ಬೆಂಗಳೂರು: ಕರ್ನಾಟಕ ಬ್ಯಾಂಕ್ ನಾಡಿನಲ್ಲಿ ನೂರು ವರ್ಷಗಳ ಕಾಲ ಇತಿಹಾಸವಿರುವ ಬ್ಯಾಂಕ್ ಆಗಿದೆ ಕರ್ನಾಟಕದಲ್ಲಿರುವ ಕನ್ನಡಿಗರ ಸ್ಥಾಪಿಸಿದ ಕರ್ನಾಟಕ ಬ್ಯಾಂಕಿಗೆ ನೂತನ ಸಾರಥಿಗಳು ಕರ್ನಾಟಕದವರೇ ಆಗಲಿ ಬ್ಯಾಂಕಿನ ಆಡಳಿತ ಮಂಡಳಿ ಕನ್ನಡಿಗರನ್ನೇ ಶಿಫಾರಸು ಮಾಡಬೇಕೆಂದು ನಾಡಿನ ಸಮಸ್ತ ಜನರ ಆಗ್ರಹವಾಗಿದೆ.
ಕರ್ನಾಟಕ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ನಡೆದಿರುವ ವಿದ್ಯಮಾನಗಳು ಜನಸಾಮಾನ್ಯರ ಗಮನಕ್ಕೆ ಬಂದಿದ್ದು, ತಮಿಳು ತೆಲುಗು ಮಲಯಾಳಿಗರಿಗೆ ಬ್ಯಾಂಕಿನ ಆಡಳಿತದಲ್ಲಿ ಚುಕ್ಕಾಣಿ ನೀಡಿ ಆಡಳಿತ ಮಂಡಳಿಯ ಅನುಮತಿ ಇಲ್ಲವೇ ಸ್ವಯಂ ನಿರ್ಧಾರವನ್ನು ತೆಗೆದುಕೊಂಡು ಬ್ಯಾಂಕಿನ ಉನ್ನತ ಅಧಿಕಾರಿಯೊಬ್ಬರ ನನಗೆ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಉಂಟಾಗಿತ್ತು, ಇವೆಲ್ಲದರ ಕಾರಣದಿಂದ ಸಿಎಂಟಿ ಆಗಿದ್ದ ಅಧಿಕಾರಿಯೊಬ್ಬರು ತಕ್ಷಣ ರಾಜೀನಾಮೆ ನೀಡಿದ್ದರು.
ಕರ್ನಾಟಕ ಬ್ಯಾಂಕಿನ ಆಡಳಿತ ಮಂಡಳಿಯವರು ಬುದ್ಧಿ ಕಲಿತಮೇಲೆ ಮುಂದಿನ ದಿನಗಳಲ್ಲಿ ಕರ್ನಾಟಕ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಕಾರ್ಯಕಾರಿ ನಿರ್ದೇಶಕ ಸೇರಿದಂತೆ ಇತರ ಜವಾಬ್ದಾರಿಗಳನ್ನು ಕನ್ನಡಿಗರಿಗೆ ನೀಡಬೇಕೆಂಬುದು ಜನಸಾಮಾನ್ಯರ ಹಾಗೂ ನಾಡಿನ ಜನರ ಆಗ್ರಹವಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ನಾಡಿನ ಜನರು ಕರ್ನಾಟಕ ಬ್ಯಾಂಕಿನ ಹಾಗೂ ಆಡಳಿತ ಮಂಡಳಿ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಬ್ಯಾಂಕಿನ ಆಡಳಿತ ಮಂಡಳಿಗೆ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಶಿವಕುಮಾರ್ ನಾಯಕ್ ಎಚ್ಚರಿಕೆಯನ್ನು ಸಹ ನೀಡಿದರು.
ಕರ್ನಾಟಕ ಬ್ಯಾಂಕಿನಲ್ಲಿ ಅರ್ಹತೆ ಹೊಂದಿರುವ ಸಾಕಷ್ಟು ಉದ್ಯೋಗಿಗಳು ಉನ್ನತ ಹುದ್ದೆಗಳಿಗೆ ಅರ್ಹರಿದ್ದಾರೆ ಅವರನ್ನು ಪರಿಗಣಿಸಿ ಕನ್ನಡಿಗರಿಗೆ ನೀಡಬೇಕು ಇದನ್ನು ಬಿಟ್ಟು ಅನ್ಯ ರಜದ ಮಾಸಿಕರಿಗೆ ಉನ್ನತ ಹುದ್ದೆಗಳನ್ನು ನೀಡಿದ್ದೆ ಆದಲ್ಲಿ ಉಗ್ರ ಹೋರಾಟ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.