ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ 40 ವರ್ಷಗಳಿಂದ ಅವಿರತವಾಗಿ ವಿವಿಧ ರೀತಿಯಲ್ಲಿ ದುಡಿದಿರುವ ಜಿ.ಇ.ಮಂಜುನಾಥ್ ಆದ ನಾನು ಈ ಭಾರಿ ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್ ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಮನವಿ ಮಾಡಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ರಾಜ್ಯಸಭಾ ಚುನಾವಣೆಗೆ ಪರಿಶಿಷ್ಟ ಜಾತಿಯ ಕೋಟಾದಿಂದ ಮಧ್ಯ ಕರ್ನಾಟಕದ ಛಲವಾದಿ (ಬಲಗೈ) ಸಮುದಾಯದ ನಾಯಕ ಮತ್ತು ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳಿಂದ ಸತತವಾಗಿ (ಪಕ್ಷವನ್ನು ಬದಲಾಯಿಸದೇ) ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತಿರುವ ನಿಷ್ಠಾವಂತ ಕಾಂಗ್ರೆಸ್ ಮುಖಂಡ ಮತ್ತು ಇಂಜಿನಿಯರಿಂಗ್ ಪದವೀಧರ ಜಿ.ಈ. ಮಂಜುನಾಥ್ ಹೊಳಲ್ಕೆರೆ ರವರಿಗೆ ರಾಜ್ಯಸಭಾ ನೀಡಬೇಕೆಂದು ಮನವಿ ಮಾಡಿದರು.
ಮಧ್ಯ ಕರ್ನಾಟಕದ 8 ಜಿಲ್ಲೆಗಳಿಂದ ಪರಿಶಿಷ್ಟ ಜಾತಿಯ ಛಲವಾದಿ (ಬಲಗೈ) ಸಮುದಾಯಕ್ಕೆ ಯಾವುದೇ ಮೀಸಲು ಕ್ಷೇತ್ರದಿಂದ ಎಂ.ಎಲ್.ಎ. ಚುನಾವಣೆಗಾಗಲೀ, ಎಂ.ಪಿ. ಚುನಾವಣೆಗಾಗಲೀ ಅಥವಾ ರಾಜ್ಯಸಭಾ ಸ್ಥಾನವಾಗಲೀ 20 ವರ್ಷಗಳಿಂದ ನೀಡಿಲ್ಲ. ಹೀಗಾಗಿ ಕ್ಷೇತ್ರದ ಅಭಿವೃದ್ದಿ ಹಾಗೂ ಪಕ್ಷದ ಅಭಿವೃದ್ಧಿಗೆ, ಸಮುದಾಯದ ಹೇಳಿಗೆಗೆ ಟಿಕೆಟ್ ನೀಡಬೇಕೆಂದು ಕೈ ನಾಯಕರಲ್ಲಿ ವಿನತಿ ಮಾಡಿಕೊಂಡರು.
ಮಧ್ಯ ಕರ್ನಾಟಕದ ಸುಮಾರು 65ರಿಂದ 80 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ (ಛಲವಾದಿ-ಬಲಗೈ) ಸಮುದಾಯವರು ರಾಜಕೀಯ ಶೋಷಿತರಾಗಿದ್ದು, ಈ ಬಾರಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಜಿ.ಈ. ಮಂಜುನಾಥ್ ರವರಿಗೆ ಪರಿಶಿಷ್ಟ ಸಮುದಾಯದಿಂದ ರಾಜ್ಯಸಭಾ ಸ್ಥಾನವನ್ನು ನೀಡಬೇಕಾಗಿ ವಿನಂತಿಸುತ್ತೇವೆ.
ಕಳೆದ 40 ವರ್ಷಗಳಿಂದ ಪಕ್ಷದಲ್ಲಿ ಯಾವುದೇ ಆಪೇಕ್ಷೆ ಇಲ್ಲದೆ ಕೆಲಸ ಮಾಡಿಕೊಂಡು ಬಂದಿದ್ದೇನೆ, ಪಕ್ಷಕ್ಕೆ ದುಡಿದಿರುವುದನ್ನು ಮನಗಂಡು ಕಾಂಗ್ರೆಸ್ ನಾಯಕರು ನನ್ನನ್ನು ಗುರುತಿಸಿ ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್ ನೀಡಿದ್ರೆ ಗೆದ್ದು ಪಕ್ಷಕ್ಕೆ ಉತ್ತಮ ಹೆಸರು ತರುವ ಮೂಲಕ ಪಕ್ಷದ ಹೇಳಿಗೆಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು. ಈಗಾಗಲೇ ಹಲವು ಭಾರಿ ರಾಜ್ಯದ ನಾಯಕರಿಗೆ ಮನವಿ ಮಾಡಿಕೊಂಡು ಬಂದಿದ್ದೇನೆ. ಫೆ.17ರ ತನಕ ಕಾಲಾವಕಾಶ ಇದೆ ಕಾದು ನೋಡೋಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿ ಮಂಜುನಾಥ್ ಜೊತೆ ಹಲವು ಬೆಂಬಲಿಗರು ಉಪಸ್ಥಿತರಿದ್ದರು.