ಬೆಂಗಳೂರು: ಸಣ್ಣಕತೆಗಳು ಮನುಷ್ಯನ ಭಾವನೆಗಳಿಗೆ ಸೂಕ್ತ ಅಭಿವ್ಯಕ್ತಿಯ ಮಾಧ್ಯಮವಾಗ ಬಲ್ಲದು ಎಂದು ಅಂತಾರಾಷ್ಟ್ರೀಯಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಪ್ರತಿಪಾದಿಸಿದರು.
ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಉರ್ದು,ಹಿಂದಿ,ಇಂಗ್ಲಿಷ್,ಅರೇಬಿಕ್ ಮುಂತಾದ ಬಹುಭಾಷೆಯ ಜ್ಞಾನವಿದ್ದರೂ ಕನ್ನಡ ನನ್ನ ಮೆಚ್ಚಿನ ಭಾಷೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾನು ಬರೆದ ಹಸೀನಾ ಕತೆಯ ಸಿನಿಮಾವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಪ್ರಶಸ್ತಿ ಪಡೆದಿದೆ. ನನ್ನ ಸ್ನೇಹಿತೆ ದೀಪಾ ಬಾಸ್ತಿ ಎದೆಯ ಹಣತೆ ಪುಸ್ತಕವನ್ನು ಓದುವ ಮೂಲಕ ಇಂಗ್ಲಿಷ್ಗೆ ಭಾಷಾಂತರಿಸಿದರು.
ನನ್ನ ಎದೆಯ ಪುಸ್ತಕ ಕಾಮನ್ ವೆಲ್ತ್ ಪ್ರಶಸ್ತಿಗೆ ಆಯ್ಕೆಯಾದ ಹದಿಮೂರು ಪುಸ್ತಕದಲ್ಲಿ ಒಂದಾಗಿತ್ತು ಎಂದರು. ಕನ್ನಡದ ಅಕ್ಷರಗಳು ಗೊತ್ತಿಲ್ಲದ ಬಾಲೆ ಕೆಲವೇ ತಿಂಗಳುಗಳಲ್ಲಿ ಕನ್ನಡವನ್ನು ಸಮರ್ಥವಾಗಿ ಕಲಿತು ಬೂಕರ್ ಪ್ರಶಸ್ತಿ ಪಡೆಯುವವರೆಗಿನ ಅನುಭವವನ್ನು ಮತ್ತು ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು.
ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕಿ ಸಿಸ್ಟರ್ ಅಲ್ಲಿನ, ಪ್ರಾಂಶುಪಾಲೆ ಡಾ.ಲೇಖಾ ಚಾರ್ಜ್, ಸಿಸ್ಟರ್ ಆನೆಟ್, ಸಿಸ್ಟರ್ ಆಯೋನ ಸೇರಿದಂತೆ ಮುಂತಾದವರಿದ್ದರು.