ಬೆಂಗಳೂರು: ಕರ್ನಾಟಕ ರಾಜ್ಯದ ನಾಲ್ಕೂ ಸಾರಿಗೆನಿಗಮಗಳ ಆಡಳಿತವರ್ಗ ಮತ್ತು ನೌಕರ ಸಂಘಗಳ ನಡುವಿನ ಹಗ್ಗಜಗ್ಗಾಟ ಹಲವು ದಶಕಗಳಿಂದ ನಡೆಯುತ್ತಿದ್ದು ಒಂದು ಸೌಹಾರ್ದ ಇತ್ಯರ್ಥ ಸಾದ್ಯವಾಗಿರುವುದಿಲ್ಲ. ಒಂದು ವೇಳೆ ಸರ್ಕಾರ ಮುಂದಾಗಿದ್ದಾರೆ ಜೂನ್ 1ರಂದು ರಾಜ್ಯದ ಎಲ್ಲಾ ಪುರುಷ ಪ್ರಯಾಣಿಕರಿಗೂ ಶಕ್ತಿ ಯೋಜನೆಯ ಉಚಿತ ಟಿಕೆಟ್ ಅನ್ನು ವಿತರಿಸುವ ಮೂಲಕ ಗಾಂದಿಗಿರಿ ನಡೆಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ ಅಂಡ್ ಬಿ.ಎಂ.ಟಿ.ಸಿ. ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ನ ಅಧ್ಯಕ್ಷ ವಿಜಯ ಕುಮಾರ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿರುವ ಹತ್ತು ಹಲವು ಕಾರ್ಮಿಕ ಸಂಘಗಳು ಎರಡು ಪ್ರತ್ಯೇಖ ಬೇಡಿಕೆಗಳ ಆಧಾರದಲ್ಲಿ ಎರಡು ಬಣಗಳಾಗಿರುವುದರಿಂದ ಮತ್ತು ಅವು ತಮ್ಮ ಬೇಡಿಕೆಗಳನ್ನೇ ಮಾನ್ಯ ಮಾಡಬೇಕೆಂದು ಹಟಕ್ಕೆ ಬಿದ್ದಿರುವುದರಿಂದ ಸರಕಾರ ಮತ್ತು ಆಡಳಿತ ಮಂಡಳಿಗಳು ಒಂದು ಇತ್ಯರ್ಥಕ್ಕೆ ಬಾರದೆ ಕೈಚೆಲ್ಲುವ ಸ್ಥಿತಿಗೆ ಮುಟ್ಟಿವೆ. ಆದರೆ ಆ ಎರಡೂ ಬಣಗಳ ಬೇಡಿಕೆಗಳು ಮಾನ್ಯವಾಗುವಂತವುಗಳಲ್ಲ ಎಂಬುದನ್ನು ಅರಿತುಕೊಂಡ ನಾವು, ಯಾವುದೆ ಬಣಕ್ಕೆ ಸೇರದೆ ಒಬ್ಬಂಟಿಯಾಗಿ ಹೊಸ ಹಾಗು ಕಾರ್ಯಸಾದ್ಯ ಬೇಡಿಕೆಗಳನ್ನು ಮಂಡಿಸಿ, ಅದನ್ನು ದಿನಾಂಕ 9-10-24 ರಂದು ವಿಧಾನಸೌದದಲ್ಲಿ ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ವಸಮ್ಮತ ಅಭಿಪ್ರಾಯ ಮಂಡಿಸಲು ಸಾಧ್ಯವಾಗಿತ್ತು.
ಅಂದು ಮತ್ತೆ ಸಭೆ ಕರೆದು ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವ ಆಶ್ವಾಸನೆ ನೀಡಿದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರು, ಸಭೆಯಿಂದ ಹೊರಬಂದ ನಾಯಕರೊಬ್ಬರ ಸವಾಲಿಗೆ ಹೆದರಿ, ಮತ್ತೆ ಸಭೆಕರೆಯುವ ದೈರ್ಯವನ್ನೇ ಮಾಡಲಿಲ್ಲ. ಬಗ್ಗೆ ಮತ್ತೆ ಮತ್ತೆ ಪ್ರಶ್ನಿಸಿದರೂ ನುಣಿಚಿಕೊಳ್ಳಲಾರಂಬಿಸಿದರು. ಆದರೆ ಬೆಳಗಾವಿ ಅದಿವೇಶನಕ್ಕೇ ಹೋಗಿ ಹೊಸವರ್ಷದ ಆರಂಭ್ದದ ದಿನದಿಂದ ಮತ್ತೆ ಅನಿರ್ದಿಷ್ಟಾವದಿ ಮುಷ್ಕರ ಘೋಷಿಸಿದ್ದ ಮಹಾನಾಯಕರು ಅದರ ಮುನ್ನಾದಿನವೇ ಹಿಂದೆ ಸರಿದರು.
ಮತ್ತೆ ಏಳೆಂಟು ತಿಂಗಳ ವಿಳಂಬದ ನಂತರ ಮುಖ್ಯ ಮಂತ್ರಿ ಸಿದರಾಮಯ್ಯನವರ ನೇತೃತ್ವದಲ್ಲೇ ಸಭೆ ನಿಗದಿಪಡಿಸಲಾಯಿತಾದರೂ ಅದನ್ನೂ ಒಮ್ಮೆ ಮುಂದೂಡಿ ಮತ್ತೆ ದಿನಾಂಕ 15-4-25ರಂದು ಅವರ ಗೃಹ ಕಛೇರಿಯಲ್ಲೇ ಎರಡೂ ಬಣಗಳನ್ನು ಪ್ರತ್ಯೇಖವಾಗಿ ಕರೆಯಲಾಯಿತು. ಆದರೆ ಎರಡನೇ ತಂಡದೊಂದಿಗೆ ನಮ್ಮ ಸಂಘವನ್ನು ಸೇರಿಸಿ, ಒಬ್ಬರು ಮಾತ್ರ ಹಾಜರಾಗ ಬೇಕೆಂಬ ನಿಬಂದನೆ ಹೇರಲಾಯಿತು. ಆದರೆ ಪ್ರತ್ಯೇಖವಾಗಿ ಬಾಗವಹಿಸಿದ್ದ ಎರಡೂ ಬಣಗಳವರು ತಲಾ ಹತ್ತಿಪ್ಪತ್ತು ಜನರು ಬಾಗವಹಿಸಿ, ಅದೇ ರಾಗ ಅದೇ ಹಾಡು ಹಾಡಿದ್ದರಿಂದ, ನಾವು ಮಾತ್ರ ಕಾರ್ಯ ಸಾದ್ಯವಾದ ನೌಕರರು ಸ್ವಾಗತಿಸಬಹುದಾದ ಅಬಿಪ್ರಾಯ ಮಂಡಿಸಿದ್ದೆವು. ಆದರೂ ಕೊನೆಗೆ ಸಿದ್ದರಾಮಯ್ಯನವರೇ ಸಮಸ್ಯೆಗೆ ಪರಿಹಾರ , ಸರಕಾರ ಮತ್ತು ಸಂಸ್ಥೆಯ ಅಧಿಕಾರಿಗಳು, ಸಾರಿಗೆ ಮಂತ್ರಿಗಳು, ಅಧ್ಯಕ್ಷ-ಉಪಾದ್ಯಕ್ಷರುಗಳ ಸಭೆ ಕರೆದು ಚರ್ಚಿಸಿ ಒಂದು ತೀರ್ಮಾನ ಪ್ರಕಟಿಸುವುದಾಗಿ ಹೇಳಿ ಮುಂದೂಡಿದರು.
ಆದರೆ ಸಾರಿಗೆ ಸಂಸ್ಥೆಯ ಅದಿಕಾರಿಗಳಲ್ಲೇ ಎರಡು ಗುಂಪುಗಳಿರುವುದರಿಂದ ಅವು ತಲಾ ಒಂದೊಂದು ಬಣಗಳಿಗೆ ಬೆನ್ನೆಲುಬಾಗಿದ್ದು, ಬೆಂಬಲಿಸುತ್ತಿರುವುದರಿಂದ ತೀರ್ಮಾನಕ್ಕೆ ಬರಲು ವಿಳಂಬವಾಗುತ್ತಿದೆ. ಅದರಿಂದಾಗಿಯೇ ವೈವಸ್ಥಾಪಕ ನಿರ್ದೇಶಕರಾದ ಶ್ರೀ ಅನ್ಸುಕುಮಾರ್ ರವರು ಸುದೀರ್ಘ ರಜಾ ಮೇಲೆ ತೆರಳಿದ್ದಾರೆ.
ಈ ಹಿನ್ನೆಲೆಯಲ್ಲಿ ನಮ್ಮ ಸಂಘವು ಸಭೆ ಸೇರಿ ಚರ್ಚಿಸಿ ಮೇ ತಿಂಗಳ ಒಳಗಾಗಿ ಸರಕಾರ ಸಮಸ್ಯೆಯ ಇತ್ಯರ್ಥಕ್ಕಾಗಿ ಒಂದು ಗಟ್ಟಿ ನಿರ್ಧಾರವನ್ನು ಪ್ರಕಟಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ನೌಕರರ, ಸಂಸ್ಥೆಯ ಹಾಗು ಸಾರ್ವಜನಿಕ ಪ್ರಯಾಣಿಕರ ಹಿತ ದೃಷ್ಟಿಯಿಂದ, ತೀರ್ಮಾನಕ್ಕೆ ಬರದೆ ಹೋದರೆ ಅನಿವಾರ್ಯವಾಗಿತ್ತು.
ಸರ್ಕಾರ ಈ ಬಗ್ಗೆ ಗಮನ ಕೊಟ್ಟು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಯೂನಿಯನ್ ನಿಂದ ಒತ್ತಾಯ ಮಾಡಿದರು.