ಬೆಂಗಳೂರು: ತಾನು ಕಲಿತಿರುವ ವಿದ್ಯೆ,ಕಲೆಯನ್ನು ಸಭಿಕರ ಮುಂದೆ ಸೈ ಎನ್ನಿಸುವ ಹಾಗೆ ಮಾಡಿರುವುದು, ಮಕ್ಕಳು ದುಶ್ಚಟಗಳನ್ನು ಬಿಟ್ಟು ಸಂಗೀತದ ಕಡೆ ಹೆಚ್ಚು ಒತ್ತು ಕೊಟ್ಟರೆ ಒಳ್ಳೆಯದು, ಅಂತಹ ಕೆಲಸವನ್ನು ಪೋಷಕರು ಮಾಡಬೇಕು, ಪ್ರಸ್ತುತ ಯುವಕರು ತಮ್ಮ ತನವನ್ನು ಕಳೆದುಕೊಳ್ಳುತ್ತಿದ್ದಾರೆ, ಅದು ಆಗಬಾರದು ಎಂದು ನೃತ್ಯ ವಿದ್ವಾಂಸರು, ನಿರ್ದೇಶಕರಾದ ಸಂಗೀತ ಕಲಾ ರತ್ನ ಡಾ. ಎಂ ಸೂರ್ಯ ಪ್ರಸಾದ್ ಅಭಿಪ್ರಾಯಪಟ್ಟರು.
ರವೀಂದ್ರ ಕಲಾಕ್ಷೇತ್ರದಲ್ಲಿ ನೃತ್ಯ ದಿಶಾ ಟ್ರಸ್ಟ್ ನಿಂದ ನಾಟ್ಯ ವಿ ಶಾರದೆ ಕುಮಾರಿ ದೀಪ ರಾಣಿ ಎಸ್ ಅವರು ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು, ಗುರು ಡಾ.ದರ್ಶಿನಿ ಮಂಜುನಾಥ್ ಅವರು ಇಲ್ಲಿಯ ತನಕ 15ನೇ ರಂಗ ಪ್ರವೇಶ ಮಾಡಿಸಿದ್ದಾರೆ. ಅದು ಅವರ ಸಾಧನೆಯಾಗಿದೆ. ತಾನು ಕಲಿತಿರುವ ಕಲೆಯನ್ನು ಬೇರೆಯವರಿಗೆ ದಾರೆ ಎರೆಯುವುದು ಅವರ ಸ್ವಾಭಾವ. ಕಲೆಯನ್ನು ರಸಿಕರ ಮುಂದೆ ಸೈ ಎನ್ನಿಸಿಕೊಳ್ಳುತ್ತಿರುವುದು ವಿಶೇಷವೇ ಸರಿ, ಗುರು ದರ್ಶಿನಿ ಅವರ ರಂಗಪ್ರವೇಶದಲ್ಲಿ ಹೊಸ ತನ ಕಾಣುತ್ತಿದ್ದೇವೆ, ಸಂಗೀತದಲ್ಲಿ ಅವರು ಬೆಳೆಯುತ್ತಿರುವುದು ನಮ್ಮೆಲ್ಲರಿಗೂ ಸಂತೋಷವೇ ಸರಿ.
ಗಣೇಶ ಸ್ತುತಿ, ಪುಷ್ಪಾಂಜಲಿ, ರಾಗಂ, ತಾಳಂ, ನವರಸಗಳು, ಅಷ್ಟದಿಕ್ಪಾಲಕ, ನೃತ್ಯದಲ್ಲಿ ರಾಸೋತ್ಪತ್ತಿ ಆಗುವುದು ಇದೆ, ಅದನ್ನು ಭರತನಾಟ್ಯದಲ್ಲಿ ವಿಶೇಷವಾಗಿ ಮಾಡಿದ್ದಾರೆ. ಅವರಿಗೆ ಯುವಕರು ತಮ್ಮ ತನವನ್ನು ಕಳೆದುಕೊಳ್ಳುತ್ತಿದ್ದಾರೆ, ಅದು ಬೇಡ, ಲೋಕರೂಡಿಯ ಕೆಲಸಗಳನ್ನು ಮಾಡಲಿ, ಎಲ್ಲಾ ತಂದೆ ತಾಯಿಯಂದರು ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು, ನಮ್ಮ ಸಂಸ್ಕೃತಿ, ನಮ್ಮ ಕಲೆಯನ್ನು ಪ್ರೋತ್ಸಾಹಿಸಿ, ಅದು ಬೆಳೆಯುವ ರೀತಿ ಕಾಪಾಡಿ, ನಾವೆಲ್ಲ ಸನ್ನದರಾಗಿರಬೇಕು ಎಂದರು. ಕುಮಾರಿ ದೀಪಿಕಾ ತಂದೆ ತಾಯಿ, ಶ್ರೀಕಂಠ ರಾಜು, ಮಂಜುಳಾ ರಾಜು ಅವರು ಮಗಳಿಗೆ ನೃತ್ಯದಲ್ಲಿ ಹೆಚ್ಚು ಆಸಕ್ತಿ ಬರಲು ಪ್ರೋತ್ಸಾಹಕರಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಮಾಡಿದ ಹಿರಿಯ ಬೃದಂಗ ವಿದ್ವಾನ್ ಗಿರಿದರ್, ಕಲಾವಿದ ಸುಗ್ಗನಹಳ್ಳಿ ಷಡಕ್ಷರಿ ಅವರಿಗೆ ನೃತ್ಯ ದಿಶಾ ಪ್ರಶಸ್ತಿ ಪ್ರದಾನ ಮಾಡಿದರು. ಗುರುಗಳಿಗೆ ಶಿಷ್ಯೆಯಿಂದ ಗೌರವ ನಮನ, ಹಾಗೆ ಗುರು ಯಿಂದ ಶಿಷ್ಯೆಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ನೃತ್ಯ ಕಲಾವಿದೆ ಭಾರತಿ ವೇಣುಗೋಪಾಲ್, ಸಂಗೀತ ಗಾಯಕಿ, ಪಿಟೀಲಿನಲ್ಲಿ ಮಧುಸೂದನ, ಕೊಳಲು ವಾದನ ವೇಣುಗೋಪಾಲ್, ವೀಣೆಯಲ್ಲಿ ಕಾರ್ತಿಕ ವೈದ್ಯದಾರತಿ , ಕಲಾಮಂಡಲಂ ಗುರು ಉಷಾ ದಾತಾರ್, ವಯಲಿನ್ ನಲ್ಲಿ ವಿದ್ವಾನ್ ಸಿ ಮಧುಸೂದನ್ ,ವೀಣಾ ಕಲಾವಿದ ಅಚ್ಯುತ್ ಪ್ರಾಚಾರ್ಯರಾದ ಡಾ.ಮಂಜುನಾಥ್ ಭಾಗಿಯಾಗಿದ್ದರು.