ಬೆಂಗಳೂರು : ಮಂತ್ರ ತಂತ್ರ ಯಂತ್ರಗಳ ಮೂಲಕ ವಶೀಕರಣ ಮಾಟ ಮಂತ್ರ ವಾಮಾಚಾರ ಇತ್ಯಾದಿ ಸಮಾಜದಲ್ಲಿ ಮಂಕು ಬೂದಿ ಎರಚುತ್ತಿರುವ ಹಾಗೂ ಅಂತಹ ಸಂಸ್ಥೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕಾಗಿದೆ ಎಂದು ಲಾ ಪೀಪಲ್ ಟ್ರಸ್ಟ್ ನ ಅಧ್ಯಕ್ಷರಾದ ಹರೀಶ್ ಡಿಪಿ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಬೆಂಗಳೂರಿನ ಪ್ಲಸ್ ಕಪ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಸಾರ್ವಜನಿಕರಿಗೆ ಇಲ್ಲಸಲ್ಲದ ಆಮಿಷೇವಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಪುಕಲಾಯಿಸಿ ಜಾಹಿರಾತು ನೀಡುತ್ತಿರುವವರ ವಿರುದ್ಸ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟನ ಕ್ರಮ ಕೈಗೊಳ್ಳಬೇಕಾಗಿದೆ. ಲಾ ಪೀಪಲ್ ಟ್ರಸ್ಟ್ 2021 ರಿಂದ ಪ್ರಾರಂಭವಾಗಿದ್ದು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮ ಕನಿಷ್ಠ ಪದ್ಧತಿಗಳು ಚಟುವಟಿಕೆ ಅಸ್ಪೃಶ್ಯತೆ ವಾಮಾಚಾರ ಮಾಟ ಮಂತ್ರ ಅಸಂವಿಧಾನಿಕ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಸಂಸ್ಥೆ ಸ್ಥಾಪನೆಯಾಗಿದೆ. ಅದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಾಕಷ್ಟು ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿ.
ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಜೀವಿತಾವಧಿಯಲ್ಲಿ ಅನೇಕ ಸಮಸ್ಯೆಗಳು ಬಂದು ಎರಗುತ್ತವೆ ನಾವು ಸಮಸ್ಯೆಗಳು ಬಂದಾಗ ಕಾನೂನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಬೇಕೇ ವರೆತು ಇಂತಹ ಮೌಡ್ಯವನ್ನು ಬಿತ್ತುವ ಜನರ ಬಳಿ ಹೋಗಬಾರದೆಂದು ಸಾರ್ವಜನಿಕರಿಗೆ ತಿಳಿ ಹೇಳಿದರು.
ಮೌಡ್ಯ ಬಯಲು ತಜ್ಞ ಹುಲಿಕಲ್ ನಟರಾಜ್ ಮಾತನಾಡಿ, ರಾಜ್ಯದಲ್ಲಿ ಇಂತಹ ಮೌಡ್ಯ ಬಿತ್ತುವ ಕೆಲಸ ಹಿಗ್ಗಿಲ್ಲದೆ ಎಲ್ಲೆಡೆಯು ರಾಜಾರೋಷವಾಗಿ ನಡೆಯುತ್ತಿದೆ, ನಾನು ಸಾಕಷ್ಟು ಇಂತಹ ಮೌಡ್ಯಗಳನ್ನು ಬಯಲು ಮಾಡಿದ್ದೇನೆ, ನನಗೆ ಸಾಕಷ್ಟು ಬೆದರಿಕೆಗಳು ಸಹ ಬಂದಿದವು, ಅವುಗಳನ್ನೆಲ್ಲವನ್ನು ಮೆಟ್ಟಿ ಧೈರ್ಯವಾಗಿ ಎದುರಿಸುತ್ತಿದ್ದೇನೆ.
ಯಾವುದೇ ಮಂತ್ರ ತಂತ್ರ ವಾಮಾಚಾರಗಳು ಯಾರಿಗೂ ಏನು ಮಾಡಲು ಆಗುವುದಿಲ್ಲ ಆದರೆ ಜನರನ್ನು ಮೋಸ ಮಾಡುವ ಜನರು ಇದ್ದಾರೆ. ಸಾರ್ವಜನಿಕರು ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಲ್ಲಿ ಕಾನೂನು ಕಟ್ಟಳೆಗಳು ಜಾರಿಯಾಗಬೇಕಾಗಿದೆ ಎಂದರು. ಕಾನೂನಿನಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಲಂ ಗಳು ಇವೆ ಆದರೆ ಸರ್ಕಾರ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬುದು ವಿಪರ್ಯಾಸಕರ ಸಂಗತಿ ಎಂದರು.
ಇಂತಹ ದುಶ್ಚಟಗಳಿಂದ ಸಾರ್ವಜನಿಕರ ತಡೆಯಲು ಕೆಲ ಜೋತಿಷಿಗಳು ಬಾಬಾಗಳು ಸ್ವಾಮೀಜಿಗಳು ವೇಷದಾರಿಗಳು ಯಾವುದೇ ಕಾನೂನಿಗೆ ಹೆದರದೆ ಬೀದಿ ಬೀದಿಗಳಲ್ಲಿ ಜನರಲ್ಲಿ ಆತಂಕ ಭಯ ಹುಟ್ಟಿಸಿ ಮಾಧ್ಯಮಗಳಲ್ಲಿ ಜಾಹಿರಾತುಗಳನ್ನು ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಹಣ ಸಮಯ ಆರೋಗ್ಯ ಎಲ್ಲವೂ ನಾಶವಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀನಿವಾಸ, ಕಾರ್ಯದರ್ಶಿಯಾದ ಗೋವರ್ಧನ ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ವಕೀಲರು ಇದೆ ವೇಳೆ ಉಪಸ್ಥಿತರಿದ್ದರು.