ಬೆಂಗಳೂರು: ಪ್ರತಿಷ್ಠಿತ ಸೈಕಲ್ ಪ್ಯೂರ್ ಅಗರಬತ್ತಿ ಸ್ವಾಧೀನದ ಲೈಫ್ ಸ್ಟೈಲ್ ಮತ್ತು ವೆಲ್ನೆಸ್ ಬ್ರಾಂಡ್ ಆಗಿರುವ ಐರಿಸ್ ಹೋಮ್ ಫ್ರಾಗ್ರೆನ್ಸಸ್ ಮಹಿಳಾ ದಿನಾಚರಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಐರಿಸ್ ಬ್ಲಿಸ್ ಮತ್ತು ಐರಿಸ್ ಬೊಟಾನಿಕ್ಸ್ ಎಂಬ ಎರಡು ಸುಗಂಧ ದ್ರವ್ಯಗಳನ್ನು #IRISforHer ಸಂಗ್ರಹದಲ್ಲಿ ಬಿಡುಗಡೆ ಮಾಡಿದೆ. ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುವ ಮಹಿಳೆಯರನ್ನು ಗೌರವಿಸಲು ಮತ್ತು ಅವರು ವಾಸಿಸುವ ಸ್ಥಳವನ್ನು ಸುಗಂಧಗಳಿಂದ ಉನ್ನತೀಕರಿಸಲು ಈ ಉತ್ಪನ್ನಗಳನ್ನು ರಚಿಸಲಾಗಿದೆ. ಬದುಕನ್ನು ಚೆಂದಗೊಳಿಸಿದ ಮಹಿಳೆಯರಿಗೆ ಉಡುಗೊರೆ ನೀಡುವ ಉದ್ದೇಶದಿಂದ ಈ ಉತ್ಪನ್ನಗಳು ಸಿದ್ಧಗೊಂಡಿವೆ.
ಐರಿಸ್ ಬ್ಲಿಸ್ ಉತ್ಪನ್ನವು ಐರಿಸ್ ಸೆಲೆಸ್ಟ್ ವೆಲ್ವೆಟ್ ಕಸ್ತೂರಿ ಸುಗಂಧವನ್ನು ಒಳಗೊಂಡಿದ್ದು, ಸುತ್ತಮುತ್ತಲಿನ ವಾತಾವರಣವನ್ನು ಸಂತೋಷದಾಯಕ ವಾಗಿಸಲೆಂದೇ ರಚಿಸಲಾಗಿದೆ. ಈ ಐಷಾರಾಮಿ ಸಂಗ್ರಹವನ್ನು ಮಂತ್ರಮುಗ್ಧಗೊಳಿಸುವ ಅನುಭವ ಒದಗಿಸಲೆಂದೇ ಸಿದ್ಧಗೊಳಿಸಲಾಗಿದೆ. ಐರಿಸ್ ಬೊಟಾನಿಕ್ಸ್ ಸೆಟ್ ಪರಿಮಳಯುಕ್ತ ಮೇಣದಬತ್ತಿಗಳು, ರೀಡ್ ಡಿಫ್ಯೂಸರ್ಗಳು, ಮೇಣದ ಲ್ಯಾಂಟರ್ನ್ ಕ್ಯಾಂಡಲ್, ಪಾಟ್ಪುರಿ, ವೋಟಿವ್ ಕ್ಯಾಂಡಲ್, ರೀಡ್ ಡಿಫ್ಯೂಸರ್ ಆಯಿಲ್, ರೀಡ್ ಡಿಫ್ಯೂಸರ್ ಬಾಟಲ್, ರೀಡ್ ಸ್ಟಿಕ್ಗಳು ಮತ್ತು ಪಿಲ್ಲರ್ ಕ್ಯಾಂಡಲ್ ಸೇರಿದಂತೆ ಪ್ರಕೃತಿಯಿಂದ ಪ್ರೇರಣೆ ಪಡೆದು ರಚಿಸಿದ ಉತ್ಪನ್ನಗಳನ್ನು ಹೊಂದಿದೆ. ಮಹಿಳಾ ದಿನಾಚರಣೆ ಸಂಭ್ರಮವನ್ನು ಹೆಚ್ಚುಗೊಳಿಸಲೆಂದೇ ಈ ಪರಿಮಳ ಭರಿತ, ಅತ್ಯುತ್ತಮ ಉತ್ಪನ್ನವನ್ನು ತಯಾರಿಸಲಾಗಿದೆ.
ಪರಿಮಳಯುಕ್ತ ಕ್ಯಾಂಡಲ್ಗಳು ಮತ್ತು ವ್ಯಾಕ್ಸ್ ಮೆಲ್ಟ್ ಗಳನ್ನು ಒಳಗೊಂಡಿರುವ ಅರೋಮಾ ಸೆರೆನಿಟಿ ಎಂಬ ಗಿಫ್ಟ್ ಬಾಕ್ಸ್ ಕೂಡ ಸಿದ್ಧಗೊಂಡಿದೆ. ಇದು ಅತ್ಯಾಧುನಿಕ ಮತ್ತು ಪ್ರೀಮಿಯಂ ಗುಣಮಟ್ಟ ಹೊಂದಿದೆ. ಪರ್ಫೆಕ್ಷನ್ ಮತ್ತು ಉತ್ತಮ ನಡವಳಿಕೆಗಳನ್ನು ಮೆಚ್ಚಿಕೊಳ್ಳುವ ಸ್ತ್ರೀಯರಿಗೆ ಇದು ಪರಿಪೂರ್ಣ ಕೊಡುಗೆಯಾಗಿದೆ. ಜೊತೆಗೆ ರೋಸಸ್ ಮತ್ತು ರೀಡ್ ಅರೋಮಾ ಗಿಫ್ಟ್ ಬಾಕ್ಸ್ ಕೂಡ ಸಿದ್ಧವಿದ್ದು, ಅದರಲ್ಲಿ ಹೃದಯದ ಆಕಾರದ ಮೇಣದಬತ್ತಿಗಳು ಇರುತ್ತವೆ. ಮಹಿಳಾ ದಿನದ ವಿಶೇಷ ಸುಗಂಧ ಶ್ರೇಣಿಯು ಬೆಂಗಳೂರು ಮತ್ತು ಮೈಸೂರಿನ ಐರಿಸ್ ಅರೋಮಾ ಬೊಟಿಕ್ಸ್ ನಲ್ಲಿ ಮತ್ತು https://irishomefragrances.com ನಲ್ಲಿ ಲಭ್ಯವಿದೆ. ಬ್ರ್ಯಾಂಡ್ ತನ್ನ #ಐರಿಸ್ಫಾರ್ಹರ್ ಉತ್ಪನ್ನ ಶ್ರೇಣಿಯಲ್ಲಿ 30%ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ.