ಬೆಂಗಳೂರು: ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಹಾಗು ಕಬ್ಬನ್ ಪಾರ್ಕ್ ನಡಿಗೆದಾರರ ಫೋರಂನಿಂದ 12 ಜನ ಸಾಧಕ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ಸಾಧಕಿ ಮತ್ತು ಯುವ ಸಾಧಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿ KBJNL ನ ನಿರ್ದೇಶಕರಾದ ಕೆಪಿ ಮೋಹನ್ ರಾಜ್ ಮಾತನಾಡಿ, ಕಬ್ಬನ್ ಪಾರ್ಕ್ ವಾಕರ್ ಸಂಘ ಅನೇಕ ವರ್ಷಗಳಿಂದ ಪರಿಸರವನ್ನು ಉಳಿಸುವ, ಉದ್ಯಾನವನವನ್ನು ಪೋಷಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವನ್ನು ವಹಿಸಿರುವುದು ಹೆಗ್ಗಳಿಕೆಯ ವಿಚಾರವಾಗಿದೆ. ಅಲ್ಲದೆ ಪಾರ್ಕ್ ಅನ್ನು ಹಸಿರುಕರಣ ಮಾಡಲು, ಅಲ್ಲಿಗೆ ಬರುವ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಈ ಹಿಂದೆ ಪಾರ್ಕ್ ನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದವು, ಅದಕ್ಕೆ ಇದೀಗ ಕಡಿವಾಣ ಬಿದ್ದಿದೆ. ಅಲ್ಲದೆ ಗಿಡಗಳನ್ನು ಬೆಳೆಸುವ, ಪೋಷಿಸುವ ಕೆಲಸವನ್ನು ಸಂಘದಿಂದ ಮಾಡಲಾಗುತ್ತದೆ.
ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಹಾಗು ಹೈಕೋರ್ಟ್ ವಕೀಲ ಉಮೇಶ್ ಮಾತನಾಡಿ, ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಕೊಡಲು ಪ್ರಾರಂಭವಾಗಿದ್ದು 2019ರಲ್ಲಿ, ದಕ್ಷಿಣ ಭಾರತದಲ್ಲಿ ಮೊದಲ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಪ್ರಶಸ್ತಿ ನೀಡುತ್ತಾ ಬಂದಿದ್ದೇನೆ, ಹಣ ಪಡೆದುಕೊಂಡು ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ವಿಚಾರ ಅವು ಅವ್ಯಾಹತವಾಗಿದೆ, ಒಮ್ಮೆ ದೂರದ ದುಬೈಗೆ ಹೋದಾಗ ಹಣ ಪಡೆದುಕೊಂಡು ಪ್ರಶಸ್ತಿಗಳನ್ನು ಪಡೆಯುತ್ತಿರುವುದು ಗೊತ್ತಾಯಿತು, ನಾಡಿನಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಹೋದಾಗ ನಮ್ಒಂದು ಕಹಿ ಘಟನೆಯಿಂದ ಬೇಸತ್ತು ಅಂದೇ ನಾನು ನಿರ್ದಾರಮಾಡಿ ಒಂದು ಸಂಸ್ಥೆಯನ್ನು ಹುಟ್ಟುಹಾಕಿ ಇಂದಿಗೂ ಯಾರಬಳಿಯೂ ನಯಾಪೈಸೆ ಕೇಳದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಸಾಧಕೀಯರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ.
ಕಬ್ಬನ್ ಪಾರ್ಕ್ ನಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು ಅವುಗಳನ್ನು ರಾಜ್ಯ, ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಪಾರ್ಕ್ ಹಾಲಾಗುವ ಹಂತಕ್ಕೆ ತಲುಪಿತ್ತು, ಅದನ್ನು ಮನಗಂಡು ಸಂಬಂಧಪಟ್ಟ ತೋಟಗಾರಿಕಾ ಇಲಾಖೆ ಜೊತೆ ಚರ್ಚೆ ನಡೆಸಿ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಅದಕ್ಕೆ ಸ್ಥಳೀಯರು, ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.
ಹೀಗೆ ರಾಷ್ಟ್ರ,ರಾಜ್ಯ ಮಟ್ಟದಲ್ಲಿ ಸಾಧಕ ಮಹಿಳೆಯರಿಗೆ ಪ್ರಶಸ್ತಿ ಕೊಡುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಮುಂದೆಯೂ ಸಹ ಇದೇ ರೀತಿ ಎಲೆಮರೆ ಕಾಯಿಯಂತೆ ದುಡಿಯುತ್ತಿರು, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವವರನ್ನು ಪ್ರಾಮಾಣಿಕವಾಗಿ ಗುರುತಿಸಿ, ಅವರಿಂದ ಯಾವುದೇ ಸಂಭಾವನೆ ಪಡೆಯದೇ ಪ್ರಶಸ್ತಿಗಳನ್ನು ನೀಡುತ್ತಿದ್ದೇನೆ ಎಂದರು.
NRI ಫೋರಂ ಮುಖ್ಯಸ್ಥರಾದ ಡಾ.ಆರತಿ ಕೃಷ್ಣ,ಗಿನ್ನಿಸ್ ವಿಶ್ವ ದಾಖಲೆ ವೀರೆ ರೆಬೆಕ್ಕಾ ಮರಿಸ್ಸ್ ಟೈಲರ್,ರಾಜಕಾರಣಿ ಸೌಮ್ಯರೆಡ್ಡಿ,ಸಮಾಜಸೇವಕಿ ಗೌರಿ,ಪತ್ರಿಕೋಧ್ಯಮನಲ್ಲಿ ಪ್ರಿಯಾ, ವೈದ್ಯಕೀಯದಲ್ಲಿ ಡಾ.ಸುಧಾ,ವಿಧ್ಯುಮಾನ ಮಾಧ್ಯಮದಲ್ಲಿ ದೀಪ್ತಿ ತೋಳ್ಪಾಡಿ, ಕಲಾವಿದೆ ಹೇಮಾ ವಿನಯ್, ಸೇರಿದಂತೆ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಗಣನೀಯವಾಗಿ ಸಾಧನೆ ಮಾಡುತ್ತಿರುವವರನ್ನು ಗುರುತಿಸಿದ್ದಾರೆ.
ಇನ್ನು ಇದೇ ವೇಳೆ ಸಾಧಕ ಮಹಿಳೆಯರು ಅವರ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಒಳಿತು ಕೆಡಕು, ಸಮಸ್ಯೆಗಳ ಬಗ್ಗೆ ವೇದಿಕೆ ಮೇಲೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಇನ್ನು ಉಮೇಶ್ ಅವರ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾಧ್ಯಮ ವಿಭಾಗದಲ್ಲಿ ವೀರೇಶ್,ಉದ್ಯಮಿ ಶಾಂತಿ, ಮೋಹನ್ ರಾಜ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಸಹಕಾರವನ್ನು ನೀಡಿದ್ದಾವೆ.