ಬೆಂಗಳೂರು: ವಸತಿ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್ ಅವರ ನೇತೃತ್ವದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ದಲಿತರ ಸಮಸ್ಯೆಗಳ ಆಲಿಸುವ ಸಭೆಯಲ್ಲಿ ಸ್ಥಳದಲ್ಲಿಯೇ ಅಧಿಕಾರಿಗಳ ಸಮ್ಮುಖದಲ್ಲಿ ಕುಂದುಕೊರತೆ ಆಲಿಸಿ ಕೆಲವುಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು, ಕೆಲವು ಸಮಸ್ಯೆಗಳಿಗೆ ಭರವಸೆ ನೀಡಿದರು.
ಭೀಮ ಸಂಘಟನೆಗಳ ಒಕ್ಕೂಟ ಹಾಗು ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯರು ಹಾಗೂ ಪದಾಧಿಕಾರಿಗಳು, ದಲಿತರ ನೇತೃತ್ವದಲ್ಲಿ ಸಭೆ ನಡೆಸಿ ಸರ್ಕಾರದಿಂದ ದಲಿತ ಫಲಾನುಭವಿಗಳಿಗೆ ಉಚಿತವಾಗಿ ನೀಡುತ್ತಿರುವ ವಸತಿ ವಿಚಾರವಾಗಿ ಅವರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಎದುರೆ ಬಿಚ್ಚಿಟ್ಟರು, ಬಡವರಿಗೆ ನೀಡುತ್ತಿರುವ ಸೂರಿಗೆ ಪ್ರಭಾವಿಗಳು ಕೈಹಾಕಿದ್ದು, ನಿಜವಾದ ನಿರ್ಗತಿಕರಿಗೆ ಸಿಗುತ್ತಿಲಾ ಎಂದು ಅಳಲು ತೋಡಿಕೊಂಡರು.
ಭೀಮ ಸಂಘಟನೆಗಳ ಒಕ್ಕೂಟ ರಾಜ್ಯಧ್ಯಕ್ಷ ಮರಿಯಪ್ಪ ಮಾತನಾಡಿ, ದಲಿತ ಸಮಸ್ಯೆಗಳ ವಿಚಾರವಾಗಿ ಡಿ.25 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಭೀಮ ಸಂಘಟನೆಗಳ ಒಕ್ಕೂಟದಿಂದ ಆಮರಣಾನಂತರ ಹೋರಾಟ ಹಮ್ಮಿಕೊಳ್ಳಲಾಗಿತ್ತು, ಮರು ದಿನ ಸಂಜೆ ಸಚಿವರು ಕರೆ ಮಾಡಿ ಡಿಸೆಂಬರ್ 30 ರಂದು ಸಭೆ ಮಾಡಿಸಿ ಬಿಡಿಎ, ರಾಜೀವ್ ಗಾಂಧಿ, ಸ್ಲಂ ಬೋರ್ಡ್ ಅಧಿಕಾರಿಗಳ ಜೊತೆ ಸಭೆ ಮಾಡಲಾಗುತ್ತದೆ ಎಂದು ಹೇಳಿದರು. ಅದೇರೀತಿ ಮೀಟಿಂಗ್ ಮಾಡಿಸಿ ಕೆಲವು ಸಮಸ್ಯೆಗಳಿಗೆ ಪರಿಹಾರ ತಿಳಿಸಿದರು ಇನ್ನು ಕೆಲವು ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಾಧಕ ಬಾಧಕ ವಿಚಾರವಾಗಿ ತಿಳಿದುಕೊಂಡು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು ಎಂದರು.
ಬಡವರ ಮಾತುಗಳನ್ನು ಹಾಲಿಸಿ ಮೂಲಭೂತ ಸೌಕರ್ಯಗಳನ್ನು ಕೆಲವೇ ದಿನಗಳಲ್ಲಿ ಮಾಡಲಾಗುತ್ತದೆ, ಫಲಾನುಭವಿಗಳು ಮನೆ ಕಟ್ಟಲು ಸರ್ಕಾರಕ್ಕೆ ಹಣ ಕೊಡುವ ಬಗ್ಗೆ ಮಾತನಾಡಿ ಯಾವುದೇ ಕಾರಣಕ್ಕೂ ಅಧಿಕಾರಿಗಳು ಬಡವರಿಗೆ ಒತ್ತಡ ಹಾಕಬೇಡಿ ಹಂತಹಂತವಾಗಿ ಸರ್ಕಾರದ ಶುಲ್ಕವನ್ನು ಮಾತ್ರ ಕಟ್ಟಿಸಿಕೊಳ್ಳಿ ಇತರೆ ವಿಚಾರವಾಗಿ ಯಾವುದೇ ಹಣ ಕಟ್ಟಿಸಿಕೊಳ್ಳಬೇಡಿ ಹಾಗೂ ಕೊಡಬೇಡಿ ಎಂದು ಹೇಳಿದರು.
ಬಡವರು ವಾಸಿಸುವ ಮನೆಗಳಿಗೆ ಹಕ್ಕು ಪಾತ್ರಗಳು ಕೊಡುವ ಬಗ್ಗೆ ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯಕ್ಷ ಕನ್ನಳ್ಳಿ ಕೃಷ್ಣಪ್ಪ ಮಾತನಾಡಿ, 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಸಚಿವರು ಒಳ್ಳೆ ನಿರ್ಧಾರ ತೆಗೆದುಕೊಳ್ಳಲಾಯಿತು, ಮುಂದಿನ ದಿನಗಳಲ್ಲಿ ನಿರ್ಧಾರಗಳು ಹಾಗು ಕೆಲಸಗಳನ್ನು ಮಾಡದೆ ಇದ್ದರೆ ಸಚಿವರ ಮನೆ ಮುಂದೆ ತಮಟೆ ಧರಣಿ ನಡೆಸಲಾಗುತ್ತದೆ ಎಂದರು. ಸಂಘನೆಯ ಕಾರ್ಯಕರ್ತರ ಹಾಗು ದಲಿತರ ಸಮುಖದಲ್ಲಿ ಭರವಸೆ ನೀಡಿದ್ದಾರೆ. ಅಧಿಕಾರಿಗಳಿಂದ, ಸರ್ಕಾರದಿಂದ ದಲಿತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಯಾರು ಕಿವಿಗೂಡುತಿಲ್ಲ, ಹಲವು ಭಾರಿ ಸಂಬನಡಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಇಲ್ಲಿಯ ತನಕ ಪ್ರಯೋಜನವಾಗಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ದಲಿತರ ಸಮಸ್ಯೆ ಆಲಿಸಿದ ಸಚಿವರು ದಲಿತರಿಗೆ ನೀಡಿರುವ ವಸತಿಯಲ್ಲಿ ಲೋಪದೋಷಗಳ ಬಗ್ಗೆ ವರದಿ ಕೊಡಿ, ಫಲಾನುಭವಿಗಳಿಗೆ ಬಿಟ್ಟು ಈತರೆಯವರು ಸರ್ಕಾರದಿಂದ ಉಚಿತವಾಗಿ ಕೊಡುವ ಮನೆಗಳನ್ನು ಬಳಸಿಕೊಂಡು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಅಂತಹವರಿಗೆ ಕಡಿವಾಣ ಹಾಕಲಾಗುತ್ತದೆ, ಮಧ್ಯವರ್ತಿಗಳ ಹಾವಳಿಯನ್ನು ತಡೆಯಲಾಗುತ್ತದೆ. ಮನೆಗಳನ್ನು ಪಡೆದುಕೊಳ್ಳುವವರಿಗೆ ಕೆಲವೊಂದು ದಖಲಾತಿಗಳು ಅವಶ್ಯಕವಾಗಿ ಬೇಕು ಎಂದು ಅಧಿಕಾರಿಗಳು ಹೇಳುವ ವಿಚಾರವಾಗಿ ಕೆಲವೊಂದು ದಾಖಲಾತಿಗಳನ್ನು ಸರಲಿಕಾರಣಗೊಳಿಸಿ ಅದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಫಲಾನುಭವಿಗಳಿಗೆ ನೀಡುವ ಮನೆಗಳಿಗೆ ಸರ್ಕಾರಕ್ಕೆ ಕೊಡಬೇಕಿದ್ದ ಹಣ ಈ ಹಿಂದೆ 5 ಲಕ್ಷ ಕೊಡಬೇಕಿತ್ತು, ಆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ನಡೆಸಿ 2 ಲಕ್ಷಕ್ಕೆ ಕಡಿಮೆ ಮಾಡಲಾಗಿದೆ. ಅಧಿಕಾರಿಗಳಿಗೆ ಕೊಡಲೇಬೇಕಾದ ದಖಲಾತಿಗಳ ಬಗ್ಗೆ ತಿಳಿಸಿ 2, 3 ಧಕಲಾಯಿಗಲ್ಲಿ ಒಂದು ಇದ್ದಾರೆ ಸಾಕು ಎಂದು ತಿಳಿಸಲಾಯಿತು.ಲಿಂಗತ್ವ ಅಲ್ಪಸಂಖ್ಯಾತರಿಗೆ ಇಲ್ಲಿಯ ತನಕ ವರಿಗೆ ಒಂದು ಸೂರು ಇಲ್ಲ, ನೆಲೆ ನಿಂತಿರುವ ದಾಖಲಾತಿಗಳ ಬಗ್ಗೆ ಪರಿಶೀಲಿಸಿ ಅದರಲ್ಲಿ ಒಂದನ್ನು ಮಾತ್ರ ಪರಿಗಣಿಸಿ ಎಂದು ಸೂಚಿಸಿದರು.
ಸಚಿವರು ನಡೆಸಿ ಸಭೆಯಲ್ಲಿ ಸಂಘಟನೆಯ ಶರಣಪ್ಪ, ಕಾಡುಗೋಡಿ ಸಣ್ಣಪ್ಪ, ಅಮೃತಳ್ಳಿ ನಾರಾಯಣ ಸ್ವಾಮಿ, ರಫಿಕ್, ಬಿ ಎನ್ ಮುನಿಮಾರಪ್ಪ, ಕೃಷ್ಣರಾಮ ಭೋವಿ, ಗಂಗಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಸಭೆಯಲ್ಲಿ ಬಿಡಿಎ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ adc ಅಧಿಕಾರಿಗಳು, ರಾಜೀವಗಾಂಧಿ, ಜಲಮಂಡಳಿ , ಬಿಬಿಎಂಪಿ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.