ತುಮಕೂರು: ಬೆಂಗಳೂರು ಸುಧಾರಣೆ ಆಗಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು : ಬ್ರಾಂಡ್ ಬೆಂಗಳೂರು ಮಾಡ್ತಿನಿ ಅಂತ ಡಿಕೆ ಶಿವಕುಮಾರ್ ಅವರು ಹೇಳಿದ್ರು ಕಳೆದ ಎರಡು ವರ್ಷದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣ ಆಗಿಲ್ಲ ಇನ್ನು ಬೆಂಗಳೂರಿನಲ್ಲಿ ಕಸದ ರಾಶಿ ನೋಡಿದ್ರೆ ಇದು ನಮ್ಮ ಬೆಂಗಳೂರಾ , ಇಂಥ ವಾತಾವರದಲ್ಲಿ ನಾವು ಬದುಕುತಿದೀವ ಎಂದು ಒಬ್ಬ ನಾಗರೀಕನಾಗಿ ನಾವೇ ಪ್ರಶ್ನೆ ಮಾಡಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ ಎಂದರು.
ತುಮಕೂರಿನ ಖಾಸಗಿ ರೆಸಾರ್ಟ್ ನಲ್ಲಿ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದಣಿ ಅಭಿಯಾನ ಮತ್ತು ಪಕ್ಷ ಬಲವರ್ಧನೆ ಹಾಗೂ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು, ಚಿತ್ರದುರ್ಗ ದಾವಣಗೆರೆ ಸೇರಿದಂತೆ ಮೂರು ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಮುಖಂಡರುಗಳ ಜತೆ ನಿಖಿಲ್ ಕುಮಾರಸ್ವಾಮಿ ಅವರು ಸಭೆ ನಡೆಸಿದರು.
*ಮಾತು ತಪ್ಪಿದ ಸರ್ಕಾರ*
ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು ; ನಾಡಿನ ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ ಹಣವನ್ನು ಕೊಡ್ತೀನಿ ಅಂತ ಸುಳ್ಳು ಭರವಸೆ ನೀಡಿದ್ರು, ಆದರೆ ನಾಲ್ಕೈದು ತಿಂಗಳಿಂದ ಗೃಹ ಲಕ್ಷ್ಮಿ ಬಂದಿಲ್ಲ ಅಂತ ಜನ ಸರ್ಕಾರಕ್ಕೆ ಶಾಪ ಹಾಕಿತ್ತಿದ್ದಾರೆ.ಕೊಟ್ಟ ಮಾತಿನಂತೆ ಈ ಸರ್ಕಾರ ನಡೆದು ಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
*ರೈತ ವಿರೋಧಿ ಕಾಂಗ್ರೆಸ್ ಸರ್ಕಾರ*
ಇತ್ತೀಚಿಗೆ ರಾಜ್ಯದಲ್ಲಿ ರೈತರಿಗೆ ವಿದ್ಯುತ್ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಶ್ರೀರಂಗಪಟ್ಟಣ ಮತ್ತು ಹನೂರಿನಲ್ಲಿ ರೈತರು ವಿದ್ಯುತ್ ಸಮರ್ಪಕವಾಗಿ ವಿದ್ಯುತ್ ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡಿದ್ರು, ಈ ಸರ್ಕಾರ ರೈತರನ್ನ ಸಂಪೂರ್ಣವಾಗಿ ಕೈ ಬಿಟ್ಟಿದೆ. ಅವರ ಬೇಡಿಕೆಗಳಿಗೆ ಯಾವುದೇ ಮನ್ನಣೆಕೊಟ್ಟಿಲ್ಲ ಈ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.
*ಗುತ್ತಿಗೆದಾರರು ಬೀದಿಗೆ ಬಂದಿದ್ದಾರೆ*
ಕಾಂಗ್ರೆಸ್ ಸರ್ಕಾರದಲ್ಲಿ ಗುತ್ತಿಗೆದಾರರಿಗೆ ಕಾಮಗಾರಿಯ ಹಣ ಬಿಡುಗಡೆ ಮಾಡಿಲ್ಲ, ಸಾಲ ಶೂಲ ಮಾಡಿ ಗುತ್ತಿಗೆದಾರರು ಬೀದಿಗೆ ಬಂದಿದ್ದಾರೆ, ಎರಡು ವರ್ಷದ ಬಳಿಕ ಕೊಡಲೋ ಬೇಡವೋ ಅನ್ನುವ ಹಾಗೆ ಶಾಸಕರಿಗೆ 10 ಕೋಟಿ ರೂ ಕೊಡುವ ಪತ್ರ ಹೊರಡಿಸಿದ್ದಾರೆ. ಇದು ಕೇವಲ ಮೈತ್ರಿ ಪಕ್ಷದ ಶಾಸಕರ ಸಂಕಷ್ಟವಲ್ಲ, ಕಾಂಗ್ರೆಸ್ ಪಕ್ಷದ ಶಾಸಕರ ಸಂಕಷ್ಟವೂ ಆಗಿದೆ
ಇದಕ್ಕೆ ರಾಜ್ಯದ ಜನತೆಯೇ ಬುದ್ದಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಬೆಂಗಳೂರು ಸೇರಿದಂತೆ ಮೈಸೂರು ಘಟನೆ ಇಡೀ ಮನುಕುಲ ಸಮಾಜ ತಲೆ ತಗ್ಗಿಸುವ ಕೆಲಸ. ಗೃಹ ಸಚಿವರು ಇದಕ್ಕೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.
ಮೇ ತಿಂಗಳ ಒಳಗೆ ಜಿ ಪಂ ತಾಪಂ ಚುನಾವಣೆ ಆಗಬೇಕು,ಕೋರ್ಟ್ ನಿರ್ದೇಶನ ಇದೆ. ಆದರೂ ಈ ಸರ್ಕಾರ ಅದಕ್ಕೂ ಬೆಲೆ ಕೊಡುತ್ತಿಲ್ಲ. ಸ್ಥಳೀಯ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಗೆ ಬುದ್ದಿ ಕಲಿಸುತ್ತಾರೆ.
.ಕಾಂಗ್ರೆಸ್ ನ ಒಳ ಜಗಳ ದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿಲ್ಲ. ಸರ್ಕಾರ ನಡೆಸುವ ಬದಲು, ಅವರ ಕುರ್ಚಿ ಕಾದಾಟದಲ್ಲಿ ಇದಾರೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಇವತ್ತೂ ತಳ ಮಟ್ಟದ ಎರಡು ಪಕ್ಷದ ಕಾರ್ಯಕರ್ತರು ಜೊತೆಯಲ್ಲಿ ಇದ್ದಾರೆ. ನಾವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಬೇಕೋ ಬೇಡವೋ ಅನ್ನೋದನ್ನು ನಮ್ಮ ವರಿಷ್ಠರು ಮತ್ತು ಬಿಜೆಪಿ ವರಿಷ್ಟರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.
*ರಾಜ್ಯಾದ್ಯಕ್ಷರ ಬದಲಾವಣೆ ಅಪ್ರಸ್ತುತ*
ಕೇಂದ್ರದಲ್ಲಿ ಕುಮಾರಣ್ಣ ಸಚಿವರಾದ ನಂತರ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಸಮಯ ಕೊಡಲು ಆಗುತ್ತಿಲ್ಲ ಅನ್ನುವ ಭಾವನೆ ಬಾರದೇ ಇರೋ ಥರ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವಯಸ್ಸಿಗೂ ಮೀರಿದಂತೆ ಕೆಲಸ ಮಾಡುತ್ತಿದ್ದಾರೆ.ಸಲ್ಪ ಆರೋಗ್ಯದಲ್ಲಿ ಸಮಸ್ಯೆ ಆಗಿದೆ, ರಾಜ್ಯಾದ್ಯಕ್ಷರ ಬದಲಾವಣೆ ವಿಚಾರ ಅಪ್ರಸ್ತುತ. ಸದ್ಯಕ್ಕೆ ಜೆಡಿಎಸ್ ಅಧ್ಯಕ್ಷರಾಗಿ ಕುಮಾರಣ್ಣ ಅವರೇ ಮುಂದುವರಿಯಬೇಕು ಎಂದು ಹಿರಿಯ ನಾಯಕರ ಅಭಿಪ್ರಾಯ ಎಂದರು
ಗುಬ್ಬಿ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಗೆ ಜೆಡಿಎಸ್ ಪಕ್ಷಕಕ್ಕೆ ಬರುತ್ತಾರೆ ಎಂಬ ವಿಚಾರ; ಪಾಪ ಅವರು ಏನೋ ಒಳ್ಳೆದಾಗಾಗುತ್ತೆ ಅಂತಾ ಕಾಂಗ್ರೆಸ್ ಗೆ ಪಕ್ಷಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ನಾಯಕರು ಅವರನ್ನು ಹೀಗೆ ನಡೆಸಿಕೊಳ್ತಾರೆ ಅಂದುಕೊಂಡಿರಲಿಲ್ಲ ಎಂದು ತಿಳಿಸಿದರು.