ಬೆಂಗಳೂರು : ಡಾ. ಎಪಿಜೆ ಅಬ್ದುಲ್ ಕಲಾಂ ಕುಗ್ರಾಮದಲ್ಲಿ ಹುಟ್ಟಿದರು ಒಬ್ಬ ವಿಜ್ಞಾನಿಯಾಗಿ, ಸಮಾಜ ಸುಧಾರಕರಾಗಿ, ರಾಷ್ಟ್ರಪತಿಯಾಗಿ ಕೆಲಸ ಮಾಡಿದ್ದಾರೆ, ಸಾಧನೆ ಮಾಡದೆ ಸತ್ತರೆ ಸಾವಿಗೆ ಅವಮಾನವಾಗುತ್ತದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಎನ್ ಮಂಜುನಾಥ್ ಅಭಿಪ್ರಾಯ ಪಟ್ಟರು.
ಡಾ. ಎ ಪಿ ಜೆ ಅಬ್ದುಲ್ ಕಲಾಂ ಸೇವಾ ಸಮಿತಿ ರಾಜ್ಯಾಧ್ಯಕ್ಷರಾದ ಶಾಲಿನಿ ಗಿರಿ ಮಾತನಾಡಿ, ಕಲಾಂ ಅವರ ಸಮಿತಿಯನ್ನು ಪ್ರಾರಂಭ ಮಾಡುವ ಉದ್ದೇಶ ನಮಗೆ ಬಂದಿದ್ದು ಕೊರೋನ ಹರಡಿದ ಸಂದರ್ಭದಲ್ಲಿ ಅದರ ಕಾಲಘಟ್ಟದಲ್ಲಿ ಜನರು ಯಾವ ರೀತಿ ತೊಂದರೆಗೆ ಸಿಲುಕ್ಕಿಕೊಂಡಿದ್ದರು, ಅವರ ಸಮಸ್ಯೆಗಳೇನು ಎಂಬುದರ ಬಗ್ಗೆ ಸಾಕಷ್ಟು ನಮಗೆ ಅರಿವಾಯಿತು, ಹೀಗಾಗಿ ತಮ್ಮಿಂದಾಗುವ ಸಮಾಜಕ್ಕೆ ಅಳಿಲು ಸೇವೆ ಮಾಡುವ ಉದ್ದೇಶದಿಂದ ಅಬ್ದುಲ್ ಕಲಾಮ್ ಅವರ ನೆನಪಿನಲ್ಲಿ ಸಮಿತಿ ಎಂಬುದನ್ನು ಆರಂಭಿಸಿದ್ದೇವೆ, ಅದರೊಂದಿಗೆ ಬಹಳ ಮುಖ್ಯವಾಗಿ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಎಲ್ಲೆಡೆ ಅಭಿಯಾನವನ್ನು ಸಹ ಮುಂದೆ ಮಾಡುತ್ತೇವೆ ವಿಜ್ಞಾನಿಯಾಗಿ ಕಲಾಂ ಅವರು ಸಮಾಜಕ್ಕೆ ಮಾಡಿದ ಸೇವೆಯನ್ನು ನೆನಪಿಸಿಕೊಂಡು ಅದರ ಒಂದು ಭಾಗವಾಗಿ ನಾವು ಏನಾದರೂ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂಬ ಉದ್ದೇಶದಿಂದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನ ಜಯನಗರದ 4ನೇ ಬ್ಲಾಕ್ ನಲ್ಲಿರುವ ಯುವಪಥ ಸಭಾಂಗಣದಲ್ಲಿ ದಿ.ಡಾ. ಎ ಪಿ ಜೆ ಅಬ್ದುಲ್ ಕಲಾಂ ಸೇವಾ ಸಮಿತಿ ಉದ್ಘಾಟನೆ ಮಾಡಿ ಮಾತನಾಡಿದ ಡಾ.ಮಂಜುನಾಥ್, ಅಬ್ದುಲ್ ಕಲಾಂ ಬಗ್ಗೆ ಯಾರೂ ಪರಿಚಯ ಮಾಡುವ ಅಗತ್ಯ ವಿಲ್ಲ, ಸಾಧ್ನೆ ಮಾಡದೆ ಸತ್ತರೆ ಸಾವಿಗೆ ಅವಮಾನ ವಾಗುತ್ತದೆ, ಒಳ್ಳೆ ಕೆಲಸ ಮಾಡಿದರೆ ದೇವರಿಗಿಂತ ಒಳ್ಳೆಯ ಪ್ರೀತಿ ಸಿಗುತ್ತದೆ. ಮನುಷ್ಯನಿಗೆ ಮರಣ ಇದೆ ಆದರೆ ಅವರ ಕೆಲಸಗಳಿಗೆ ಮರಣವಿಲ್ಲ, ಕಲಾಂ ಅವರೇ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿರುವುದು ದೊಡ್ಡ ಹೆಸರು ಮಾಡಿದ್ದಾರೆ, ಯುವಕರು ಅಡ್ಡ ದಾರಿ ಹಿಡಿಯಲು ಹಲವು ಕಾರಣ ಇವೆ, ಹೀಗಾಗಿ ಯುವಕರನ್ನು ಒಳ್ಳೆ ಮಾರ್ಗದಲ್ಲಿ ತಿದ್ದುವ ಕೆಲಸ ವಾಗಬೇಕು, ಬದುಕಿನಲ್ಲಿ ಗೆಲುವು, ಕಳೆದುಕೊಳ್ಳುವುದು, ಪಡೆದುಕೊಳ್ಳುವುದು ಬಹಳ ಮುಖ್ಯ ಎಂದರು.
ಕಾಲ ಬದಲಾಗಿಲ್ಲ, ಬದಲಾಗಿರುವುದು ಜನರ ನಿರೀಕ್ಷೆ ಬದಲಾಗಿದೆ, ಜೀವನ ಶೈಲಿ ಬದಲಾಗಿದೆ, ಮೈಕೈ ಮಾಲಿನ್ಯವಾದರೆ ಔಷದ ಇದೆ, ಯುವಜನರ ಮನಸ್ಸ ಮಾಲಿನ್ಯವಾಗಬಾರದು, ಎಲ್ಲರಿಗೂ ಕಲಾಂ ಅವರೇ ಒಂದು ಸಂದೇಶವಾಗಿದ್ದಾರೆ, ಸಂಪತ್ತಿನ ಹಿಂದೆ ಹಲವರು ಬಿದ್ದು ಏನಾಗಿದ್ದಾರೆ ಎಂಬುದು ಗೊತ್ತಿದೆ, ಸರಳತೆ ಬಹಳ ಮುಖ್ಯವಾಗಿದೆ, ನಾಡಿನ ಜಲ, ನಾಡು,ನುಡಿ, ಸಂಸ್ಕೃತಿ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ಸಾಮಾಜಿಕ ಜಾಲತಾಣಗಳು ಸಮಾಜದ ಆರೋಗ್ಯವನ್ನು ಜಾಲಾಡುತ್ತಿದೆ, ಜಾಲತಾಣಗಳಿಗೆ ನಿರ್ಬಂದನೆ ಮಾಡುಬೇಕಾಗಿದೆ, ಪರಿಸರದ ಬಗ್ಗೆ ಯುವಕರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕುಕಾಗಿದೆ, ವಾಯು, ಜಲ, ಆಹಾರದ ಮಾಲಿನ್ಯ ವಾಗುತ್ತದೆ ಇದೀಗ ಮನಸ್ಸು ಮಾಲಿನ್ಯವಾಗುತ್ತಿದೆ, ಇದೀಗ ವಾಯು ಮಾಲಿನ್ಯದಲ್ಲಿ ಹೃದಯಘಾತಕ್ಕೆ ಕಾರಣವಾಗುತ್ತಿದೆ ಎಂದು ವರದಿಗಳು, ಸಂಶೋಧನೆಗಳಿಂದ ತಿಳಿದು ಬರುತ್ತಿದೆ. ಒಬ್ಬರು ಎಲ್ಲರಿಗೂ ಸಹಾಯ ಮಾಡಲು ಆಗುವುದಿಲ್ಲ, ಎಲ್ಲರೂ ಒಬ್ಬರಿಗೆ ಸಹಾಯ ಮಾಡಬಹುದು ಎಂದು ಎಲ್ಲರಿಗೂ ಸಂದೇಶ ನೀಡಿದರು. ಯುವಜನರ ಆರೋಗ್ಯವನ್ನು ಚಿಕ್ಕವರಿಂದಲೇ ಸರಿಪಡಿಸಬೇಕು, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂದು ಯುವಕರಲ್ಲಿ ಯುವ ಜಾಗೃತಿಯನ್ನು ಮೂಡಿಸಿದರು.
ಇದೇ ವೇಳೆ ಕಾರ್ಯಕ್ರಮಕ್ಕೆ ಬಂದಿರುವ ಅತಿಥಿಗಳಿಗೆ ಗಿಡಗಳನ್ನು ನೀಡುವ ಮೂಲಕ ಪಾಲನೆ ಪೋಷಣೆ ಮಾಡಿ ಅದರ ಬೆಳವಣಿಗೆ, ಬೆಳೆಸಿರುವ ಪೋಟೋಗಳನ್ನು ನಮ್ಮ instagram, Facebook, youtube ನಲ್ಲಿ ಅಪ್ಲೋಡ್ ಮಾಡಿ ಎಂದು ನೆರೆದಿದ್ದ ಸಭಿಕರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸಿದರು. ಗಣ್ಯರು ಡಾ. ಎಪಿಜೆ ಅಬ್ದುಲ್ ಕಲಾಂ ಸಮಿತಿಯು ಯಾವೆಲ್ಲಾ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತದೆ ಎಂಬುದರ ಬಗ್ಗೆ ಪ್ರಣಾಳಿಕೆಯ ಪುಸ್ತಕವನ್ನು ಸಹ ಇದೆ ವೇಳೆ ಬಿಡುಗಡೆ ಮಾಡಿದರು.
ಇನ್ನು ಇದೇ ವೇಳೆ ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ.ಎನ್ ಮಂಜುನಾಥ್, ಸಾಹಿತಿ ಸಾವಿತ್ರಿ, ಇಸ್ರೋ ವಿಜ್ಞಾನಿ ರೂಪಾ, ಮಾಡೆಲ್ ಯೋಗಿತ ಆನಂದ್ ಗೌಡ ಅವರಿಗೆ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಯನಗರದ ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಪ್ರಾಂಶುಪಾಲ ಡಾ.ಗಾಂಧಿ, ಸಾಹಿತಿ ಡಾ.ಷರೀಫಾ, ಬಿಬಿಎಂಪಿ ಮಾಜಿ ಸದಸ್ಯ ಎನ್ ನಾಗರಾಜು, ಡಾ.ವಿಜಯ್ ಕುಮಾರ್, ಶಾಲಿನಿ ಅವರ ತಂದೆ ಅನಂತ ಗಿರಿ,ತಾಯಿ ಸೇರಿದಂತೆ ಸ್ನೇಹಿತರು ಉಪಸ್ಥಿತರಿದ್ದರು.