ಬೆಂಗಳೂರು: ಉದ್ಯಮಿ ಹಾಗೂ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಐಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಅಥವಾ ಉದ್ಯೋಗಿಗಳು ಕನಿಷ್ಟ ವಾರಕ್ಕೆ 70 ಗಂಟೆಯಾದರೂ ದುಡಿಯಬೇಕೆಂದು ಹೇಳಿರುವುದು ಕಾರ್ಮಿಕರ ಮಾನಸಿಕ ನೆಮ್ಮದಿಗೆ ಭಂಗ ತಂದಿದ್ದಾರೆ ಎಂದು ಕೆಪಿಸಿಸಿಯ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಿ ಸಿ ಕಿರಣ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 70 ಗಂಟೆ ಅಂದರೆ 5 ದಿನ 14 ಗಂಟೆ ತನಕ ಕಾರ್ಮಿಕರು ಕೆಲಸ ಮಾಡಬೇಕು, ಭಾರತೀಯ ಕೈಗಾರಿಕಾ ನೀತಿ ಪ್ರಕಾರ 8 ಗಂಟೆಗಿಂತ ಹೆಚ್ಚು ಕೆಲಸ ಮಾಡುವ ಕಾರ್ಮಿಕರಿಗೆ ರಾತ್ರಿ ಪಾಳೆಯ ಭತ್ಯೆ ನೀಡಬೇಕು, ಇದು ಕೇವಲ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನಾರಾಯಣ ಮೂರ್ತಿಯವರು ಹೇಳಿರುವ ವಿಚಾರವಾಗಿದೆ, ಕಾರ್ಮಿಕರಿಗೆ ಏನಾದರೂ ಸಮಸ್ಯೆಗಳಾದರೆ ಕಾರ್ಮಿಕ ನ್ಯಾಯಾಲಯಗಳಲ್ಲಿ ದೂರನ್ನು ಸಹ ಸಲ್ಲಿಸಬಹುದು ಎಂದರು. ಆದರೆ ಯಾರೂ ಸಲ್ಲಿಸುತ್ತಾರೆ, ಇಲ್ಲಿಯತನಕ ಒಂದೊಂದು ಪ್ರಕರಣಗಳು ಕಾರ್ಮಿಕ ನ್ಯಾಯಾಲಯಗಳಲ್ಲಿ ದಾಖಲಾಗಿಲ್ಲ.
ಆದರೆ 70 ಗಂಟೆಗಳ ಕಾಲ ಕೆಲಸ ಮಾಡುವುದು ಸಾಧ್ಯನಾ ಎಂಬ ಪ್ರಶ್ನೆ ಕಾರ್ಮಿಕರಲ್ಲಿ ಮೂಡುತಿದೆ, ವಾರದಲ್ಲಿ ಐದು ದಿನ ಕೆಲಸ ಮಾಡಬೇಕಾದರೆ ಕುಟುಂಬದ ಜವಾಬ್ದಾರಿಯನ್ನು ನೋಡಲು ಸಾಧ್ಯವಾಗುವುದಿಲ್ಲ, ಕುಟುಂಬದ ಜೊತೆ ಕಾಲ ಕಳೆಯುವುದು ಸಾಧ್ಯವಾಗುವುದಿಲ್ಲ. 70 ಗಂಟೆಗಳ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಅಲ್ಲದೆ ಕುಟುಂಬದ ಕಡೆ ಗಮನ, ಮಕ್ಕಳ ಕಡೆ ಗಮನ, ಗುಣಮಟ್ಟದ ಕೆಳಗಳನ್ನು ಮಾಡಲು ಸಾಧ್ಯವಾಗುವುದಿಲ್ಲ, ಹೀಗಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಾರಾಯಣ ಮೂರ್ತಿ ಅವರು ಹೇಳಿರುವುದು ಕಾರ್ಮಿಕ ಕಾನೂನಿಗೆ ವಿರುದ್ಧವಾಗಿದೆ ಎಂದರು.
ಭಾರತ ತಂತ್ರಜ್ಞಾನ ವಿಭಾಗದಲ್ಲಿ ಅತಿ ಶೀಘ್ರದಲ್ಲಿ ಅಭಿವೃದ್ಧಿಯಾಗ ಬೇಕೆಂಬ ನಿಟ್ಟಿನಲ್ಲಿ ಇನ್ಫೋಸಿಸ್ ನ ಸಂಸ್ಥಾಪಕ ನಾರಾಯಣಮೂರ್ತಿಯವರು ಈ ಒಂದು ನಿರ್ಧಾರವನ್ನು ತೆಗೆದುಕೊಂಡಿರುವುದು ಒಂದು ಕಡೆ ಒಳ್ಳೆಯಗಾಗಿದ್ದರು ಸಹಾ ಮತ್ತೊಂದು ಕಡೆ ಕಾರ್ಮಿಕರ ಹಿತದೃಷ್ಟಿ ಇಟ್ಟುಕೊಂಡು ಯೋಚನೆ ಮಾಡಬೇಕಿತ್ತು, ಅವರ ಈ ನಿರ್ಧಾರ ಎಷ್ಟರಮಟ್ಟಿಗೆ ಸರಿ ಎಂದು ಕಾರ್ಮಿಕರಿಗೆ ಪ್ರಶ್ನೆಯಾಗಿದೆ? ಆದರೆ ಅವರ ಆಲೋಚನೆಗಳು ಒಂದು ಭಾಗವಾಗಿ ಸರಿ ಇದ್ದರೆ ಸಹ ಎಲ್ಲೋ ಒಂದು ಕಡೆ ಕಾರ್ಮಿಕರ ಹಕ್ಕುಗಳಿಗೆ ತೊಂದರೆಯಾದಂತೆ ಭಾಸವಾಗುತ್ತದೆ.
ಭಾರತದಲ್ಲಿ ಮಾಹಿತಿ ತಂತ್ರಜ್ಞಾನದಿಂದ ಸಾಕಷ್ಟು ಖ್ಯಾತಿಗಳಿಸಿದ್ದು, ಭಾರತದಲ್ಲಿ ಅತ್ಯವಶಕವಾಗಿ ಕಾರ್ಮಿಕ ಖಾರ್ಕಾನೆಯಂತೆ ಇದೆ, ಸರ್ಕಾರಕ್ಕೆ ಐಟಿ ಉದ್ಯೋಗಿಗಳಿಂದ ಶೇ.50ರಷ್ಟು ಆದಾಯ ಬರುತ್ತದೆ, ಆದರೆ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಭದ್ರತೆ ಇರುವುದಿಲ್ಲ, ಕಂಪನಿಯ ಅಸ್ತಿರತೆಯ ಕೊರತೆಯಿಂದ ಯಾವ ಸಮಯದಲ್ಲಿ ಬೇಕಾದರೂ ಕೆಲಸದಿಂದ ತೆಗೆಯುವ ಮಾನದಂಡವನ್ನು ಕಾರ್ಮಿಕರಿಗೆ ಮೊದಲೇ ನೀಡಿರುತ್ತಾರೆ ಎಂದರು.