ರಾಯಚೂರು :ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ಅನುದಾನದಲ್ಲಿ ಎಷ್ಟು ಬಿಡುಗಡೆ ಮಾಡಿದ್ದಾರೆ.? 3 ಸಾವಿರ ಕೋಟಿ, 2 ಸಾವಿರ ಕೋಟಿ ಕೊಟ್ಟಿದ್ದೇನೆ ಅಂತ ರಾಜ್ಯದ ಮುಖ್ಯಮಂತ್ರಿಗಳು ಹೇಳ್ತಾರೆ. ಶ್ವೇತಪತ್ರ ಹೊರಡಿಸಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಪ್ರವಾಸ ಹಾಗೂ ಮಿಸ್ ಕಾಲ್ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಎಷ್ಟು ಹಣ ಬಂದಿದೆ? ಏನೇನು ಅಭಿವೃದ್ಧಿ ಆಗಿದೆ?
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇಟ್ಟಿರುವಂತಹ ಹಣವನ್ನುಎಲ್ಲೆಲ್ಲಿ ಕಲ್ಯಾಣ ಮಾಡಿದ್ದೀರಿ. ಯಾವ ರಸ್ತೆ ಅಭಿವೃದ್ಧಿ ಆಗಿದೆ. ಯಾವ ಶಾಲೆ ಕಟ್ಟಡ ಕಟ್ಟಿದ್ದೀರಿ. ಯಾವ ಬಸ್ ಸ್ಟ್ಯಾಂಡ್ ನಿರ್ಮಾಣ ಮಾಡಿದ್ದೀರಿ. ಕಲ್ಯಾಣ ಕರ್ನಾಟಕಕ್ಕೆ ಏನೇನು ಅಭಿವೃದ್ಧಿ ಕೆಲಸಗಳು ಆಗಿವೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸಿದರು.
ಕಳೆದ ಹತ್ತು ದಿನಗಳಿಂದ ಸರ್ಕಾರದಲ್ಲಿರುವ ಹಿರಿಯ ಸ್ವಪಕ್ಷಿಯ ಶಾಸಕರೇ ಸರ್ಕಾರ ವಿರುದ್ಧ ಗರಂ ಆಗಿದ್ದಾರೆ. ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ವೈಫಲ್ಯಗಳ ಬಗ್ಗೆ ಹಾಗೂ ಸರ್ಕಾರದಲ್ಲಿರುವ ಶಾಸಕರನ್ನು ಆಡಳಿತ ಪಕ್ಷ ಕಡೆಗಣಿಸುತ್ತಿದೆ ಎಂದು ಬೇಸರ ಹೊರ ಹಾಕಿದ್ದಾರೆ. ಮಧ್ಯವರ್ತಿಗಳನ್ನ ಇಟ್ಕೊಂಡು ಕಮಿಷನ್ ಪಡೆದುಕೊಂಡು ಅಧಿಕಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಡಿಸೆಂಬರ್ ನಲ್ಲಿ ಕ್ರಾಂತಿಯಾಗುತ್ತೆ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಅದರಲ್ಲಿ ಆಶ್ಚರ್ಯ ಪಡುವಂಥದ್ದು ಏನು ಇಲ್ಲ. ಆ ಕ್ರಾಂತಿ ಯಾವ್ ರೀತಿ ಆಗುತ್ತೆ ಕಾದು ನೋಡಬೇಕು. ಇತ್ತೀಚಿಗೆ ರಾಜಕೀಯ ವಿದ್ಯಾಮಾನಗಳ ಲೆಕ್ಕಾಚಾರ ಮಾಡುವುದಾದರೆ. ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿದೆ. ಕ್ರಾಂತಿ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಹೇಳಿದರು.
ರಾಜ್ಯದ ಹಿತಾಸಕ್ತಿ ಕಾಪಾಡಿಕೊಳ್ಳಲು ದೃಷ್ಟಿಯಿಂದ ಪಕ್ಷದ ಕಡೆಯಿಂದ ಎಲ್ಲಾ ಜಿಲ್ಲಾಧ್ಯಕ್ಷರುಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಅವ್ಯವಹಾರ, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಿ ಎಂದು ಸೂಚಿಸಲಾಗಿದೆ ಒಂದು ತಿಳಿಸಿದರು.
ಸಿಂಧನೂರಿನಲ್ಲಿ ಭತ್ತ ಮತ್ತು ಜೋಳ ಪ್ರಮುಖ ಬೆಳೆಗಳು. ಆದರೆ ನೀವು ಬೆಳೆದಂಥ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಮಾರಾಟ ಆಗದೆ ರೈತರು ಕಂಗಲಾಗಿದ್ದಾರೆ. ರಾಜ್ಯ ಸರ್ಕಾರ ರೈತ ವಿರೋಧಿ ನಡೆಯನ್ನ ನಡೆಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕುಮಾರಣ್ಣ ಕೇಂದ್ರದ ಮಂತ್ರಿ ಆದ್ಮೇಲೆ ಕರ್ನಾಟಕ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಲಘುವಾಗಿ ಮಾತಾಡಿದ್ದಾರೆ. ಏನು ಕೊಡುಗೆ ಅಂತ ಕೇಳ್ತಾರೆ.? ತಂಬಾಕು ಬೆಳೆಗಾರರಿಗೆ ಉತ್ತಮ ದರ, ಮತ್ತು ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಪರಿಹಾರ ಹಾಗೂ ಮಾವು ಬೆಳೆಗಾರ ಸಂಕಷ್ಟಕ್ಕೆ ಖಂಡಿಸಿದ್ದಾರೆ ಎಂದು ತಿಳಿಸಿದರು.
ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರಿಗೆ ಕುಮಾರಣ್ಣನವರೇ ಪತ್ರ ಬರೆದು 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಮಾವು ಬೆಳೆಗಾರರ ಸಂಕಷ್ಟಕ್ಕೆ ಕುಮಾರಣ್ಣವರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಇವತ್ತು ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರು ಹಾಗೂ ಎಲ್ಲಾ ಮಂತ್ರಿ ಮಂಡಲವು ಕುಮಾರಣ್ಣ ಅವರ ಒಂದು ಕರೆಗೆ ಆತ್ಮೀಯತೆಯಿಂದ ಸ್ಪಂಧಿಸುತ್ತಾರೆ. ನಿಜಕ್ಕೂ ಅಂತ ನಾಯಕನನ್ನ ಸೃಷ್ಟಿ ಮಾಡಿರುವ ನಿಮ್ಮಂತ ಕಾರ್ಯಕರ್ತರಿಗೆ ಧನ್ಯವಾದಗಳು. ಆ ಶಕ್ತಿಯನ್ನು ನಮ್ಮ ರಾಜ್ಯದ ಜನತೆ ಕುಮಾರಣ್ಣನವರಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.
*ಟ್ರ್ಯಾಕ್ಟರ್ ರ್ಯಾಲಿ*
ಕಾರ್ಯಕ್ರಮಕ್ಕೂ ಮೊದಲು ನಿಖಿಲ್ ಕುಮಾರಸ್ವಾಮಿ ಅವರು ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವಿನಾಯಕನ ಆಶೀರ್ವಾದ ಪಡೆದು. ನೂರಾರು ಕಾರ್ಯಕರ್ತರುಗಳ ಜತೆಗೂಡಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು. ಪಕ್ಷದ ಕಾರ್ಯಕರ್ತರು ರಸ್ತೆ ಪಕ್ಕದಲ್ಲೇ ಜೈಕಾರ ಕೂಗುತ್ತಾ ಟ್ರ್ಯಾಕ್ಟರ್ ರ್ಯಾಲಿ ಪಾಲ್ಗೊಂಡರು.
ಈ ಸಭೆಯಲ್ಲಿ ಮಾಜಿ ಸಚಿವರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟರಾವ್ ನಾಡಗೌಡ ಅವರು, ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಹಗರಿಬೊಮ್ಮನಹಳ್ಳಿ ಶಾಸಕರಾದ ನೇಮಿರಾಜ್ ನಾಯಕ್ ಅವರು, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು, ಜೆಡಿಎಸ್ ಕೊರ್ ಕಮಿಟಿ ಸದಸ್ಯರಾದ ಸಿ.ವಿ ಚಂದ್ರಶೇಖರ್ ಅವರು, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ, ಮುಖಂಡರಾದ ಸಿದ್ದು ಬಂಡಿ ಅವರು, ರಾಯಚೂರು ಜಿಲ್ಲಾಧ್ಯಕ್ಷರಾದ ವಿರುಪಾಕ್ಷ ಅವರು, ಸಿಂಧನೂರು ತಾಲ್ಲೂಕು ಅಧ್ಯಕ್ಷರಾದ ಬಸವರಾಜ್ ನಾಡಗೌಡ, ಸೇರಿದಂತೆ ಅನೇಕಮುಖಂಡರು,ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಕೃಷಿ ಸಚಿವರು ಅಸಹಾಯಕರು, ಅಸಮರ್ಥರು
ರಾಜ್ಯದಲ್ಲಿ ಕೃಷಿ ಸಚಿವರು ಅಸಹಾಯಕರು, ಅಸಮರ್ಥರು, ರಾಜ್ಯದ ಕೃಷಿ ಹುದ್ದೆಯಲ್ಲಿ ಇದ್ದರೆ ನಿಜಕ್ಕೂ ರಾಜ್ಯ ಅಭಿವೃದ್ಧಿ ಆಗುತ್ತಾ.? ಎಂದು ಸಚಿವ ಚೆಲುವರಾಯಸ್ವಾಮಿ ವಿರುದ್ಧ ಅವರು ಕಿಡಿಕಾರಿದರು.
ನಮ್ಮ ಜಿಲ್ಲೆಯಲ್ಲಿ ಒಬ್ಬ ಮಹಾನುಭಾವರಿದ್ದಾರೆ. ಮಂಡ್ಯ ಜಿಲ್ಲೆಯಿಂದ ಉಸ್ತುವಾರಿ ಮಂತ್ರಿಗಳಾಗಿ, ರಾಜ್ಯದ ಕೃಷಿ ಸಚಿವರು ರಾಜ್ಯದ ರೈತರನ್ನ ಪ್ರತಿನಿಧಿಸುತ್ತಿದ್ದಾರೆ. ಮಾಜಿ ಸಚಿವ ನಾಡಗೌಡ ಅವರ ನಿಯೋಗ ಭೇಟಿ ಮಾಡಿದ್ದರು. ಸಿಂಧನೂರಿನ ರೈತರ ಸಂಕಷ್ಟದ ಬಗ್ಗೆ ಭತ್ತ ಮತ್ತು ಜೋಳದ ಬೆಲೆ ಬಗ್ಗೆ ಸಮಸ್ಯೆ ಹೇಳಿಕೊಂಡ್ರೆ ಅದಕ್ಕೆ ಸಚಿವರು ನಮಗೆ ಇದರ ಬಗ್ಗೆ ಅರಿವಿಲ್ಲ ಅಂತ ಹೇಳಿಕೊಂಡ್ರು. ಇದು ನಮ್ಮ ರಾಜ್ಯದ ಪರಿಸ್ಥಿತಿ ಇದು ಬೇಸರ ವ್ಯಕ್ತಪಡಿಸಿದರು