ಬೆಂಗಳೂರು: ಗಾಂಧಿನಗರದಲ್ಲಿರುವ ಅತಿ ದೊಡ್ಡ ಪುಸ್ತಕ ಬಂಡಾರ ಸಪ್ನ ಬುಕ್ ಹೌಸ್ ನಲ್ಲಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಉಚಿತ ಪುಸ್ತಕ ನೀಡುವ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ ಅವರು ಉದ್ಘಾಟಿಸಿದರು. ರಿಯಾಯಿತಿ ಪುಸ್ತಕ ಜಾತ್ರೆಗೆ ಸಪ್ತಮಿಗೌಡ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಸಪ್ತಮಿ ಗೌಡ,ಕನ್ನಡ ರಾಜ್ಯೋತ್ಸವ ಹಿನ್ನೆಲೆ ಸಂಸ್ಥೆಯಲ್ಲಿ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮಾಡುತ್ತಿರುವುದು ಸಂತೋಷ ತಂದಿದೆ, ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವದಲ್ಲಿ ಸಪ್ನ ಬುಕ್ ಹೌಸ್ ನಿಂದ ಓದುಗರಿಗೆ, ಕನ್ನಡ ಭಾಷಿಕರಿಗೆ, ಸಾಹಿತಿಗಳಿಗೆ ಅನೋಕೂಲವಾಗಲು ಹುವಿಶೇಷ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.
ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಸಪ್ನ ಪುಸ್ತಕ ಬಂಡಾರವು ಕನ್ನಡದ ಪ್ರೇಮವನ್ನು ಮೆಲುಕು ಹಾಕುತ್ತ, ಕನ್ನಡ ಶ್ರೀಮಂತಿಕೆಯನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತದೆ, ಕನ್ನಡಿಗರು ಪುಸ್ತಕಗಳನ್ನು ಕೊಂಡು ಓದಬೇಕು, ಆಗಿದ್ದಾಗ ಮಾತ್ರ ಸಾಹಿತಿಗಳಿಗೆ, ಬರಹಗಾರರಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತದೆ ಎಂದರು.
ನಂತರ ಸಪ್ನ ಸಂಸ್ಥೆಯ ಮುಖ್ಯಸ್ಥ ನಿತಿನ್ ಶಾ ಅವರು ಮಾತನಾಡಿ, ಶಾ ಮೂಲತಃ ಗುಜರಾತಿ ಕನ್ನಡ ವನ್ನೂ ಎಲ್ಲರೂ ಕೊಂಡು ಓದಬೇಕು, ಕನ್ನಡ ಭಾಷೆ ಬಗ್ಗೆ ಅಭಿಮಾನ ಇಟ್ಟಿಕೊಂಡು ನಾಡು ನುಡಿ, ಸಾಹಿತ್ಯ ಬಗ್ಗೆ ಅರಿತುಕೊಳ್ಳಬೇಕು ಎಂದರು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ದಿನವಿಡೀ ಒಬ್ಬರಿಗೆ ಒಂದು ಪುಸ್ತಕವನ್ನು ಉಚಿತವಾಗಿ ನೀಡಲಾಯಿತು, ನವೆಂಬರ್ ನಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕಗಳು ದೊರೆಯುತ್ತವೆ ಎಂದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಿಯಾಯಿತಿ ಮೇಳಕ್ಕೆ ಚಾಲನೆ ನೀಡಲಾಯಿತು, ನವೆಂಬರ್ ನಲ್ಲಿ ವಿಶೇಷ ರಿಯಾಯಿತಿ ದೊರೆಯುತ್ತದೆ, ಅಲ್ಲದೆ ವರ್ಷದ ಎಲ್ಲಾ ದಿನಗಳಲ್ಲೂ ರಿಯಾಯಿತಿ ಇರುತ್ತದೆ. ಇನ್ನು ಇದೇವೇಳೆ ಕನ್ನಡ ಬರಹಗಾರರ ಸಮ್ಮಿಲನವೇ ಸಹಾ ನಡೆಯಿತು.
ಡುಂಡಿರಾಜು, ಗುಂಡೂರಾವ್ ಅವರು ಕನ್ನಡದ ವಿಚಾರಗಳ ಬಗ್ಗೆ ಸಾಹಿತ್ಯದ ಮೂಲಕ ಹಾಸ್ಯ ಚಟಾಕಿ ಸಿಡಿಸಿದರು. ಎಲ್ಲರಿಗೂ ಕನ್ನಡ, ಭಾಷೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನೆರೆದಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದರು.ಬರಹಗಾರರು, ಸಾಹಿತಿಗಳು, ಕವಿಗಳಿಂದ ಕೆಲವೊಂದು ಕನ್ನಡದ ಬಗ್ಗೆ ಮೆಲುಕು ಹಾಕಿದರು.
ನಾಡೋಜ ಕಮಲ ಹಂಪನಾ, ದೊಡ್ಡರಂಗೇಗೌಡ, ಮಲ್ಲೇಪುರಂ ಜಿ ವೆಂಕಟೇಶ್, ಜೋಗಿ,ವಿಶ್ವೇಶ್ವರ ಭಟ್,ನಿತಿನ್ ಶಾ, ಡುಂಡಿರಾಜ್, ವಾಚಾ ಚನ್ನೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್, ಸಪ್ತಮಿ ಗೌಡ, ದೊಡ್ಡೇ ಗೌಡ, ಹಲವು ಸಾಹಿತಿಗಳು,ಯುವ ಬರಹಗಾರರು ಉಪಸ್ಥಿತರಿದ್ದರು.