ಆನೇಕಲ್ : ಕರ್ನಾಟಕ ಬೌದ್ಧ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಹ.ರಾ.ಮಹೇಶ್ ಅವರಿಗೆ ತುಮಕೂರು ವಿಶ್ವವಿದ್ಯಾಲಯ ಪಿಎಚ್ಡಿ ಪ್ರದಾನ ಮಾಡಿದೆ.
ಹ.ರಾ.ಮಹೇಶ್ ಅವರು ಮಂಡಿಸಿದ ಗೌತಮ ಬುದ್ಧ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ತತ್ವಜ್ಞಾನ ಮತ್ತು ಸಮಕಾಲೀನ ದಲಿತ ರಾಜಕಾರಣದಲ್ಲಿ ಅವುಗಳ ಪ್ರಸ್ತುತತೆ ಎಂಬ ವಿಷಯಕ್ಕೆ ಪಿಎಚ್ಡಿ ಪದವಿ ಲಭಿಸಿದೆ. ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬಿ.ರಮೇಶ್ ಅವರ ಮಾರ್ಗದರ್ಶನದಲ್ಲಿ ಹ.ರಾ.ಮಹೇಶ್ ಅವರು ಪ್ರೌಢ ಪ್ರಬಂಧ ಮಂಡಿಸಿ ಪಿಎಚ್ಡಿ ವಿಷಯ ಮಂಡಿಸಿದ್ದರು.
ಹ.ರಾ.ಮಹೇಶ್ ಅವರಿಗೆ ಪಿ ಎಚ್ ಡಿ ಲಭಿಸಿದ ಹಿನ್ನೆಲೆಯಲ್ಲಿ ಬಿಎಸ್ಪಿ ಪಕ್ಷದ ರಾಜ್ಯ ಖಜಾಂಚಿ ಚಿನ್ನಪ್ಪ ವೈ ಚಿಕ್ಕಹಾಗಡೆ ಅಭಿನಂದಿಸಿದರು