ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೆ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್ ಗಳನ್ನು ಆಯಾ ವಲಯವಾರು ನಿಯೋಜಿಸಲಾಗಿದ್ದು, ನೋಂದಣಿಯಾಗಿರುವ ಟ್ಯಾಂಕರ್ ಗಳಿಗೆ ಕಡ್ಡಾಯವಾಗಿ ಸ್ಟಿಕರ್ ಗಳನ್ನು ಅಂಟಿಸಿಕೊಳ್ಳಬೇಕಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂ ನೋಂದಣಿಯಾಗಿರುವ ವಾಹನಗಳಿಗೆ ಜಲಮಂಡಳಿ ವತಿಯಿಂದ ಸ್ಟಿಕ್ಕರ್ ಗಳನ್ನು ಸಿದ್ದಪಡಿಸಿ ಪಾಲಿಕೆಗೆ ನೀಡಿದೆ. ಸದರಿ ಸ್ಟಿಕ್ಕರ್ ಗಳನ್ನು ವಲಯವಾರು ಹಂಚಿಕೆ ಮಾಡಲಾಗಿದೆ.
ಪ್ರತಿ ಟ್ಯಾಂಕರ್ ಮಾಲೀಕರು ಪಾಲಿಕೆಯಲ್ಲಿ ಸ್ವಂ ನೋಂದಣಿ ಮಾಡಿಕೊಂಡಿರುವ ನೋಂದಣಿ ಪ್ರಮಾಣ ಪತ್ರವನ್ನು ಹಾಗೂ ಪಾಲಿಕೆ ನೀಡಿರುವ ಸ್ಟಿಕರ್ ನಲ್ಲಿ ವಾಹನದ ಸಂಖ್ಯೆ, ಮಾಲೀಕರ ಹೆಸರು, ದೂರುವಾಣಿ ಸಂಖ್ಯೆ ಹಾಗೂ ಸ್ವಂ ನೋಂದಣಿಯಾಗಿರುವ ಸಂಖ್ಯೆಯನ್ನು ಹಾಗೂ ವಲಯದ ಹೆಸರು ನಮೂದಿಸಿ ವಾಹನದ ಮೇಲೆ ಕಡ್ಡಾಯವಾಗಿ ಅಂಟಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರಿಸಲಾಗುವುದು.
ಪಾಲಿಕೆಯಲ್ಲಿ ಸ್ವಯಂ ನೋಂದಣಿಯಾಗಿರುವ ಟ್ಯಾಂಕರ್ ಮಾಲೀಕರಿಗೆ ಈಗಾಗಲೇ ನಿಗದಿಪಡಿಸಿರುವ ದರದ ಅನುಸಾರ ನೀರು ಪೂರೈಕೆ ಮಾಡಲು ಸೂಚಿಸಲಾಗಿರುತ್ತದೆ. ನೋಂದಣಿಯಾಗದ ಟ್ಯಾಂಕರ್ಗಳಿಗೆ ನೀರು ಪೂರೈಕೆ ಮಾಡಲು ಅವಕಾಶ ನೀಡುವುದಿಲ್ಲ. ಸರ್ಕಾರದಿಂದ ನಿಗದಿಪಡಿಸಿರುವ ದರಕ್ಕಿಂದ ಹೆಚ್ಚಾಗಿ ಮಾರಾಟ ಮಾಡಿದಲ್ಲಿ ಅಥವಾ ನೀರಿನ ಗುಣಮಟ್ಟದ ಸಮಸ್ಯೆ ಉಂಟಾದಲ್ಲಿ ಜಲಮಂಡಳಿಯ ಸಹಾಯವಾಣಿ ಸಂಖ್ಯೆ 1916 ಗೆ ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಗೆ ಸಂಪರ್ಕಿಸಬಹುದಾಗಿದೆ.
ಪಾಲಿಕೆ ತೆರೆದಿದ್ದ ಪೋರ್ಟಲ್ ನಲ್ಲಿ ಸ್ವಯಂ ನೋಂದಣಿಯಾಗಿದ್ದ ಟ್ಯಾಂಕರ್ ಗಳನ್ನು ಈಗಾಗಲೇ ವಲಯವಾರು ನಿಯೋಜಿಸಲಾಗಿದ್ದು, ಆಯಾ ವಲಯ ಆಯುಕ್ತರಿಗೆ ಆಯಾ ವಲಯಗಳಿಗೆ ನೀಡಿರುವ ಟ್ಯಾಂಕರ್ ಮಾಲೀಕರ ಹೆಸರು, ದೂರವಾಣಿ ಸಂಖ್ಯೆ ಹಾಗೂ ನೀರು ಪೂರೈಕೆ ಮಾಡುವ ಪ್ರದೇಶದ ಮಾಹಿತಿಯನ್ನು ನೀಡಲಾಗಿದೆ ಎಂದು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿರುತ್ತಾರೆ.