ಬೆಂಗಳೂರು: ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (MSIL) ನಿಗಮದ ನೂತನ ಅಧ್ಯಕ್ಷರು ಶಾಸಕ ಸಿ ಪುಟ್ಟರಂಗಶೆಟ್ಟಿ ಅವರನ್ನು ದಾವಣಗೆರೆ ಭರತ ಮೈಲಾರ್ ಉಪ್ಪಾರ ಅವರು ಸನ್ಮಾನಿಸಿ ಗೌರವಿಸಿದರು.
ಬೆಂಗಳೂರಿನ ಶಾಸಕರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳು ಉಪ್ಪಾರ ಸಮಾಜದ ಯುವ ಮುಖಂಡರು ದಾವಣಗೆರೆ ನಿವಾಸಿ ನನ್ನ ಆತ್ಮೀಯರಾದ ಭರತ್ ಮೈಲಾರ್ ಉಪ್ಪಾರ ಅವರು ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರು, ಮಾಜಿ ಸಚಿವರು, ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ರವರು ನೂತನವಾಗಿ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (MSIL) ನಿಗಮದ ನೂತನ ಅಧ್ಯಕ್ಷರನ್ನು ಭರತ್ ಮೈಲಾರ್ ಉಪ್ಪಾರ ಅವರು ಬೇಟಿಯಾಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಉಪ್ಪಾರ ಸಮಾಜದ ಬಗ್ಗೆ ಹಾಗೂ ಸಮಾಜ ಒಗ್ಗೂಡಿಸುವ ವಿಚಾರವಾಗಿ ಕೆಲ ಕಾಲ ಚರ್ಚೆ ನಡೆಸಿದರು. MSIL ನಿಂದ ಸಮಾಜಕ್ಕೆ ಆಗುವ ಉಪಯೋಗ ತಿಳಿಸಿದರು.