ಬೆಂಗಳೂರು:ಮಿಲಿಂದ್ ಸೋಮನ್ ಅವರು ಆರೋಗ್ಯ ಮತ್ತು ಪರಿಸರ ಯೋಗಕ್ಷೇಮದ ಅರಿವು ಮೂಡಿಸಲು ಲೈಫ್ಲಾಂಗ್ ಗ್ರೀನ್ ರೈಡ್ 3.0 ಗಾಗಿ 650 ಕಿ.ಮೀ ಸೋಲೊ ಸೈಕ್ಲಿಂಗ್ ಸಾಹಸವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಮಿಲಿಂದ್ ಸೋಮನ್, ಭಾರತದ ಫಿಟ್ನೆಸ್ ಐಕಾನ್ ಮತ್ತುಲ್ ಸೂಪರ್ ಮಾಡೆಲ್ ಅವರು ಲೈಫ್ಲಾಂಗ್ ಗ್ರೀನ್ ರೈಡ್ 3.0 ಅಭಿಯಾನಕ್ಕಾಗಿ ಪುಣೆಯಿಂದ ವಡೋದರವರೆಗೆ ಸೋಲೊ ಸೈಕ್ಲಿಂಗ್ ಸಾಹಸದಲ್ಲಿ 650 ಕಿ.ಮೀ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಲೈಫ್ಲಾಂಗ್ ಆನ್ಲೈನ್ ರೀಟೆಲ್ ಪ್ರೈವೇಟ್ ಲಿಮಿಟೆಡ್, ಮುಂಚೂಣಿ ಗ್ರಾಹಕ ಬಾಳಿಕೆ ವಸ್ತುಗಳ ಕಂಪನಿಯಾಗಿದ್ದು, ಆರೋಗ್ಯಕರ ಮತ್ತು ಪರಿಸರ-ಸ್ನೇಹಿ ವಾತಾವರಣವನ್ನು ನಿರ್ಮಿಸುವ ಗುರಿ ಹೊಂದಿದೆ.
ಮಿಲಿಂದ್ ಸೋಮನ್ ಅವರು ಡಿಸೆಂಬರ್ 11ರಂದು ಪುಣೆಯಿಂದ ವಡೋದರಾತ್ತ ಸೈಕ್ಲಿಂಗ್ ಯಾನ ಆರಂಭಿಸಿದರು. ಮುಂಬಯಿ ಮತ್ತು ಸೂರತ್ನಲ್ಲಿ ನಿಗದಿತ ವಿರಾಮ ಕಲ್ಪಿಸಲಾಗಿತ್ತು. ಈ ಸೈಕ್ಲಿಂಗ್ ಯಾನವು ವಡೋದರಾದಲ್ಲಿ ಮುಕ್ತಾಯವಾಗಿದೆಯಾದರೂ, ಬೆಂಗಳೂರಿನಲ್ಲಿ ಡಿಸೆಂಬರ್ 18, 2023ರಂದು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬೈಕ್ನಲ್ಲಿ 100 ಕಿ.ಮೀ ಸಂಚರಿಸುವುದರೊಂದಿಗೆ ಸಮಾಪನಗೊಳ್ಳಲಿದೆ. ಗ್ರೀನ್ ರೈಡ್ ಅಭಿಯಾನದ ಭಾಗವಾಗಿ ಅವರು ಡಿಸೆಂಬರ್ 17, ರಂದು ಏಕತಾ ಪ್ರತಿಮೆಗೂ ಭೇಟಿ ನೀಡಿದರು, ಅಲ್ಲಿ ಇತರ ಗಣ್ಯರ ಜತೆಗೂಡಿ ಸಾಹಸ ಕ್ರೀಡೆಗಳಿಗೆ ಚಾಲನೆ ನೀಡಲಿದ್ದಾರೆ. ಮಿಲಿಂದ್ ಅವರು ಲೈಫ್ಲಾಂಗ್ ಅಭಿಯಾನದೊಂದಿಗೆ ಸಕ್ರಿಯ ಬಾಂಧವ್ಯ ಹೊಂದಿದ್ದು, ವ್ಯಕ್ತಿಗಳನ್ನು`ಆಲಸ್ಯದ ವಿರುದ್ಧ ಹೋರಾಡುವಂತೆ’ ಮತ್ತು ತಮ್ಮ ಯೋಗಕ್ಷೇಮದ ಕುರಿತು ಗಮನಹರಿಸುವಂತೆ ಪ್ರೇರೇಪಿಸುತ್ತಾರೆ. ಲೈಫ್ಲಾಂಗ್ ಫ್ರೀರೈಡ್ ಸೈಕಲ್ ಈ ಗುರಿಯಲ್ಲಿ ಅವರ ಜತೆ ಕೈ ಜೋಡಿಸಿದ್ದು, ಕ್ರಿಯಾಶೀಲ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಮತ್ತು ಪರಿಸರದ ಯೋಗಕ್ಷೇಮಕ್ಕೆ ಕೊಡುಗೆ ನೀಡುವಂತೆ ಜನರನ್ನು ಹುರಿದುಂಬಿಸುತ್ತದೆ.
ಭರತ್ ಕಾಲಿಯಾ, ಸಹ-ಸ್ಥಾಪಕರು, ಲೈಫ್ಲಾಂಗ್ ಆನ್ಲೈನ್ ರೀಟೇಲ್ ಪ್ರೈವೇಟ್ ಲಿಮಿಟೆಡ್ ಅವರು ಗ್ರೀನ್ ರೈಡ್ ಅಭಿಯಾನದ ಕುರಿತು ಅತೀವ ಉತ್ಸಾಹ ವ್ಯಕ್ತಪಡಿಸಿದರು, ಮಿಲಿಂದ್ ಅವರು ಪುಣೆಯಿಂದ ವಡೋದರಾವರೆಗೆ ಅಸಾಧಾರಣವಾದ 650 ಕಿಲೋಮೀಟರ್ ಪ್ರಯಾಣವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ನಾವು ಸುಸ್ಥಿರ ಜೀವನಶೈಲಿಯ ಸಂಕಲ್ಪದೊಂದಿಗೆ ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆ. ಮಿಲಿಂದ್ ಸೋಮನ್ ಅವರ ಪ್ರೇರಣಾದಾಯಕ ಪ್ರಯಾಣವು ವ್ಯಕ್ತಿಗಳನ್ನು ಕ್ರಿಯಾಶೀಲ ಜೀವನಶೈಲಿ ನಡೆಸಲು ಸ್ವಾವಲಂಬಿಗಳಾಗುವಂತೆ ಹುರಿದುಂಬಿಸುವುದರ ಮೂಲಕ ನಮ್ಮ ಗ್ರಹದ ರಕ್ಷಣೆಗಾಗಿಯೂ ಸಂಕಲ್ಪ ಮಾಡುವ ಲೈಫ್ಲಾಂಗ್ನ ಸಿದ್ಧಾಂತದ ಪ್ರತಿಬಿಂಬವಾಗಿದೆ. ಯೋಗಕ್ಷೇಮ ಮತ್ತು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುವ ಉತ್ಪನ್ನಗಳ ಸೃಷ್ಟಿಯಲ್ಲಿ ನಾವು ನಂಬಿಕೆ ಇರಿಸಿಕೊಂಡಿದ್ದೇವೆ’’.
ಶ್ರೀ ಮಿಲಿಂದ್ ಸೋಮನ್, ಫಿಟ್ನೆಸ್ ಐಕಾನ್, ಅವರು ತಮ್ಮ ಅನುಭವವನ್ನು ಉತ್ಸಾಹದಿಂದ ಹಂಚಿಕೊಂಡರು, ಲೈಫ್ಲಾಂಗ್ ಗ್ರೀನ್ ರೈಡ್ 3.0 ಅಭಿಯಾನದ ಭಾಗವಾಗಿ ಪುಣೆಯಿಂದ ವಡೋದರಾವರೆಗೆ 650 ಕಿ.ಮೀ ಸೋಲೊ ಸೈಕ್ಲಿಂಗ್ ಯಾನ ಪೂರ್ಣಗೊಳಿಸಿದ್ದು ನನ್ನನ್ನು ರೋಮಾಂಚಿತನನ್ನಾಗಿಸಿದೆ. ಈ ಪ್ರಯಾಣವು ಕೇವಲ ವೈಯಕ್ತಿಕ ಯಾತ್ರೆಯಲ್ಲ, ಆದರೆ ಸುಸ್ಥಿರ ಜೀವನದ ಶಕ್ತಿ ಮತ್ತು ಆರೋಗ್ಯಕರ, ಪರಿಸರ-ಸ್ನೇಹಿ ವಾತಾವರಣ ನಿರ್ಮಿಸಲು ಒಬ್ಬ ವ್ಯಕ್ತಿ ಹೇಗೆ ಪ್ರಭಾವ ಬೀರಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಸಾಹಸದ ಮುಂದಿನ ಹೆಜ್ಜೆ- ಪರಿಸರ ಪ್ರಜ್ಞೆಯ ಆಯ್ಕೆಯನ್ನು ಬೆಳೆಸುವ ನಮ್ಮ ಬದ್ಧತೆಯನ್ನು ಸಾಬೀತುಪಡಿಸಲು ಬೆಂಗಳೂರಿನಲ್ಲಿ 100 ಕಿ.ಮೀ ಅನ್ನು ಎಲೆಕ್ಟ್ರಿಕ್ ಬೈಕ್ನಲ್ಲಿ ಯಾತ್ರೆಯನ್ನು ಎದುರು ನೋಡುತ್ತಿದ್ದೇನೆ. ಈ ಪ್ರಯಾಣವು ಸುಸ್ಥಿರ ಮತ್ತು ಆರೋಗ್ಯಕರ ಭವಿಷ್ಯವನ್ನು ಎಲ್ಲರೂ ಒಂದುಗೂಡಿ ನಿರ್ಮಿಸಲು ಕೈ ಜೋಡಿಸುವುದಕ್ಕೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ’’.
ಯಾತ್ರೆ ವೇಳೆ ಮಿಲಿಂದ್ ಅವರು ಸಮುದಾಯ ಮತ್ತು ಯೋಗಕ್ಷೇಮದ ಪ್ರಜ್ಞೆಯನ್ನು ಬೆಳೆಸುವುದಕ್ಕಾಗಿ ಲೈಫ್ಲಾಂಗ್ ಗ್ರಾಹಕರನ್ನು ತಮ್ಮೊಂದಿಗೆ ಸೈಕಲ್ ರೈಡ್ಲ್ಲಿ ಭಾಗವಹಿಸಲು ಆಹ್ವಾನಿಸುವ ಮೂಲಕ `ಕುಟುಂಬದೊಂದಿಗೆ ಯಾನ’ ಅಭಿಯಾನವನ್ನು ಸಕ್ರಿಯವಾಗಿ ಉತ್ತೇಜಿಸಿದರು. ಅದಕ್ಕೆ ಸಮಾನಾಂತರವಾಗಿ ಮಿಲಿಂದ್ ಅವರು ಪುಣೆಯಲ್ಲಿ ಶಾಲಾ ಮಕ್ಕಳನ್ನು ಭೇಟಿ ಮಾಡುವ ಮೂಲಕ ಯುವ ಪೀಳಿಗೆಗೆ ಆರೋಗ್ಯ ಮತ್ತು ಸುಸ್ಥಿರತೆಯ ಸಂದೇಶವನ್ನು ರವಾನಿಸಿದರು.
ಗ್ರೀನ್ರೈಡ್ 3.0 ಆರೋಗ್ಯಕರ ಗ್ರಹಕ್ಕಾಗಿ ಅಗತ್ಯವಾಗಿರುವ ಸಾಮೂಹಿಕ ಪ್ರಯತ್ನವನ್ನು ಸಂಕೇತಿಸುವ ಸಲುವಾಗಿ ವೈವಿಧ್ಯಮಯ ಭೂಪ್ರದೇಶಗಳನ್ನು ಹೊಂದಿರುವ ವಿವಿಧ ನಗರಗಳನ್ನು ವ್ಯಾಪಿಸಿದೆ. ಲೈಫ್ಲಾಂಗ್, ಮಿಲಿಂದ್ ಸೋಮನ್ ಅವರ ಸಹಭಾಗಿತ್ವದಲ್ಲಿ, ಫಿಟ್ನೆಸ್ ಕುರಿತು ಜಾಗೃತಿ ಮೂಡಿಸಲು, ಪರಿಸರದ ಕುರಿತು ಒಮ್ಮತಾಭಿಪ್ರಾಯ ಮೂಡಿಸಲು ಮತ್ತು ಆರೋಗ್ಯಕರ, ಸುಸ್ಥಿರ ಭವಿಷ್ಯಕ್ಕಾಗಿ ಶ್ರಮಿಸಲು ಈ ಅಭಿಯಾನದ ಭಾಗವಾಗುವಂತೆ ಎಲ್ಲರಿಗೂ ಮುಕ್ತ ಆಹ್ವಾನ ನೀಡುತ್ತದೆ.
ಈ ಸಂದರ್ಭದಲ್ಲಿ ಮಾರುಕಟ್ಟೆ, ಇವಿ ಬ್ಯುಸಿನೆಸ್ ಯೂನಿಟ್, ಟಿವಿಎಸ್ ಮೋಟಾರ್ ಕಂಪನಿಯ ಸೌರಭ್ ಕಪೂರ್ ಮಾತನಾಡಿ, ನಾವು ಸುಸ್ಥಿರ ಸಂಚಾರದ ಭವಿಷ್ಯವನ್ನು ಎದುರುಗೊಳ್ಳುತ್ತಿರುವಾಗ, ಗ್ರೀನ್ರೈಡ್ ಮತ್ತು ಮಿಲಿಂದ್ ಸೋಮನ್ ಅವರ ಜತೆಗಿನ ಈ ಸಹಭಾಗಿತ್ವವು ಹಸಿರು ನಾಳೆಗಾಗಿ ನಮ್ಮ ಅಚಲವಾದ ಬದ್ಧತೆಯನ್ನು ಬಿಂಬಿಸುತ್ತದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ನಮ್ಮ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ, ಪರಿಸರ ಸ್ನೇಹಿ ಮತ್ತು ಜವಾಬ್ದಾರಿಯುತ ಪ್ರಯಾಣದ ಮಾರ್ಗೋಪಾಯಗಳ ಕಡೆಗೆ ನಮ್ಮೊಂದಿಗೆ ಸೇರಿಕೊಳ್ಳುವಂತೆ ಜಾಗತಿಕ ಪ್ರೇಕ್ಷಕರನ್ನು ಪ್ರೇರೇಪಿಸುವ ಆಶಯವನ್ನು ನಾವು ಹೊಂದಿದ್ದೇವೆ ಎಂದರು.