ಬೆಂಗಳೂರು : ಕಾರ್ಮಿಕ ರಾಜ್ಯ ವಿಮಾ ನಿಗಮದಿಂದ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ವಿಶೇಷ ಉಪಕ್ರಮವಾಗಿ, ಕಾರ್ಮಿಕರ ಕಲ್ಯಾಣಕ್ಕಾಗಿ SPREE ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರು ಮನೋಜ್ ಕುಮಾರ್ ತಿಳಿಸಿದರು.
ಇಂದು ಬೆಂಗಳೂರಿನ ಕಾರ್ಮಿಕರ ರಾಜ್ಯ ವಿಮಾ ನಿಗಮದ ಪ್ರಾದೇಶಿಕ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ನೀಡುವ ದೃಷ್ಠಿಯಲ್ಲಿ ಗರಿಷ್ಟ ಕಾರ್ಖಾನೆ ಉದ್ಯೋಗಿಗಳನ್ನು ಕಾಯ್ದೆಯಡಿ ತರುವ ಉದ್ದೇಶದಿಂದ ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್ಐಸಿ) SPREE 2025 (Scheme for promotion of Registration of employers and employees – ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ – 2025) ಎಂಬ ನವೀಕೃತ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಾನ್ಯ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಮಿಕರ ರಾಜ್ಯ ವಿಮಾ ನಿಗಮದ 196ನೇ ಸಭೆಯಲ್ಲಿ ಈ ಯೋಜನೆಯನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದರು.
ವಿಶ್ವದ ಅತಿ ದೊಡ್ಡ ಸಾಮಾಜಿಕ ಸುರಕ್ಷಾ ಸಂಸ್ಥೆ ಕಾರ್ಮಿಕರ ರಾಜ್ಯ ವಿಮಾ ನಿಗಮವು ‘ಕಾರ್ಮಿಕರ ರಾಜ್ಯ ವಿಮಾ ಕಾಯ್ದೆ 1948’ ರ ಅಡಿಯಲ್ಲಿ ರಚಿಸಿದ ಭಾರತದ ಸಂಸತ್ತಿನಲ್ಲಿ ಅನುಮೋದನೆಗೊಂಡ ಸಾಮಾಜಿಕ ಭದ್ರತಾ ಕಾಯ್ದೆಯಾಗಿದ್ದು, ಇದರಡಿಯಲ್ಲಿ ನೋಂದಾಯಿಸಲಾದ ಕಾರ್ಮಿಕರಿಗೆ ಅನಾರೋಗ್ಯ, ಮಾತೃತ್ವ, ಉದ್ಯೋಗ ಸಂಬಂಧಿ ಅಪಘಾತದಿಂದ ಆದ ಗಾಯ, ಅಂಗವಿಕಲತೆ ಮತ್ತು ಮರಣದಂತಹ ಆಕಸ್ಮಿಕ ಸಂದರ್ಭಗಳಲ್ಲಿ ವೈದ್ಯಕೀಯ ಆರೈಕೆ ಮತ್ತು ನಗದು ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಇ.ಎಸ್.ಐ ಯೋಜನೆಯು ಕರ್ನಾಟಕ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದ್ದು, ಒಟ್ಟು 35.00 ಲಕ್ಷ ವಿಮಾದಾರರು ಮತ್ತು 140 ಲಕ್ಷ ಕುಟುಂಬ ಸದಸ್ಯರುಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಒಟ್ಟು 1.87 ಲಕ್ಷ ಉದ್ಯೋಗದಾತರು ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಮಿಕರ ರಾಜ್ಯ ವಿಮಾ ನಿಗಮದ 196ನೇ ಸಭೆಯಲ್ಲಿ ಇ.ಎಸ್.ಐ ಕಾಯ್ದೆಯ ಅನುಸರಣೆಯನ್ನು ಉತ್ತೇಜಿಸಲು ‘ಕ್ಷಮಾದಾನ ಯೋಜನೆ 2025’ ಎಂಬ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯು 1ನೇ ಅಕ್ಟೋಬರ್ 2025 ರಿಂದ 30ನೇ ಸೆಪ್ಟೆಂಬರ್ 2026 ರವರೆಗೆ ಜಾರಿಯಲ್ಲಿದ್ದು, ಇದರಲ್ಲಿ ಉದ್ಯೋಗದಾತರು ಮತ್ತು ನಿಗಮದ ನಡುವಿನ ವ್ಯಾಜ್ಯಗಳನ್ನು ಪರಸ್ಪರ ಇತ್ಯರ್ಥಪಡಿಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ವ್ಯಾಜ್ಯಗಳನ್ನು ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದ್ದು, ಸರಳೀಕೃತ ಸರಾಗ ವ್ಯವಹಾರವನ್ನು ಪೆÇ್ರೀತ್ಸಾಹಿಸುತ್ತದೆ ಎಂದು ತಿಳಿಸಿದರು.
ಕಾರ್ಮಿಕರ ರಾಜ್ಯ ವಿಮಾ ನಿಗಮದ ಸಹೋದರಿ ಸಂಸ್ಥೆಯಾದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಅಡಿಯಲ್ಲಿ (ಇ.ಪಿ.ಎ¥sóï.ಓ)- ಉದ್ಯೋಗ ಪ್ರೊತ್ಸಾಹಕ ಯೋಜನೆ (ಇ.ಎಲ್.ಐ) ಎಂಬ ನವೀನ ಯೋಜನೆಯನ್ನು ಭಾರತ ಸರ್ಕಾರವು ಇತ್ತೀಚೆಗೆ ಪರಿಚಯಿಸಿದ್ದು, ಈ ಯೋಜನೆಯಡಿಯಲ್ಲಿ, ಸಾಮಾಜಿಕ ಭದ್ರತೆಯ ಎಲ್ಲ ವಲಯಗಳಲ್ಲಿ, ವಿಶೇಷವಾಗಿ ಉತ್ಪಾದಕ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ, ಮೊದಲಬಾರಿ ಮಾಸಿಕ ರೂ.15000/- ವರೆಗೆ ವೇತನ ಪಡೆದ ಉದ್ಯೋಗಿಗಳ ಉದ್ಯೋಗದಾತರು 2 ವರ್ಷಗಳವರೆಗೆ ಪೆÇ್ರೀತ್ಸಾಹದಾಯಕ ಇನ್ಸೆಂಟಿವ್ ಪಡೆಯಬಹುದು ಮತ್ತು ಉತ್ಪಾದನಾ ವಲಯದಲ್ಲಿ ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸಿದಲ್ಲಿ ಮತ್ತೆ ಎರಡು ವರ್ಷಕ್ಕೆ ವಿಸ್ತರಿಸಲಾಗುವುದು. ಈ ಯೋಜನೆಯಡಿ ದೊರೆಯುವ ಸೌಲಭ್ಯವು 2025ನೇ ಆಗಸ್ಟ್ 01 ರಿಂದ 2027ನೇ ಜುಲೈ 31 ರ ಅವಧಿಯಲ್ಲಿ ಸೃಷಿಯಾದ ಉದ್ಯೋಗಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದರು.
ಕಾರ್ಮಿಕರ ರಾಜ್ಯ ವಿಮಾ ನಿಗಮದ ಪೀಣ್ಯ ಉಪ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರಾದ ಅರಸರ ಕಿಶೋರ್ ಅವರು ಮಾತನಾಡುತ್ತಾ, ಕಾರ್ಮಿಕರ ರಾಜ್ಯ ವಿಮಾ ನಿಗಮವು ಪ್ರಸ್ತುತ ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಪ್ರಾದೇಶಿಕ ಕಛೇರಿಯನ್ನು ಹೊಂದಿದ್ದು, 06 ಉಪ ಪ್ರಾದೇಶಿಕ ಕಛೇರಿಗಳನ್ನು ಬೆಂಗಳೂರು ದಕ್ಷಿಣದ ಬೊಮ್ಮಸಂದ್ರ, ಬೆಂಗಳೂರು ಉತ್ತರದ ಪೀಣ್ಯ, ಕಲ್ಬುರ್ಗಿ, ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರಿನಲ್ಲಿ ಹೊಂದಿದೆ ಎಂದು ಮಾಹಿತಿ ನೀಡಿದರು.
ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ (SPREE) 2025 ಕಾರ್ಮಿಕರ ರಾಜ್ಯ ವಿಮಾ ನಿಗಮವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದಿಸಿದ ಒಂದು ವಿಶೇಷ ಉಪಕ್ರಮವಾಗಿದ್ದು, ಕಾಯ್ದೆಯ ನಿಬಂಧನೆಗಳಿಗೆ ಅನುಸಾರವಾಗಿ 10 ಮತ್ತು ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಘಟಕಗಳು/ಸಂಸ್ಥೆಗಳು ತಮ್ಮ ಸ್ಥಾಪನೆಯ 15 ದಿನಗಳೊಳಗಾಗಿ ಕಾಯ್ದೆಯಡಿ ನೋಂದಾಯಿಸಿಕೊಳ್ಳಬೇಕು. ಯಾವುದೇ ಕಾರಣದಿಂದ ಉದ್ಯೋಗದಾತರು ತಮ್ಮ ಸಂಸ್ಥೆ/ಘಟಕವನ್ನು ಇನ್ನೂ ನೋಂದಾಯಿಸದಿದ್ದಲ್ಲಿ, 2025ನೇ ಜುಲೈ 1ರಿಂದ ರಿಂದ ಡಿಸೆಂಬರ್ 31 ಒಳಗೆ ನೋಂದಾಯಿಸಿಕೊಳ್ಳಬಹದು. ಈ ಯೋಜನೆಯು 6 ತಿಂಗಳ ಅವಧಿಯ ವರೆಗೆ ಜಾರಿಯಲ್ಲಿರುತ್ತದೆ. ಗುತ್ತಿಗೆ ಹಾಗೂ ತಾತ್ಕಾಲಿಕ ಕಾರ್ಮಿಕರು ಸೇರಿದಂತೆ ಇಎಸ್ಐ ಅಡಿಯಲ್ಲಿ ಇನ್ನೂ ನೋಂದಾವಣೆಯಾಗದ ಉದ್ಯೋಗದಾತರು ಮತ್ತು ಉದ್ಯೋಗಿಗಳು ನೋಂದಾವಣಿ ಪೂರ್ವದ ಯಾವುದೇ ಪರಿಶೀಲನೆ ಅಥವಾ ಹಿಂದಿನ ಅವಧಿಯ ಯಾವುದೇ ಬಾಕಿಪಾವತಿಯ ಬೇಡಿಕೆ ಇಲ್ಲದೇ ನೋಂದಾಯಿಸಿಕೊಳ್ಳಲು ಇದು ಒಂದು ಬಾರಿಯ ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿಸಿದರು.
SPREE 2025 ರ ಪ್ರಮುಖ ಪ್ರಯೋಜನಗಳು:
ಉದ್ಯೋಗದಾತರು ತಮ್ಮ ಘಟಕಗಳು ಮತ್ತು ಉದ್ಯೋಗಿಗಳನ್ನು ಇಎಸ್ಐಸಿ ಪೆÇೀರ್ಟಲ್, ಶ್ರಮ್ ಸುವಿಧಾ ಮತ್ತು ಎಂಸಿಎ (ESIC Portal, Shram suvidhaa, MCA) ಪೆÇೀರ್ಟಲ್ ಮೂಲಕ ಡಿಜಿಟಲ್ ರೂಪದಲ್ಲಿ ನೋಂದಾಯಿಸಿಕೊಳ್ಳಬಹುದು.
ಉದ್ಯೋಗದಾತರು ತಾವು ಘೋಷಿಸಿದ ದಿನಾಂಕದಿಂದ ನೋಂದಣಿಯನ್ನು ಪರಿಗಣಿಸಲಾಗುತ್ತದೆ.ನೋಂದಣಿಯ ಪೂರ್ವ ಅವಧಿಗೆ ಯಾವುದೇ ವಂತಿಗೆ ಮತ್ತು ಸೌಲಭ್ಯವು ಅನ್ವಯವಾಗುವುದಿಲ್ಲ್ಲ. ನೋಂದಣಿಯ ಪೂರ್ವ ಅವಧಿಯ ಯಾವುದೇ ದಾಖಲೆಗಳ ಪರಿಶೀಲನೆ ಅಥವಾ ಬಾಕಿ ಪಾವತಿ ಬೇಡಿಕೆ ಇರುವುದಿಲ್ಲ.
ಈ ಯೋಜನೆಯು ಸ್ವಯಂಪ್ರೇರಿತ ಅನುಸರಣೆಯನ್ನು ಪೆÇ್ರೀತ್ಸಾಹಿಸಿ, ಹಿಂದಿನ ಅವಧಿಗೆ ದಂಡ ಪಾವತಿಸಬೇಕಾದ ಭಯವನ್ನು ಹೋಗಲಾಡಿಸಿ, ನೋಂದಾವಣಿಯ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ, SPREE 2025 ನ್ನು ಪರಿಚಯಿಸುವ ಮೊದಲು ನಿಗಧಿತ ಅವಧಿಯಲ್ಲಿ ನೋಂದಾವಣೆ ಮಾಡದಿದ್ದಲ್ಲಿ ಕಾನೂನು ಕ್ರಮ ಹಾಗೂ ಹಿಂದಿನ ಅವಧಿಯ ಬಾಕಿ ಪಾವತಿ ಬೇಡಿಕೆಗೆ ಕಾರಣವಾಗುತ್ತಿತ್ತು, SPREE 2025 ಈ ಅಡೆತಡೆಗಳನ್ನು ನಿವಾರಿಸಿ ನೋಂದಾವಣೆಯಿಂದ ಬಿಟ್ಟುಹೋದ ಘಟಕಗಳು ಮತ್ತು ಕಾರ್ಮಿಕರನ್ನು ಇಎಸ್ಐ ವ್ಯಾಪ್ತಿಯೊಳಗೆ ಸೇರಿಸಿ ಸಾಮಾಜಿಕ ರಕ್ಷಣೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಬೊಮ್ಮಸಂದ್ರ ಉಪ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರಾದ ಶ್ರೀಮತಿ ಕಣಿತ ಸೆಲ್ವಿ, ಅವರು ಮಾತನಾಡಿ SPREE 2025 ರ ಪ್ರಾರಂಭವು ಸಾಮಾಜಿಕ ರಕ್ಷಣೆಯನ್ನು ಒದಗಿಸುವ ಮತ್ತು ದೊರಕಿಸುವ ನಿಟ್ಟಿನಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮದ ಒಂದು ಪ್ರಗತಿಪರ ಹೆಜ್ಜೆಯಾಗಿದ್ದು, ಸರಳ ಮತ್ತು ಹಿಂದಿನ ಅವಧಿಯ ಬಾಕಿಪಾವತಿಯ ಬೇಡಿಕೆಯ ಭಾಧ್ಯತೆಯಿಲ್ಲದೆ ನೋಂದಾವಣೆಗೊಂಡು ಸುಲಭವಾಗಿ ಸಾಮಾಜಿಕ ಭದ್ರತೆಗೆ ಒಳಪಡುವ ಯೋಜನೆಯಾಗಿದೆ. ಈ ಯೋಜನೆಯು ಉದ್ಯೋಗದಾತರು ಕೇವಲ ತಮ್ಮ ಕಾರ್ಯಪಡೆಯ ಕ್ರಮಬಧ್ಧಗೊಳಿಸುವಿಕೆಯನ್ನು ಪೆÇ್ರೀತ್ಸಾಹಿಸುವುದಲ್ಲದೆ, ಇನ್ನೂ ಹೆಚ್ಚಿನ ಕಾರ್ಮಿಕರನ್ನು ವಿಶೇಷವಾಗಿ ತಾತ್ಕಾಲಿಕ ಮತ್ತು ಗುತ್ತಿಗೆ ವಲಯದ ಕಾರ್ಮಿಕರು ಇಎಸ್ಐ ಕಾಯ್ದೆಯಡಿಯಲ್ಲಿ ದೊರೆಯುವ ಆರೋಗ್ಯ ರಕ್ಷಣೆ ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಪಡೆಯುವುದನ್ನು ಉತ್ತೇಜಿಸುತ್ತದೆ. ಇದರೊಂದಿಗೆ ಇಎಸ್ಐಸಿಯು ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯನ್ನು ಅಗತ್ಯವಿರುವವರಿಗೆ ತಲುಪಿಸುವ ತನ್ನ ಬದ್ಧತೆಯನ್ನು ಉಳಿಸಿಕೊಂಡು ಭಾರತದ ಕಾರ್ಮಿಕ ಕಲ್ಯಾಣ ಕೇಂದ್ರಿತ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ, ಕಾರ್ಮಿಕರ ರಾಜ್ಯ ವಿಮಾ ನಿಗಮದ ಜಂಟಿ ನಿರ್ದೇಶಕರುಗಳಾದ, ಸುನಿಲ್ ಕುಮಾರ್ ಮೆಹತೋ, ಮನೀಷ್ ಗುಪ್ತ, ದರ್ಬರಾ ಸಿಂಗ್, ಉಪನಿರ್ದೇಶಕರು ಸಾರ್ವಜನಿಕ ಸಂಪರ್ಕ, ವಿನೋದ್ ಖಾರಕ್ವಾಲ್, ಕಾರ್ಯಪಾಲಕ ಅಭಿಯಂತರರು, ಉಪ ನಿರ್ದೇಶಕರುಗಳಾದ ಅಭಿಷೇಕ್ ಕುಮಾರ್ ಸಿಂಗ್, ಮಹೇಶ್ ಕುಮಾರ್ ಪಾಂಡೆ, ಸಂಗ್ ಪ್ರಿಯಾ ಆನಂದ್ ಹಾಗೂ ಇತರರು ಹಾಜರಿದ್ದರು.