ಬೆಂಗಳೂರು: ಜಾಗತಿಕ ಶಾಂತಿಗೆ ಮಹಾತ್ಮ ಗಾಂಧೀಜಿ ಅವರ ಅಹಿಂಸಾ ತತ್ವವನ್ನು ಅನುಸರಿಸಬೇಕು ಎಂದು ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ.ಬಿ.ಆರ್.ಮಮತ ಅವರು ತಿಳಿಸಿದರು.
ಇಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಟಿ.ದಾಸರಹಳ್ಳಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಗಾಂಧಿ ಅಧ್ಯಯನ ಕೇಂದ್ರ ಮತ್ತು ದೈಹಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಸತ್ಯ ಅಹಿಂಸೆ : ಜಾಗತಿಕ ಶಾಂತಿಗೆ ಗಾಂಧಿಯ ಹಾದಿ” ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸತ್ಯವನ್ನು ಪಡೆಯಬೇಕಾದರೆ ಅಹಿಂಸಾ ಮಾರ್ಗವನ್ನು ಅನುಸರಿಸಬೇಕು. ಗಾಂಧಿಯವರ ತತ್ವದಂತೆ ಸತ್ಯವನ್ನು ಪಡೆಯಲು ಯಾರನ್ನೂ ದ್ವೇಷಿಸುವ ಅವಶ್ಯಕತೆ ಇಲ್ಲ. ಸತ್ಯಾಗ್ರಹÀದ ಮೂಲಕ ಸತ್ಯಕ್ಕೆ ಆಗ್ರಹ. ಉಪವಾಸ ಕೂರುವುದು ಸತ್ಯಾಗ್ರಹ ಅಲ್ಲ ಎಂದರು.
ಸತ್ಯ ಮತ್ತು ಅಹಿಂಸೆ ನಾಣ್ಯದ ಎರಡು ಮುಖಗಳಿದ್ದಂತೆ, ಒಂದನ್ನು ಹುಡುಕಿಕೊಂಡು ಹೋದರೆ ಇನ್ನೊಂದು ಸಿಗುತ್ತದೆ. ಮಹಾತ್ಮ ಗಾಂಧಿ ಅವರ ಪ್ರಕಾರ ಸತ್ಯವು ಅಂತಿಮ ಪ್ರಪಂಚವಾಗಿತ್ತು. ಅವರು ಹೇಳಿದಂತೆ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಅಹಿಂಸೆ ಅಂದರೆ ಮಹಾತ್ಮರು ಹೇಳಿದ ಸತ್ಯ ವಿಶೇಷವಾದದ್ದು, ಪ್ರತಿಯೊಬ್ಬರು ಯೋಚಿಸಬೇಕು.
ಮಹಾತ್ಮ ಗಾಂಧೀಜಿಯವರ ಚಿಂತನೆಯ ಕ್ರಿಯೆಯು ಭಾಷಣದ ಪ್ರತಿ ಆಲೋಚನೆಯು ಸಮನ್ವಯವಾಗಿರಬೇಕು ಮತ್ತು ಸತ್ಯದೊಂದಿಗೆ ಇರಬೇಕು. ಸತ್ಯವು ಅವರಿಗೆ ದೇವರಾಗಿತ್ತು. ಸತ್ಯವನ್ನು ಪಡೆಯಬೇಕೆಂದರೆ ಅದು ಅಹಿಂಸೆಯ ಮಾರ್ಗವಾಗಬೇಕು. ಯುವಜನತೆ ಮಹಾತ್ಮ ಗಾಂಧೀಜಿಯವರ ತತ್ವವನ್ನು ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ಡಾ.ವೂಡೆ ಪಿ.ಕೃಷ್ಣ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಿರ್ದೇಶಕರಾದ ಪ್ರೊ.ಜಿ.ಬಿ.ಶಿವರಾಜು, ದಾಸರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಶ್ರೀಮತಿ ಜಿ.ಅಮೃತಾಕ್ಷಿ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.