ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಕೆ ಗೋಪಾಲಯ್ಯ ಅವರ 65ನೇ ವರ್ಷದ ಹುಟ್ಟುಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸಿಕೊಂಡರು.
ಮಹಾಲಕ್ಷ್ಮಿ ಲೇಔಟ್ ಶಾಸಕರ ಕಛೇರಿಯ ಆವರಣದಲ್ಲಿ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಶಾಸಕರ ಹುಟ್ಟುಹಬ್ಬ ಹಿನ್ನೆಲೆ ಭಕ್ಷ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. ಕ್ಷೇತ್ರದ ಜನಸಾಮಾನ್ಯರು, ವಾರ್ಡ್ ನ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ನೂರಾರು ಜನ ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.
ಇನ್ನು ಶಾಸಕರಾದ ಕೆ ಗೋಪಾಲಯ್ಯ ಅವರ ಜೊತೆಯಲ್ಲಿ ಪುತ್ರರು ಸಹ ಭಾಗಿಯಾಗಿದ್ದು ವಿಶೇಷವಾಗಿದ್ದು ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಹಾಗೂ ಅನ್ನದಾನವನ್ನು ಮಾಡಿದರು.
ಆರ್ಸಿಬಿ ಅಭಿಮಾನಿಗಳ ಕಾಲ್ತುಳಿತ ಪ್ರಕರಣ ಸಂಬಂಧ ಈ ಬಾರಿ ಶಾಸಕರು ಸರಳವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಪ್ರತಿ ವರ್ಷವೂ ಸಹ ದೊಡ್ಡ ಮಟ್ಟದಲ್ಲಿ ಇಡೀ ದಿನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವೇದಿಕೆಯನ್ನು ನಿರ್ಮಾಣ ಮಾಡಿ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.
ನೆಚ್ಚಿನ ಅಭಿಮಾನಿಗಳು ಕ್ಷೇತ್ರದ ಜನತೆ ಸ್ನೇಹಿತರು ಬಂಧು ಬಳಗ ಎಲ್ಲರೂ ಸಹ ಹೋಗುಚವನ್ನು ನೀಡುವ ಮೂಲಕ ಶುಭಾಶಯವನ್ನು ಕೊರಿದರು. ಇದರ ಮಧ್ಯೆ ಸಣ್ಣಪುಟ್ಟ ಅಂಗಡಿ ಮಾಲೀಕರಿಗೆ ಬಿಸಿಲು ಹಾಗೂ ಮಳೆ ರಕ್ಷಣೆ ನೀಡುವ ನಿಟ್ಟಿನಲ್ಲಿ ದೊಡ್ಡ ಛತ್ರಿಗಳನ್ನು ಸಹ ನೀಡಿದರು.
ಈ ಬಾರಿಯ ಸರಳವಾಗಿ ಆದರೂ ಸಹ ಒಂದು ವಿಷಯವಾಗಿದ್ದು, ಅದು ಬಂದಿರುವ ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ಮನೋರಂಜನೆ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದ್ದು, ಗಾಯಕರು ಹಾಡುಗಳನ್ನು ಹಾಡುವ ಮೂಲಕ ನೆರದಿದ್ದವರಿಗೆ ರಂಜಿಸಿದರು.