ಬೆಂಗಳೂರು: ಸ್ವಾರ್ಥ ಇಲ್ಲದ ಸೇವೆ ಮಾಡಿದಾಗ ಮಾತ್ರ ಸಂಸ್ಥೆಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಜಯದೇವ ಆಸ್ಪತ್ರೆ ನಿವೃತ್ತ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ತಿಳಿಸಿದರು.
ರಾಜ್ಯ ಒಕ್ಕಲಿಗ ಸಂಘದಿಂದ ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಿಂದ ನಿವೃತ್ತರಾದ ಡಾ.ಸಿಎನ್ ಮಂಜುನಾಥ್ ಅವರು ಅವರಿಗೆ ಗೌರವ, ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ,
ಜಯದೇವ ಆಸ್ಪತ್ರೆಯಲ್ಲಿ ಇಲ್ಲಿತನಕ 75 ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ, ಆಸ್ಪತ್ರೆಯಲ್ಲಿ ಸಾವಿರಾರು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಯಾವುದೇ ಸಾಧನೆ ಮಾಡಲು ಅಡ್ಡದಾರಿ ಹಿಡಿದರೆ ಹೆಚ್ಚುಕಾಲ ಉಳಿಯಲ್ಲ, ಹೆಚ್ಚು ಹೆಚ್ಚು ಓದುವ ಮೂಲಕ ಹೆಚ್ಚು ಜ್ಞಾನ ಸಾಧಿಸಲು ಸಾಧ್ಯ. ಅದರಿಂದ ನಾವು ದೊಡ್ಡ ಸಾಧನೆ ಮಾಡಲು ಸಾಧ್ಯ. ಆದರಿಂದ ಎಲ್ಲರೂ ಓದುವುದನ್ನು ರೂಡಿಸಿಕೊಂಡು ಜಾಣ ಪಡೆದುಕೊಳ್ಳಿ ಎಂದರು.
ಪ್ರಮಾಣ ವಚನ ತೆಗೆದುಕೊಂಡ ಮೇಲೆ ಅದಕ್ಕೆ ಚಾಚುತಪ್ಪದೆ ನಡೆದುಕೊಳ್ಳಬೇಕು ಆಗ ಮಾತ್ರ ಅದಕ್ಕೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ವಚನ ಭ್ರಷ್ಟ ರಾಗುತ್ತಿರಿ, ಮನುಷ್ಯ ಹುಟ್ಟುವಾಗಲು ವಿಶ್ವ ಮಾನವರಾಗಬೇಕು, ಹೋಗವಾಗಲೂ ವಿಶ್ವ ಮಾನರಾಗಬೇಕು. ಸೇವೆ ಯಾಗಲು ಪ್ರದರ್ಶನವಾಗಬರದು, ನಾವು ಮಾಡುವ ಕೆಲಸವನ್ನು ಆಪ್ಪೆಕ್ಷೆ ಇಲ್ಲದೆ ಮಾಡಬೇಕು. ಆದರ್ಶಗಳೆಲ್ಲವು ಆದರ್ಶವಾಗಿರಬೇಕು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ 70 ವರ್ಷ ವಯಸ್ಸಾದ ಜನರಿಗೆ young old ಎಂದು ವ್ಯಾಖ್ಯಾನಿಸಲಾಗಿದೆ. ಯಾವುದೇ ಒಂದು ಬೆಳೆಯಲು ಕೇವಲ ಉಪಕರಣ, ಕಟ್ಟಡ, ಮುಖ್ಯವಲ್ಲ, ಬದಲಾಗಿ ಮನುಷ್ಯತ್ವ, ನಿಸ್ವಾರ್ಥ ಸೇವೆ ಬಹಳ ಮುಖ್ಯ ಎಂದರು.
ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ, ಅದೊಂದು ಕೌಶಲ್ಯ, ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಇದೆ. ಈಗಾಗಲೇ ಕೃತಕ ಬುದ್ದಿಮತ್ತೆ ತಂತ್ರಜಾನ ಬಂದಿದೆ, ಅದರ ಮುಂದೆ ಹೋದರೆ ಸಾಕು ಕಾಯಿಲೆ ಬಗ್ಗೆ ತಿಳಿಸುತ್ತದೆ. ಬೇರೆ ಬೇರೆ ದೇಶಗಳಲ್ಲಿ ಕಾಯಿಲೆಗಳ ಬಗ್ಗೆ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತದೆ. ಕಳ್ಳತನವನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತದೆ.
ವ್ಯಕ್ತಿಯ ನಿಜವಾದ ಆಸ್ತಿ ಪರಸ್ಪರ ಸಂಬಂಧಗಳು ಮುಖ್ಯ, ಲೀಡರ್ ಗೆ ಅವಕಾಶ ಕೊಡಬೇಕು. ಆಗ ಮಾತ್ರ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಾಗುತ್ತದೆ, ಯಾವಾಗಲೂ ಸಾಧನೆಗೆ ಹೋಲಿಕೆ ಇರಬೇಕು,ಆದರೆ ಬಹುತೇಕವಾಗಿ ಅಸೋಹೆಗೆ ಹೆಚ್ಚು ಹೋಲಿಕೆ ಇರುವುದು ಕಾಣಬಹುದು.
ಸಂಘದ ಅಧ್ಯಕ್ಷ ಹನುಮಂತಯ್ಯ, ಗೌರವ ಅಧ್ಯಕ್ಷ ಕೆಂಚಪ್ಪ ಗೌಡ, ಕಾರ್ಯದರ್ಶಿ ಅಶೋಕ್ ತಮಯ್ಯ,ಜೆಡಿಎಸ್ ಮುಖಂಡ ಜಯಮುತ್ತು, ಸಂಘದ ನಿರ್ದೇಶಕರು, ಸೇರಿದಂತೆ ಸಂಘದ ಪದಾಧಿಕಾರಿಗಳುಭಾಗಿಯಾಗಿದ್ದರು. ನಿವೃತ್ತರಾದ ಮಂಜುನಾಥ್ ಅವರಿಗೆ ಸಂಘದ ವತಿಯಿಂದ ಹೂವಿನ ಮಳೆಯನ್ನು ಸುರಿಸಿದರು. ಇದೇವೇಳೆ ಕಿಮ್ಸ್ ಹಾಗೂ ಬೆಂಗಳೂರು ವೈದ್ಯಕೀಯ ಆಸ್ಪತ್ರೆಗೆ ಉಸ್ತುವಾರಿಗಳು ನೀವೇ ಆಗಬೇಕೆಂದು ನಿವೇದನೆಯನ್ನು ಸಹ ಸಲ್ಲಿಸಿದರು.