ಬೆಂಗಳೂರು : ನಾಡಿನ ಬಗ್ಗೆ ದೇಶದ ಬಗ್ಗೆ ತಿಳಿದುಕೊಳ್ಳದವರು ನಾಡ ದ್ರೋಹಿಗಳು.ಮಕ್ಕಳಿಗೆ ಇಂಗ್ಲಿಷ್ ವ್ಯಾಮೋಹದಿಂದ ದೂರ ಇರಿಸಿ ಕನ್ನಡ ಬಗ್ಗೆ ಹೆಚ್ಚು ಆಸಕ್ತಿ ವಹಿಸುವ ಕೆಲಸವನ್ನು ಪೋಷಕರು ಮಾಡಬೇಕು ಆಗ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ಎಂದು ನಾಡೋಜ ಡಾ.ಮನುಬಳಿಗಾರ್ ತಿಳಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯ ಸಮಿತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಉಳಿಯಬೇಕಾದರೆ ಬಿಎಂಟಿಸಿ ಸಂಸ್ಥೆಯಲ್ಲಿ ನೌಕರರು ಕನ್ನಡ ಕಾರ್ಯಕ್ರಮಗಳನ್ನು ಮಾಡಬೇಕು, ಮಕ್ಕಳಿಗೆ ಕನ್ನಡ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳಬೇಕು, ಅದರಲ್ಲೂ ಪ್ರಾಂತೀಯ, ಪ್ರಾದೇಶಿಕ ಭಾಷೆಗಳನ್ನು ಮೂಲೆಗುಂಪು ಮಾಡಬಾರದು, ಬೇರೆ ಭಾಷೆಗಳು ಎಸ್ಟು ಸಮೃದ್ಧವಾಗಿವೆ ಎಂಬುದನ್ನು ತಿಳಿಯಬೇಕು ಎಂದರು.
ವಚನಕಾರರು, ತತ್ವಪದಕಾರರು, ದಾಸ ಸಾಹಿತ್ಯ,ಸಂಸ್ಕೃತ, ಬಗ್ಗೆ ಎಲ್ಲವನ್ನೂ ತಿಳಿಯಬೇಕು, ಪುರಾತನ ಕಾಲದಲ್ಲಿಯೇ ಕನ್ನಡ ಭಾಷೆಯ ಬಗ್ಗೆ ತಿಳಿಸುವ ಕೆಲಸ ಮಾಡಿದರು, ಅಂದರೆ ಕನ್ನಡ ಬಗ್ಗೆ ಇರುವ ಕಂಪನ್ನ, ಶಕ್ತಿಯನ್ನು ತಿಳಿಸುವ ಕೆಲಸ ಮಾಡಿದರು. ಅದನ್ನು ತಿಳಿದುಕೊಳ್ಳಿ ಎಂದು ಅಂದೇ ತಿಳಿ ಹೇಳಿದರು. ನಾಡಿನ ಬಗ್ಗೆ ದೇಶದ ಬಗ್ಗೆ ತಿಳಿದುಕೊಳ್ಳದವರು ಅವರು ನಾಡ ದ್ರೋಹಿಗಳು. ಬಿಎಂಟಿಸಿ , ಕೆಎಸ್ಆರ್ಟಿಸಿ ಅವರು 40 ವರ್ಷಗಳಿಂದ ಕನ್ನಡ ಕಂಪನ್ನು ಬೆಳೆಸುತ್ತಾ ಬಂದಿರುವುದು ಶ್ಲಾಘನೀಯ . ಕನ್ನಡ ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಬಿಎಂಟಿಸಿ ಪಾತ್ರ ಬಹಳ ದೊಡ್ಡದಿದೆ ಎಂದು ತಿಳಿಸಿದರು.
ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್. ಮಾತನಾಡಿ, ನಾನು ಜನಪದ ಕ್ಷೇತ್ರದಲ್ಲಿ ಕೇವಲ ಸಾಸಿವೆ ಕಾಳಿನಷ್ಟೇ ತೊಡಗಿಸಿಕೊಂಡಿದ್ದೇನೆ, ಆದರೆ ಸಂಧ್ಯಾ ಮೇಡಂ ಸಾಹಿತ್ಯ ಹಾಗು ಜನಪದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಾಡೋಜ ಮನುಬಳಿಗಾರ್ ಅವರು ನನಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬಿಎಂಟಿಸಿ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ.
ಮಂಟೇಸ್ವಾಮಿ, ಕೈವಾರ ತಾತಯ್ಯ, ಮಲೆಮಹದೇಶ್ವರ , ನುಡಿಯ ಗುಡಿಗಳಾಗಿದ್ದಾರೆ. ಜನಪದ ಶಕ್ತಿ ವಚನ ಚಳುವಳಿಯಾಗಿ ಪರಿವರ್ತನೆ ಆಗಿದೆ. ತದನಂತರ ಆಧುನಿಕ ಕನ್ನಡ ಸಾಹಿತ್ಯವಾಗಿ ಬಂದಿರುವುದನ್ನು ನೋಡಬಹುದು, ಅದರಲ್ಲಿ ಕುವೆಂಪು ಅವರು ಹೊಸ ಭಾಷ್ಯ ಬರೆದರು. ಕನ್ನಡ ಬಾಷೆ, ಸಂಸ್ಕೃತಿ,ಆಚಾರ, ವಿಚಾರ ಈ ನೆಲದ ಸಂಸ್ಕೃತಿಯಾಗಿದೆ. ನಮ್ಮ ನಾಡು ನುಡಿಗೆ ಸಾಕಷ್ಟು ಇತಿಹಾಸವಿದೆ. ನಾವೆಲ್ಲರೂ ಕನ್ನಡದ ಕಂಪನ್ನು ಬೆಳೆಸಿ,ಉಳಿಸುವ ಕೆಲಸವನ್ನು ಮಾಡಬೇಕಾಗಿದೆ. ಇದೆ ವೇಳೆ ಕೆಲವು ಜನಪದ ಹಾಡುಗಳನ್ನು ಸಭಿಕರಿಗೆ ಉಣಬಡಿಸಿದರು.
ಹಿರಿಯ ಸಾಹಿತಿ ಸಂಧ್ಯರೆಡ್ಡಿ ಮಾತನಾಡಿ, ಬಿಎಂಟಿಸಿ ಸಂಸ್ಥೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಭವಹಿಸಲು ಬಹಳ ಸಂತೋಷವಾಗಿದೆ. ನಾಡಿನ ಜನತೆಗೆ ನಿತ್ಯ ಸೇವೆ ಕೊಡುವ ಸಂಸ್ಥೆ ಬಿಎಂಟಿಸಿ ನಮ್ಮ ಹೆಮ್ಮೆಯಾಗಿದೆ. ಸರ್ಕಾರಿ ಬಸ್ ನಲ್ಲಿ ಕುಳಿತು ಸಂಚಾರ ಮಾಡಿದರೆ ಒಂದು ಕವಿತೆ, ಸಾಹಿತ್ಯ ಹುಟ್ಟುತ್ತದೆ. ಬಸ್ ನಲ್ಲಿ ಸಂಚರಿಸುವಾಗ ಚಾಲಕರು, ನಿರ್ವಾಹಕರ ಮಧ್ಯೆ ಕೆಲವು ಸನ್ನೆಗಳು ಇರುತ್ತವೆ, ಅದನ್ನು ಜನರ ಮಧ್ಯೆ ಸೇರುತ್ತವೆ, ಅದೇ ರೀತಿ ಪ್ರಯಾಣಿಕರ ಜೊತೆ ಕೆಲವು ಸಾಹಿತ್ಯಕ ಮಾತುಗಳು, ಕವನ, ಕವಿತೆಗಳ ಹುಟ್ಟುವ ಬಗ್ಗೆ ಮೇಲುಕುಹಾಕಿದರು. ಸರ್ಕಾರಿ ಸಾರಿಗೆಯಲ್ಲಿ ಪ್ರಯಾಣ ಮಾಡಿದರೆ ಸೃಜನ ಶೀಲ ಪ್ರತಿಭೆ ಬೆಳೆಯಲು ಸಹಕಾರಿಯಾಗುತ್ತದೆ.
ಬೆಂಗಳೂರಿನಲ್ಲಿ ಸಂಚರಿಸುವ ನಗರ ಸಾರಿಗೆಗಳಲ್ಲಿ ಸಾಕಷ್ಟು ಕನ್ನಡ ಪದಗಳು, ಸಾಹಿತ್ಯದ ಪದಗಳು, ಸಾಹಿತಿಗಳು ಹೆಸರುಗಳು, ತಿಂಡಿ ತಿನಿಸು, ಬಳಕೆಯಾಗುತ್ತಿವೆ. ಕನ್ನಡದ ಪದಗಳಿಗೆ ಈಗಿನ ಮಕ್ಕಳಿಗೆ ಇಂಗ್ಲಿಷ್ ನಲ್ಲಿ ಹೇಳಬೇಕಾದ ದುಸ್ಥಿತಿ ಬಂದೊದಗಿದೆ. ಮಕ್ಕಳಿಗೆ ಕನ್ನಡ ವಾತಾವರಣ ಸೃಷ್ಟಿಸುವುದು ಅನಿವಾರ್ಯವಾಗಿದೆ. ಪ್ರಸ್ತುತ ಇಂಗ್ಲಿಷ್ ನ ವ್ಯಾಮೋಹದಿಂದ ಕನ್ನಡ ಪದ ಸಂಪತ್ತು ಕ್ಷೀಣಿಸುತ್ತಿದೆ. ಕೇವಲ ಜಾನಪದವನ್ನು ಹಾಡುವ ಕೇಳುವ ಮೂಲಕ ಉಳಿಸುವುದಲ್ಲ ಸ್ಥಳೀಯವಾಗಿ ಕನ್ನಡ ಪದಗಳು, ಗ್ರಾಮ್ಯ ಪದ್ಗಳನ್ನು ಉಳಿಸುವ, ಬೆಳೆಸುವ ಕೆಲಸವಾಗಬೇಕು. ನಾಮಪಲಖಗಳ ಮೇಲೆ ಕನ್ನಡ ಪದಗಳ ಬಳಕೆಯಲ್ಲಿ ಸಾಕಷ್ಟು ದೋಷಗಳು ಇರುವುದನ್ನು ಕಾಣಬಹುದು. ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ,
ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಫ್ಯಾಕ್ಟರಿಗೆ ಹೋಗುವಾಗ ಬಿಎಂಟಿಸಿಯಲ್ಲಿ ಪ್ರಯಾಣ ಬೆಳೆಸಿದಾಗ ಅಂದಿನ ಆನುಭವಗಳನ್ನೂ ಮೆಲುಕು ಹಾಕಿದರು.
ಜಯನಗರ ಮಾಜಿ ಶಾಸಕಿ, ಹಾಗು ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಮಾತನಾಡಿ, ನಗರ ಸಾರಿಗೆ ನೌಕರರು ನಾಡಿನ , ಜನರು ಪ್ರತಿ ನಿತ್ಯ ಪ್ರಯಾಣಿಸುವ ನಿತ್ಯ ಸಂಜೀವಿನಿಯಾಗಿದೆ,. ಸಾರಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಾರಿಗೆ ಮಂತ್ರಿಗಳು ಈಡೇರಿಸುವ ಕೆಲಸವನ್ನು ಮಾಡುತ್ತಾರೆ. ಪ್ರತಿಯೊಬ್ಬ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ, ಅದನ್ನು ಗುರುತಿಸುವ ಕೆಲಸ ಮಾಡಬೇಕು.
ನಾನು ಸಹ ಪ್ರತಿಭಟನೆ ಮೂಲಕ ಬೆಳೆದು ಬಂದಿದ್ದೇನೆ. ನೌಕರರ ಮಕ್ಕಳು ಶಾಲೆಯಲ್ಲಿ ಹೆಚ್ಚು ಅಂಕ ತೆಗೆದುಕೊಂಡಿರುವು ಸಂತೋಷದ ವಿಚಾರ. ಸಾರಿಗೆಯಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕರ್ತವ್ಯವನ್ನು ಮಾಡುತ್ತಿದ್ದಾರೆ. ನಮ್ಮ ಬಾಷೆ ನಮಗೆ ಚಂದ, ನಮ್ಮ ಭಾಷೆ ಪ್ರಾಚೀನ ಭಾಷೆಯಾಗಿದೆ. ಅದನ್ನು ಉಳಿಸುವ ಕೆಲಸ ವಾಗಬೇಕಾಗಿದೆ ಎಂದರು.
ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ನಿರ್ದೇಶಕರಾದ ಅಬ್ದುಲ್ ಅಹದ್ ಅವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, 20 ವರ್ಷಗಳ ಸರ್ಕಾರಿ ಸೇವೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿರುವುದು ಇದೆ ಮೊದಲು ನೋಡುತ್ತಿದ್ದೇನೆ. ನಾಡಿನಲ್ಲಿ ಉಪ ಸಂಸ್ಕೃತಿ, ಉಪ ಭಾಷೆಗಳು ಇವೆ ಆದರೆ ಕನ್ನಡ ಮಾತ್ರ ಮಾತೃ ಭಾಷೆಯಾಗಿದೆ. ಕನ್ನಡ ಶಾಸ್ತ್ರೀಯ ಭಾಷೆ, ಮಕ್ಕಳಿಗೆ ಕನ್ನಡ ಬಿಟ್ಟು ಇಂಗ್ಲಿಷ್ ಮಾತನಾಡುವುದನ್ನು ಕಲಿಸಿದರೆ ಕನ್ನಡ ಸಂಸ್ಕೃತಿಕ ತನ ದಿವಾಳಿ ಆಗುತ್ತದೆ.
ಇಂಗ್ಲಿಷ್ ನಲ್ಲಿ ಪದ ಬಾಲ್ಕೆ ಎಸ್ಟು ಕೆಟ್ಟದಾಗಿರುತ್ತವೆ ಎಂದರೆ. ಅಂತಹ ಪದಗಳನ್ನು ತೆಗೆದರೆ ಸಿನಿಮಾ ನಡೆಯಲ್ಲ ಅನ್ನಿಸುತ್ತದೆ. ಕನ್ನಡ ಸಾಹಿತ್ಯದಲ್ಲಿ, ಜನಪದದಲ್ಲಿ, ವಚನದಲ್ಲಿ, ದಾಸ ಸಾಹಿತ್ಯದಲ್ಲಿ ಮಕ್ಕಳಿಗೆ ಕನ್ನಡ ಬಗ್ಗೆ ತಿಳಿಸುವ, ಓದಿಸುವ ಕೆಲಸ ಮಾಡಬೇಕು ಎಂದು ಕನ್ನಡ ವಿಚಾರಗಳ ಬಗ್ಗೆ ಮೆಲುಕು ಹಾಕಿದರು.
ಬಿಎಂಟಿಸಿ ಮಾಹಿತಿ ಹಾಗು ತಂತ್ರಜ್ಞಾನ ಇಲಾಖೆ ನಿರ್ದೇಶಕರಾದ ಶಿಲ್ಪಾ ಮಾತನಾಡಿ, ಮಕ್ಕಳು ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಗೌರವಿಶ್ವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡ ಜಾನಪದ ಗಾಯಕರನ್ನು ಗುರುತಿಸಿ ಅವರಿಗೆ ಗೌರವಿಸುವ ಕೆಲಸ ಸಮಿತಿ ಮಾಡುತ್ತಿದೆ. ಕೇವಲ ಕನ್ನಡ ಬಗ್ಗೆ ನಾಮಫಲಕ ಹಾಕುತ್ತೇವೆ ಆದರೆ ಭಾವನೆಗಳು ಇರುವುದಿಲ್ಲ. ಸಂಸ್ಥೆಯಲ್ಲಿ ಒಳ್ಳೆಯ ಗಾಯಕರು, ಕನ್ನಡ ಮಾತನಾಡುವವರು ಇದ್ದಾರೆ ಅವರನ್ನು ಗುರುತಿಸುವ ಕೆಲಸ ಮಾಡಬೇಕು ಎಂದರು. ಇನ್ನು ಹೆಚ್ಚಿನದಾಗಿ ಕನ್ನಡ ಬೆಳೆಸುವ , ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕು ಎಂದರು.
ಜನಪದ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಿದ ಖ್ಯಾತ ಜನಪದ ಗಾಯಕರು ಹಾಗು ಮಾಜಿ ಜನಪದ ಅಕಾಡೆಮಿಯ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ್ ಹಾಗು ಹಿರಿಯ ಸಾಹಿತಿ ಡಾ.ಸಂಧ್ಯಾ ರೆಡ್ಡಿ ಅವರನ್ನು ಸನ್ಮಾನಿಸುವ ಕೆಲಸ ಮಾಡಿದರು.
ಬಿಎಂಟಿವಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಘಟಕಗಳ ಕಾರ್ಮಿಕರ ಮಕ್ಕಳು sslc, puc ಯಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅದೇ ರೀತಿ ಬಿಎಂಟಿಸಿಯಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ನೂರಾರು ನೌಕರರಿಗೆ ಕನ್ನಡ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗ, ಕಾರ್ಮಿಕರು ಉಪಸ್ಥಿತರಿದ್ದರು.