತಿದೆ. ಪರಭಾಷೆಗಳ ಕನ್ನಡ ಮೇಲೆ ದಬ್ಬಾಳಿಕೆ ಮಾಡುತ್ತಿವೆ. ನಾಡಿನಲ್ಲಿ ಎಲ್ಲವನ್ನೂ ಉಳಿಸಿಕೊಳಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳಸಾಬಂಡೂರಿ, ಮೇಕೆದಾಟು ಯೋಜನೆ, ಕಾವೇರಿ ನೀರು ಹಂಚಿಕೆ ವಿಚಾರವಾಗಿ,ನಾಡಿನಲ್ಲಿ ಯಾರು ನಿಜವಾಗಿ ಹೋರಾಟದಲ್ಲಿ ಯಾರು ಮಾಡುತ್ತಾರೋ ಅವರ ಜೊತೆ ಕೈಜೋಡಿಸಿ ಎಂದರು. ಕನ್ನಡ ಭಾಷೆ, ನಾಡು ನುಡಿ,ಜಲ ವಿಚಾರವಾಗಿ ಯಾರು ರಾಜಿ ಮಾಡಿಕೊಳ್ಳಬೇಡಿ ಎಂದರು.
ಹೋರಾಟಗಾರ ವಾಟಾಳ್ ನಾಗರಾಜ್, ಇತಿಹಾಸ ತಜ್ಞ ನಂಜೆ ರಾಜ ಅರುಸ್, ನಟ ದ್ರುವ ಸರ್ಜಾ, ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಆನೇಕಲ್ ಶಾಸಕರಾದ ಶಿವಣ್ಣ, ಸಚಿವ ರಾಮಲಿಂಗಾರೆಡ್ಡಿ ಭಾಗಿ. ಇದೇ ವೇಳೆ ವೇದಿಕೆಗೆ 30 ವರ್ಷ ತುಂಬಿದ ಹಿನ್ನೆಲೆ ಗಣ್ಯರಿಗೆ ವೇದಿಕೆ ವತಿಯಿಂದ ಅಭಿನಂದಿಸಲಾಯಿತು.