ಬೆಂಗಳೂರು: ಕನ್ನಡದ ರಿಯಾಲಿಟಿ ಶೋ ನಲ್ಲಿ ಅತಿ ಹೆಚ್ಚು ಖ್ಯಾತಿಗಳಿಸಿರುವ ಬಿಗ್ ಬಾಸ್ ಶೋನಲ್ಲಿ 40 ದಿನಗಳಿಗಿಂತ ಹೆಚ್ಚು ದಿನ ಉರಿಳಿವೆ, ಆದರೆ ಮನೆಯಲ್ಲಿ ಕ್ಷಣ ಕ್ಷಣಕ್ಕೂ ಮಾತಿನ ಯುದ್ಧ, ಗುಂಪುಗಾರಿಕೆ ನೋಡಬಹುದು, ಈ ವಾರದಲ್ಲಿ ಬಿಗ್ ಬಾಸ್ ಮನೆಯ ಶಿಷ್ಟಾಚಾರವನ್ನು ಮುರಿದು ಅಪಖ್ಯಾತಿಗೆ ಭಾಜನರಾಗಿದ್ದಾರೆ ಸೋಕಾಲ್ಡ್ ಚೈತ್ರಾ ಕುಂದಾಪುರ.
ದೊಡ್ಡ ಮನೆಯಲ್ಲಿ 11ನೇ ಸೀಸನ್ ಆಗಿದ್ದು, ಈ ಭಾರಿಯ ಶೋ ನಲ್ಲಿ ಅಷ್ಟು ವಿಶೇಷತೆ ಇಲ್ಲದಿದ್ದರೂ ಸಹಾ ಸ್ಪರ್ಧಾಳುಗಳು ಸಮಸ್ಯೆ,ಕಷ್ಟ,ಬಸ್ಗಳನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ನೋಡುಗರಿಗೆ ಸಿಲ್ಲಿಯಾಗಿ ಕಾಣುವುದರಲ್ಲಿ ಅನುಮಾನವಿಲ್ಲದಂತಾಗಿದೆ.
ಈ ವಾರ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಶೋ ಆರಂಭದಲ್ಲಿಯೇ ಕಿಚ್ಚ ಸುದೀಪ್ ಗರಂ ಆಗಿದ್ದರು. ಅದಕ್ಕೆ ಕಾರಣ, ಚೈತ್ರಾ ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದಾಗ ಅಲ್ಲಿ ಕೆಲವೊಂದಿಷ್ಟು ಮನೆಯ ಹೊರ ಭಾಗದಲ್ಲಿ ಹೇಗೆಲ್ಲಾ ಚರ್ಚೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ವೈದ್ಯರ, ನರ್ಸ್,ಆಂಬುಲೆನ್ಸ್ ಸಿಬ್ಬಂದಿಗಳ ನಡುವೆ ನಡೆಸಿರುವ ಸಂವಾದಗಳು ಕಿಚ್ಚನ ಕೆಂಗಣ್ಣಿಗೆ ಗುರಿಯಾದಂತೆ ಕಾಣಿಸಿತು.
ಬಿಗ್ ಬಾಸ್ ನಲ್ಲಿ ಸ್ಪರ್ಧಾಳುಗಳುಗಳಿಗೆ ಕೆಲವೊಂದು ನಿಯಮಗಳು ಅನ್ವಯವಾಗುತ್ತವೆ, ಮನೆಯಲ್ಲಿ ಇರುವವರು ಆಕಸ್ಮಿಕವಾಗಿ ಮನೆಯಿಂದ ಹೊರಬಂದಾಗ ಇಲ್ಲಿನ, ಹಾಗು ಹೊರಗಿನ ವಿಚಾರಗಳ ಬಗ್ಗೆ ಯಾವುದೇ ಕಾರಣಕ್ಕೂ ಚರ್ಚೆಗಳು ಮಾಡಬಾರದೆಂದು, ಅದಕ್ಕೆ ಯಾವುದೇ ಗೌರವ ಕೊಡದೆ ಚೈತ್ರಾ ಸಾಕಷ್ಟು ಚರ್ಚೆಗಳು ನಡೆಸಿದ ಹಿನ್ನೆಲೆ ದೊಡ್ಡ ಮನೆ ಕೆಲಕಾಲ ನಿಶಬ್ದವಾಗಿದ್ದನ್ನು ಕಾಣಬಹುದು, ಅದಕ್ಕೆ ಚೈತ್ರಾ ಸುದೀಪ್ ಅವರ ಪ್ರತಿ ಮಾತಿಗೂ ಅಡ್ಡಗಾಲು ಹಾಕಿ ಪಿತ್ತ ಮತ್ತಷ್ಟು ನೆತ್ತಿಗೆ ಏರುವಂತೆ ಮಾಡಿತು,
ಅಷ್ಟಕ್ಕೂ ಸುಮ್ಮನಾಗದ ಚೈತ್ರಾ ಕೊ ಸ್ಪರ್ಧಾಳುಗಳ ಮಾತಿಗೆ ಕಡಿವಾಣ ಹಾಕಲು ಮುಂದಾಗಿದ್ದರು. ಪ್ರತಿ ವಿಚಾರದಲ್ಲಿ ಮೂಗು ತೂರಿಸಲು ಮುಂದಾದಾಗ ಸುದೀಪ್ ಗರಂ ಆದರೂ, ಕೋಪ ನೆತ್ತಿಗೆ ಏರಿ ಹೋಗಿತ್ತು. ತಪ್ಪು ಮಾಡಿರುವುದು ತಪ್ಪು ಎಂದು ಕಿಚ್ಚ ಹೇಳಿದರು ಅದಕ್ಕೆ ಸಮಜಾಯಿಸಿ,ಎದುರು ಉತ್ತರ ಕೊಡುವ ಮೂಲಕ ಸುದೀಪ್, ಸ್ಪರ್ಧಾಳುಗಳಿಗೆ, ನೋಡುಗರಿಗೆ ಕಿರಿಕಿರಿ ಉಂಟು ಮಾಡಿದರು.
ಕೋಪ ಮಾಡಿಕೊಂಡ ಸುದೀಪ್ ಅವರು ಮತ್ನಾಡಿದಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು, ಮಾರ್ಯದೇ ಕೊಡುವ ಗೋಜಿಗೆ ಹೋಗದ ಚೈತ್ರಗೆ ಸುದೀಪ್ ನೀವು ಇಸ್ಟ ಬಂದಹಾಗೆ ಮಾಡಿಕೊಳ್ಳಿ ಎಂದು ಮುಖ ಚಿಕ್ಕದಾಗಿ ಮಾಡಿಕೊಂಡು ಪರೋಕ್ಷವಾಗಿ ಕೈ ಸನ್ನೆ ಮೂಲಕ ತಿವಿದರು. ಶನಿವಾರದ ಪೂರ್ಣ ಎಪಿಸೋಡ್ ಚಿತ್ರಾ ಅವರ ಘನಂದಾರಿ ಕೆಲಸದಲ್ಲಿಯೇ ಪೂರ್ಣವಾಯಿತು.