ಮಂಡ್ಯ: ನಾನೊಬ್ಬನೇ ಗಂಡು, ಬೇರೆ ಯಾರು ಗಂಡೇ ಇಲ್ಲ ಅಂತ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಲಾಟರಿ ಶಾಸಕರು ನಾಲಿಗೆ ಲಂಗು ಲಗಾಮು ಇಲ್ಲದೆ ಮಾತಾಡ್ತಾರೆ ಎಂದು ಶಾಸಕ ರವಿ ಗಣಿಗ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಮಂಡ್ಯ ವಿಧಾನಸಭಾ ಕ್ಷೇತ್ರ ಕಾಳಿಕಾಂಬ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ – ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು ಅವರು.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೂ, ಶಾಸಕ ರವಿ ಗಣಿಗ ಸಂಬಂಧ ಏನು.? ಮಾಧ್ಯಮಗಳನ್ನ ನೋಡಿದ್ರೆ ಕವರೇಜ್ ಸಿಗುತ್ತೆ ಅಂತ. 40 ಕೋಟಿ ರೂ. ಕೊಟ್ಟಿರುವ ಕಾಮಗಾರಿಗೆ ಇವರು ಟವೆಲ್ ಹಾಕ್ತಾರೆ. ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಮಂಡ್ಯ ಜನತೆಗೆ ಛತ್ರಿ ಬಿರುದು ಕೊಟ್ಟಿದ್ದಾರೆ ಡಿಸಿಎಂ ಡಿ.ಕೆ ಶಿವಕುಮಾರ್
ಮಂಡ್ಯದಲ್ಲಿ ಆರು ಶಾಸಕರನ್ನು ಗೆಲ್ಲಿಸಿ ಕೊಟ್ಟಿದ್ದಕ್ಕೆ. ಪೆನ್ನು ಪೇಪರ್ ಕೇಳಿದ ನಾಯಕರು ಮಂಡ್ಯದ ಜನತೆಗೆ ಛತ್ರಿ ಎಂದು ಬಿರುದು ಕೊಟ್ಟಿದ್ದಾರೆ. ಛತ್ರಿ ಎಂದರೆ ಪ್ರಭುದ್ಧರು ಬುದ್ದಿವಂತರು ಎಂದು ಹೇಳಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅವರು ಕಿಡಿಕಾರಿದರು.
ಮಂಡ್ಯ ಜಿಲ್ಲೆಯ ಜನತೆ ಅತ್ಯಂತ ವಿದ್ಯಾವಂತರು, ಪ್ರಜ್ಞಾವಂತರು. ಯಾರನ್ನ ಯಾವಾಗ ಮೇಲೆ ಕುರಿಸ್ಬೇಕು. ಯಾವ ಕೆಳಗಡೆ ಇಳಿಸಬೇಕು ಚೆನ್ನಾಗಿ ಗೊತ್ತು. ಆಗಾಗಿ ದುರಂಕಾರ, ದರ್ಪ, ದೌರ್ಜನ್ಯ ಇವೆಲ್ಲಾ ಜಾಸ್ತಿ ದಿನ ನಡೆಯುವುದಿಲ್ಲ. ನಾಳೆನೇ ಚುನಾವಣೆ ಘೋಷಣೆಯಾದರೆ ಕಾಂಗ್ರೆಸ್ನನ್ನ ದುರ್ಬಿನ ಹಾಕಿ ಹುಡುಕಬೇಕು ಎಂದು ವಾಗ್ದಾಳಿ ನಡೆಸಿದರು.
ಮುಂದಿನ ಚುನಾವಣೆಯಲ್ಲಿ ಕನಿಷ್ಠ 150ಕ್ಕೂ ಹೆಚ್ಚು ಸೀಟು ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರಕ್ಕೆ ಬರುತ್ತೆ. ಈ ರಾಜ್ಯದಲ್ಲಿ ಮತ್ತೊಮ್ಮೆ ಸನ್ಮಾನ್ಯ ಕುಮಾರಣ್ಣನ ಸರ್ಕಾರ ನೂರಕ್ಕೆ ನೂರು ರಚನೆಯಾಗುತ್ತೆ ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸುರೇಶ್ ಗೌಡ ಅವರು, ಡಾ.ಕೆ ಅನ್ನದಾನಿ ರವರು , ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೆಗೌಡ ಅವರು, ಮನ್ ಮುಲ್ ಮಾಜಿ ಅಧ್ಯಕ್ಷರಾದ ಬಿ. ಆರ್ ರಾಮಚಂದ್ರು ಅವರು, ಜಿಲ್ಲಾಧ್ಯಕ್ಷರಾದ ಡಿ. ರಮೇಶ್ ಅವರು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡರು, ನಗರಸಭೆ ಅಧ್ಯಕ್ಷರಾದ ನಾಗೇಶ್ ಅವರ ಸೇರಿದಂತೆ ಅನೇಕ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.