ಬೆಂಗಳೂರು: ಆಧುನಿಕ ಕಾಲದಲ್ಲಿ ಪುರುಷನಷ್ಟೇ ಮಹಿಳೆಯರು ಸಮಾನರು ಎಂದು ತಿಳಿದು ಅವಕಾಶಗಳನ್ನು ಕೊಡಬೇಕು, ಪುರುಷರ ಚಿಂತನೆ, ಮನಸ್ಥಿತಿ ಬದಲಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಇದ್ದಾರೆ, ಹೀಗಾಗಿ ಅವಕಾಶಗಳನ್ನು ಕೊಟ್ಟಾಗ ಮಾತ್ರ ತಮ್ಮ ಸಾಮರ್ಥ್ಯ ತೋರಿಸಲು ಸಾಧ್ಯವಾಗುತ್ತದೆ. ಮಹಿಳೆಯರ ಕುರಿತು ಪುರುಷರು ಗೌರವ ಬೆಳಸಿಕೊಳ್ಳಬೇಕು, ಹಾಗೆ ಮಹಿಳೆಯರನ್ನು ಎಲ್ಲೆಡೆಯೂ ಸಹ ಗೌರವದಿಂದ ಕಾಣಬೇಕೆಂದರು.ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯ ಜೊತೆಯಲ್ಲಿ ಕೊಡುಗೆ ನೀಡಿದ್ದಾರೆ. ಮಹಿಳೆಯರು ಸಾಮಾನತೆ ಮತ್ತು ಸಮಾನ ಅವಕಾಶ ಸಿಗಬೇಕು.ಮಹಿಳೆಯರ ಪ್ರತಿಭೆಗೆ ಸಮಾನ ಅವಕಾಶ ನೀಡಿ, ಪ್ರೋತ್ಸಹ ನೀಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉತ್ತಮ ಮಹಿಳಾ ಅಧಿಕಾರಿ ಮತ್ತು ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಮುಖ್ಯ ಕಾರ್ಯದರ್ಶಿಯಾಗಿ ಮಹಿಳೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಮಹಿಳೆಯರಿಗೆ ಪುರುಷರು ರಕ್ಷಣೆ ನೀಡಿ!
ಕೊಂಡಜ್ಜಿ ಬಸಪ್ಪ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘ(ರಿ) ರಾಜ್ಯ ಘಟಕದವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ ಭಾರತದ ಅಭಿವೃದ್ಧಿ ಪಥದಲ್ಲಿ ಸರ್ಕಾರಿ ಮಹಿಳಾ ನೌಕರರ ಕೊಡುಗೆಗಳು ಶೈಕ್ಷಣಿಕ ಕಿರುಚಿತ್ರ ಬಿಡುಗಡೆ ಮತ್ತು ಪುಸ್ತಕಗಳ ಬಿಡುಗಡೆ ಸಂಘಧ ಜಿಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಸಾಹಿತ್ಯ ವೇದಿಕೆ ಲೋಗೋ ಬಿಡುಗಡೆ , “ನುಡಿಮುತ್ತು” ಸಿನಿಮಾದ ಪೋಸ್ಟರ್ ಬಿಡುಗಡೆ ಸಾಧಕ ನೌಕರರಿಗೆ ಸನ್ಮಾನ ಸಾಧನೆ ಮಾಡಿದ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವರವರು ಮಾತನಾಡಿ,ಮಹಿಳೆಯರು ಭಯಭೀತಿ ಇಲ್ಲದೇ, ಧೈರ್ಯವಾಗಿ ಕೆಲಸ ಮಾಡಲು ರಕ್ಷಣೆ ನೀಡಲು ನಮ್ಮ ಜವಾಬ್ಬಾರಿಯಾಗಿದೆ. ಪುರುಷರು ನಾನೇ ಮೇಲು ಎಂಬ ಭಾವನೆ ಬೀಡಬೇಕು, ಮಹಿಳಾ ಅಧಿಕಾರಿ ನಿರ್ಭಿತಿಯಿಂದ ಕೆಲಸ ಮಾಡಲು ಪುರುಷರು ಸಹಕಾರ ನೀಡಬೇಕು ಎಂದು ಹೇಳಿದರು.
12ನೇ ಶತಮಾನದ ಕ್ರಾಂತಿಯೋಗಿ ಬಸವೇಶ್ವರ ಅನುಭವ ಮಂಟಪದಲ್ಲಿ 60ಮಹಿಳಾ ಸದಸ್ಯರಿದ್ದರು, ತಳ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.ಮಹಿಳೆಯರು ಭಯಭೀತಿ ಇಲ್ಲದೇ, ಧೈರ್ಯವಾಗಿ ಕೆಲಸ ಮಾಡಲು ರಕ್ಷಣೆ ನೀಡಲು ನಮ್ಮ ಜವಾಬ್ಬಾರಿಯಾಗಿದೆ. ಪುರುಷರು ನಾನೇ ಮೇಲು ಎಂಬ ಭಾವನೆ ಬೀಡಬೇಕು, ಮಹಿಳಾ ಅಧಿಕಾರಿ ನಿರ್ಭಿತಿಯಿಂದ ಕೆಲಸ ಮಾಡಲು ಪುರುಷರು ಸಹಕಾರ ನೀಡಬೇಕು ಎಂದು ಹೇಳಿದರು.
ಮಹಿಳೆಯರ ಸಾಧನೆಗಳಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಒಂದು ಸಾರಿ ಸರ್ಕಾರಿ ಕೆಲಸ ಸಿಕ್ಕಿದ್ದರೆ ಪಿಂಚಣಿ ಮತ್ತು ಎಲ್ಲ ಸೌಲವತ್ತು ಸಿಗುತ್ತದೆ.ಸರ್ಕಾರಿ ನೌಕರಿ ಸಿಕ್ಕಿದರೆ ಬಹಳ ಋಷಿಪಡುತ್ತಾರೆ ಅಂತ ತಿಳಿದುಕೊಂಡಿರುತ್ತೇವೆ ಅದರು ಸರ್ಕಾರಿ ನೌಕರರು ಸಂಕಷ್ಟ, ಸಮಸ್ಯೆಗಳಿಂದ ಕೆಲಸ ಮಾಡುತ್ತಿದ್ದಾರೆ.ಮಹಿಳೆಯರು ಗಂಡ, ಮನೆ ಮಕ್ಕಳು ನೋಡಿಕೊಂಡು ಕೆಲಸಕ್ಕೆ ಹೋಗಬೇಕು. ಮಹಿಳೆಯರು ಕಛೇರಿ ಕೆಲಸಕ್ಕೆ ಬಂದರೆ ಶಿಸ್ತು, ಬದ್ದತೆ ಮತ್ತು ಕೆಲಸ ಶೀಘ್ರ ವಾಗಿ ಅಗುತ್ತದೆ.ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮೆಟರನಿಟಿ ಲೀವ್ ಎಲ್ಲವು ಸಿಗುತ್ತದೆ , ನಾನು ಕೇಂದ್ರ ಸಚಿವನಾಗಿದ್ದಾಗ ಗಂಡಸರು ಸಹ ಮೆಟರ್ ನಿಟ್ ನಮಗೂ ಕೊಡಿ ಎಂದು ಹೇಳಿದ್ದರು.
ವರ್ಗಾವಣೆ ಸಂದರ್ಭದಲ್ಲಿ ಮಹಿಳೆಯರಿಗೆ ಸಮಸ್ಯೆಯಾಗುತ್ತದೆ, ಸಮಸ್ಯೆ ನಿವಾರಣೆಗಾಗಿ ಗಂಡ, ಹೆಂಡತಿಗೆ ಒಂದು ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ನಿರ್ಣಯ ತರಲಾಯಿತು.ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಮತ್ತು ಶೌಚಲಯ ವ್ಯವಸ್ಥೆಗಳು ಇಲ್ಲ ಮತ್ತು ಕಡ್ಡಾಯವಾಗಿ ಎಲ್ಲ ಇಲಾಖೆಗಳು ಸೌಲಭ್ಯ ನೀಡಬೇಕು.ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಮಾಡುತ್ತಿದ್ದಾರೆ ಇದು ತಪ್ಪು ಎಂದು ಹೇಳಿದರು.
ಮಹಿಳೆಯರಿಗೆ ಶಿಕ್ಷಣದಲ್ಲಿ ಅವಕಾಶ ನೀಡಿದವರು ಸಾವಿತ್ರಿಬಾಯಿ ಫುಲೆ
ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಶಿಕ್ಷಣದಿಂದ ವಂಚಿತರಾದ ಮಹಿಳೆಯರಿಗೆ ಶಿಕ್ಷಣದಲ್ಲಿ ಅವರಿಗೆ ಅವಕಾಶ ನೀಡಿದವರು ಸಾವಿತ್ರಿಬಾಯಿ ಪುಲೆ.ಸ್ವಾತಂತ್ರ್ಯ ಪೂರ್ವದಲ್ಲಿ ಶೇಕಡ 11ರಷ್ಟು ಸಾರಕ್ಷತೆ ಇತ್ತು ಇಂದು ಶೇಕಡ 71ರಷ್ಚು ಸಾರಕ್ಷತೆ ಇದೆ.ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಅವಕಾಶವಿದೆ. ಡಾ.ಬಿ.ಆರ್.ಅಂಬೇಡ್ಕರ್ ರವರು ಮಹಿಳೆಯರ ಪರ ಕಾನೂನುಗಳನ್ನು ತಂದರು.
2010ರಲ್ಲಿ ಸೋನಿಯಗಾಂಧಿ ರವರು ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಲೋಕಸಭಾ, ವಿಧಾನಸಭೆ ಮತ್ತು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 33ರಷ್ಟು ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎಂದು ಮಂಡನೆ ಕಾರಣಂತರಗಳಿಂದ ಲೋಕಸಭೆಯಲ್ಲಿ ಪಾಸ್ ಆಗಲಿಲ್ಲ.
ರಾಷ್ಟ್ರದಲ್ಲಿ ಆರ್ಥಿಕ ಸಮಸ್ಯೆ ಬಂದಾಗ ಮಹಿಳೆಯರು ಶೇಕಡ 28ರಷ್ಟು ಉಳಿತಾಯದ ಹಣ ಇತ್ತು.ಆರ್ಥಿಕ ಸಂಕಷ್ಟ ಸಮಯದಲ್ಲಿ ಸಹ ಉಳಿತಾಯದ ಹಣವನ್ನು ಕುಟುಂಬದ ನಿರ್ವಹಣೆ ಮಾಡಲು ಮಹಿಳೆಯರಿಗೆ ಸಾಧ್ಯವಾಯಿತು.
ಮಹಿಳಾ ನೌಕರರ ಸಮಸ್ಯೆಗಳನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು!
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಮಹಿಳಾ ನೌಕರರ ಸಮಸ್ಯೆಗಳನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು. ಕುಟುಂಬ ನಿರ್ವಹಣೆ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಮಹಿಳೆಯರು ಶ್ರಮಿಸುತ್ತಿದ್ದಾರೆ.ಮಹಿಳೆಯರ ಮೇಲೆ ಸಾವಿರಾರು ವರ್ಷಗಳಿಂದ ದೌರ್ಜನ್ಯ ಮಾಡುತ್ತಿದ್ದರು, 12ಶತಮಾನದ ಕ್ರಾಂತಿಯೋಗಿ ಬಸವಣ್ಣರವರು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಮಹಿಳೆಯರಿಗೆ ಸಂವಿಧಾನ ಬದ್ದ ಸಮಾನ ಅವಕಾಶ ಕೊಟ್ಟರು.ರಾಣಿ ಅಬ್ಬಕ್ಕ , ಕಿತ್ತೂರು ರಾಣಿ ಚನ್ನಮ್ಮ, ಒನಕೆ ಒಬ್ಬವ್ವ ಸೇರಿ ಹಕ ಆರು ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ದೇಶದ ಬೆಳವಣಿಯಲ್ಲಿ ಮಹಿಳೆಯರ ಪಾತ್ರ ಡೊಡ್ಡದು.ಮಹಿಳೆಯರು ಕಾರ್ಯನಿರ್ವಹಿಸುವಲ್ಲಿ ಮಹಿಳೆಯರಿಗೆ ಸಂಕಷ್ಟ ಹೆಚ್ಚು, ಮಹಿಳೆಯರ ಸುರಕ್ಷತೆಗೆ ಕಠಿಣ ಕಾನೂನು ತರಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಗೆ 70ಲಕ್ಷ ದತ್ತಿ ಹಣವನ್ನು ಬಿಡುಗಡೆಯಾಗಿ ನೀಡಿದ ಶಿಕ್ಷಣ ಮಾತೆ ಲೂಸಿಯಮ್ಮರವರಿಗೆ ಇದೇ ವೇಳೆ ಸನ್ಮಾನಿಸಲಾಯಿತು.
ಸಾಹಿತಿ ಪ್ರೋ.ರಾಧಕೃಷ್ಣ, ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ನಿವೃತ್ತ ಐ.ಎ.ಎಸ್.ಅಧಿಕಾರಿ ಮಮತಾ, ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ರಾಷ್ಟ್ರದ್ಯಕ್ಷೆ ಡಾ.ಲತಾ ಮುಳ್ಳೂರ, ಇತಿಹಾಸ ಪ್ರಾಧ್ಯಪಕರಾದ ಪ್ರೋ.ಅನುರಾಧ, ಕೊಪ್ಪಳ ಜಿಲ್ಲಾ ಸಿ.ಇ.ಓ.ಮಲ್ಲಿಕಾರ್ಜುನ್,ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘದ ರಾಜ್ಯಾಧ್ಯಕ್ಷರಾದ ರಮಾ ಆರ್.ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಸಿ.ವಿ.ಶೈಲಜರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಪ್ರೊ. ಉಷಾಮಾಲಿನಿ, ಹಿರಿಯ ಉಪಾಧ್ಯಕ್ಷರು ಕೆ. ಎಸ್. ರೇಖಾ, ಸಹಕಾರ್ಯದರ್ಶಿ ಅಪೂರ್ವ ಎಸ್. ಕೆ, ಉಪಾಧ್ಯಕ್ಷರು ಸುಮಾ ಎಚ್. ಜಿ. ಖಜಾಂಜಿ.ಡಾ. ಪೂರ್ಣಿಮಾ ಎಸ್. ವಿ. ದಾಕ್ಷಾಯಿಣಿ ಎಚ್. ಎನ್. ದಾಕ್ಷಾಯಿಣಿ ವಿ. ವೇದಾವತಿ ಜೆ. ಜಿ.,ಡಾ. ಆಶಾಬೇಗಂ ಅ. ಮುನವಳ್ಳಿ ಸುಮತಿ ಎಂ. ಜಿ. ಡಾ. ಸೀಮಾ ಕೌಸರ್, ಉಷಾರಾಣಿ ಡಿ. ಜಿ. ಆರ್. ರಾಧಾ, ಪದ್ಮಶ್ರೀ ಆರ್.ನೇತ್ರಾವತಿ ಯು, ವಿಜಯಲಕ್ಷ್ಮಿ ಎನ್. ರೊಟ್ಟಿ,ಸುಪ್ರಿತಾ ಕೆ. ಕೀರ್ತಿಕುಮಾರಿ ಜೆ. ಎಂ. ಶ್ರೀಮತಿ ಯಮುನಾ ಸಿ. ಸುನಿತಾ ವಿ. ಆರ್, ಲಲಿತಾ ಪಾಟೀಲ ಉಪಸ್ಥಿತರಿದ್ದರು.