ಬೆಂಗಳೂರು: ಮಾದಾರ ಚೆನ್ನಯ್ಯ ಕೇವಲ ಒಂದು ಜಾತಿಗೆ ಸೀಮಿತವಾಗದೆ, ವಚನಗಳಲ್ಲಿ ಮಾಡಿರುವ ಸಾಧನೆ ಜಗತ್ತೇ ಮೆಚ್ಚುವಂತೆ ಮಾಡಿದೆ ಎಂದು ಶ್ರೀ ಶ್ರೀ ಶಿವಾನುಭವ ಚರಮೂರ್ತಿ ಸ್ವಾಮೀಜಿ ಹೇಳಿದ್ರು.
ಬೆಂಗಳೂರಿನ ವಸಂತ ನಗರದ ಲಿಡ್ಕರ್ ಭವನದಲ್ಲಿ ಮೂಲ ಮಾದಿಗ ಮೊಮೆಂಟ್ M3 karanatakaಶಿವಶರಣರ ಶ್ರೀ ಮಾದಾರ ಚೆನ್ನಯ್ಯ ಜಯಂತಿ ಹಾಗು ಮತಾಂತರ ಮತ್ತು ಒಳಮೀಸಲಾತಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಶ್ರೀ ಶಿವಾನುಭವ ಚರಮೂರ್ತು ಸ್ವಾಮೀಜಿ ಮಾತನಾಡಿ, ಒಂದು ಸಮೂಹದ ಪ್ರತಿನಿಧಿಯಾಗಿ ದೀಪ ಹಚ್ಚುತ್ತೇವೆ. ಎಲ್ಲರೂ ಒಗ್ಗಟ್ಟಾಗಿ ಬಾಳ ಬೇಕಾಗಿದೆ, ಮಾದಾರ ಚೆನ್ನಯ್ಯ ಕೇವಲ ಮಾದಿಗರಿಗೆ ಮಾತ್ರ ಸೀಮಿತವಾಗದೆ ಅವರ ಸಾದನೆ ಯಾವರೀತಿ ಜಗತ್ತು ಗುರುತಿಸಿದೆ ಎಂಬುದು ಬಹಳ ಮುಖ್ಯ. ಅನೇಕ ವಚನಗಳಲ್ಲಿ ಮಾದಾರ ಚೆನ್ನಯ್ಯ ಅವರ ಕಾಯಕ ನಿಷ್ಠೆಯನ್ನು ನೋಡಬಹುದು. ಅವರ ಒಂದೊಂದು ವಚನಗಳು ಎಲ್ಲರಿಗೂ ಪ್ರೇರಕವಾಗಿವೆ. ಒಂದೊಂದು ಕಸುಬುಗಳು ಅವರವರಿಗೆ ಶ್ರೇಷ್ಠ, ಕಾಯಕವನ್ನು ಜಾತಿಯಲ್ಲಿ ಹುನ್ನಾರ ಮಾಡುವುದು ಸರಿಯಲ್ಲ.ಸಮಾಜದಲ್ಲಿ ತುಳಿಯುವ ಪ್ರವೃತ್ತಿ ಅನಾದಿಕಾಲದಿಂದಲೂ ಬೆಳೆದುಬಂದಿವೆ.
ಎಲ್ಲರೂ ಸಮಾನವಾಗಿರಬೇಕು, ಎಲ್ಲರೂ ಒಂದಾಗಿರಬೇಕು ಎಂಬುದು ವೇದಗಳಲ್ಲಿ ಇದೆ, ಆದರೆ ಹೇಳುವುದು ಒಂದು ಮಾಡುವುದು ಮತ್ತೊಂದು, ಭಾರತದ ಸಂಸ್ಕೃತಿ, ಸಂಸ್ಕಾರ ಶ್ರೇಷ್ಠತೆ ಎಲ್ಲೆಡೆ ಪಸರಿಸಿದೆ. ಬುದ್ದು, ಬಸವ ,ಅಂಬೇಡ್ಕರ್, ತಮ್ಮದೇ ಕಾಲ ಘಟದಲ್ಲಿ ಹೋರಾಟ ಮಾಡಿದ್ದಾರೆ. ಬಸವಣ್ಣನವರು ನಾನು ಹಿಂಗೆ ಇದ್ದೀನಿ ಹಾಗೆ ನೀವು ಹಾಗೆ ಇರೀ ಎಂದು ಸಮಾನತೆ ತೋರಿಸಿದರು. ಅವರು ತಾನು ಮಾಡಿದ್ದನ್ನು ಬೇರೆಯವರಿಗೆ ಹೇಳುತ್ತಿದ್ದರು, ಪ್ರಜೆಗಳು ಯಾವಾಗಲೂ ಎಚ್ಚರವಾಗಿರಬೇಕು ಅದಕ್ಕೆ ನಮ್ಮ ಸಂವಿದಾನ ಮೂಲ ಕಾರಣವಾಗಿದೆ. ಹೇಗೆ ಜನರನ್ನು ಸರ್ಕಾರದಿಂದ ಪರೀಕ್ಷೆ ಮಾಡಿ ಆಯ್ಕೆ ಮಾಡುತ್ತೇವೆಯೋ ಹಾಗೆ ಸರ್ಕಾರದ ಪ್ರತಿನಿಧಿಗಳಿಗೆ ಒಂದು ಪರೀಕ್ಷೆ ಮಾಡಿ ಆಯ್ಕೆ ಮಾಡುವುದು ಸೂಕ್ತ. ಮಾದಿಗ ಮೊಮೆಂಟ್ ಒಂದು ಕಡೆ ನಿಲ್ಲುವುದಲ್ಲ ನಿರಂತರವಾಗಿ ಹರಿಯಬೇಕು ಎಂದರು.
ಬಸವಣ್ಣನವರು ಕಲ್ಯಾಣ ಮಾಡಿದಹಾಗೆ ನಾವು ಸ್ವಾಭಿಮಾನವಾಗಿ ಬದುಕಬೇಕು ಎಂದರು. ಮೂಲ ಪುರುಷರ ಆದಿಯಲ್ಲಿ ನಾವು ನಡೆಯಬೇಕು ಅವರು ಹಾಕಿಕೊಟ್ಟ ಹಕ್ಕುಗಳನ್ನು ಪಡೆಯುವ ಮೂಲಕ ಸಮಾಜದಲ್ಲಿ ಬದುಕುವ ಕಲೆಯನ್ನು ಕಲಿಯಬೇಕು ಎಂದರು.
RPI ಸಂಸ್ಥಾಪಕರಾದ ಎನ್ ಮೂರ್ತಿ ಮಾತನಾಡಿ, ಮೀಸಲಾತಿ, ಆಂದೋಲನ ವಿಚಾರವಾಗಿ ಬಹ ದೊಡ್ಡ ಚಳುವಳಿ ದೇಶದಲ್ಲಿ ನಡೆಯುತ್ತಿದೆ. ದೇಶದಲ್ಲಿ ಧರ್ಮದ ಮೂಲಕ ಜಾತಿ ವ್ಯವಸ್ಥೆಯನ್ನು ಬಿತ್ತಿ ಸಮಾಜವನ್ನು ಎಲ್ಲೋ ಒಂದು ಕಡೆ ಮೂಲೆಗುಂಪು ಮಾಡಿದೆ. ಸಮಾಜ ಸುಧಾರಣೆಗೆ ಅನೇಕ ಸಮಾಜ ಸುದಾಕರು ನಿಂತಿದ್ದಾರೆ. ಎಲ್ಲರಿಗೂ ಎಲ್ಲರ ಅಹೋರಾಟಕ್ಕೆ ಚಾಲನೆ ಕೊಟ್ಟವರು ಅಂಬೇಡ್ಕರ್, ದೇಶದಲ್ಲಿ 1600 ಆಸ್ಟು ಜಾತಿಗಳಿವೆ, ರಾಜ್ಯದಲ್ಲಿ 600ಕ್ಕಿಂತ ಹೆಚ್ಚು ಜಾತಿಗಳಿವೆ, ಕ್ರೈಸ್ತ 400, ಮುಸ್ಲಿಮರಲ್ಲಿ 300 ಜಾತಿಗಳಿವೆ. ಮತಾಂತರ ಆದವರಿಗೆ ಇಲ್ಲಿಯ ತನಕ ಯಾವುದೇ ಮೀಸಲಾತಿ ಸಿಕ್ಕಿಲ್ಲ, ತದನಂತರ ಮತಾಂತರ ಆದವರಿಗೆ ಧರ್ಮದವರು ಕೃಹಿಡಿದಿಲ್ಲ, ಅವರಿಗೆ ಯಾವುದೇ ಮೀಸಲಾತಿ ಸಿಕ್ಕಿಲ್ಲ, ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪರಿಸಿಸ್ತರಲ್ಲಿಯೂ ಸಹ ಮೀಸಲಾತಿ ಸಿಕ್ಕಿಲ್ಲ, ಅನೇಕ ರಾಜ್ಯಗಳಲ್ಲಿ ಮೀಸಲಾತಿ ವರ್ಗೀಕರಣ, ಒಳ ಮೀಸಲಾತಿ ಮಾಡಿ ಎಂದು ಹೋರಾಟಗಳು ನಡೆಯುತ್ತಿವೆ. ಸುಪ್ರೀಂಕೋರ್ಟ್ ಈಗಾಗಲೇ ತೋರ್ಪು ನೀಡಿದೆ, ಕೇಂದ್ರ ಸರ್ಕಾರ ವರ್ಗೀಕರಣಕ್ಕೆ ಆದೇಶ ನೀಡಿದೆ. ಆದರೆ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಗಳು ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ ಎಂದರು. ರಾಜಕೀಯ ಒತ್ತಡದಲ್ಲಿ ಸಿಲುಕಿದ್ದಾರೆ. ಏಜೆ ಸದಾಶಿವ ಆಯೋಗದ ವರದಿ ಜಾರಿ ಮಾಡಿಲ್ಲ. ಮಾದಿಗ ಸಮಾಜಕ್ಕೆ ದೊಡ್ಡ ಆತಂಕವಾಗಿ ಜಾರಿಯಾಗಿದೆ. ಈ ಸಂಬಂಧ ಜನವರಿ 12 ರಂದು ರಾಜ್ಯದಲ್ಲಿ ಉಗ್ರ ಹೋರಾಟಕ್ಕೆ ಎಚ್ಚರಿಕೆ ನೀಡಿದೆ. 30 ವರ್ಷಗಳ ಹೋರಾಟ ಮಾಡಿದ್ದಾರೆ.
ಆರ್ಥಿಕ ಸಮಾನತೆ ಕೊಡದೆ ಹೋದರೆ ಪ್ರಜಾಪ್ರಭುತ್ವ ದ್ವಂಸ ಮಾಡಲು ಸಿಡಿದೇಳುತ್ತಾರೆ. ಧರ್ಮಕ್ಕೂ ಜಾತಿಗಳಿಗೂ ಒಂದಕ್ಕೊಂದು ಸಾಮ್ಯತೆ ಇಲ್ಲ. ಕೆಲವರು ಸಂವಿದಾನ ಬದಲಾವಣೆ ಮಾಡಬೇಕು ಎಂದು ಕೆಲವರು ಹೇಳುತ್ತಾರೆ ಅವರನ್ನು ಶಿಲಾಯುಗಕ್ಕೆ ಕಳುಹಿಸಬೇಕು. ಕ್ರೈಸ್ತರ ಸಮುದಾಯದಲ್ಲಿರುವ ಸಮಸ್ಯೆಗಳನ್ನು ಎಲ್ಲರೂ ಕುಳಿತು ಚರ್ಚೆ ಮಾಡಬೇಕು ಎಂದು ತಿಳಿಸಿದರು.