ಅಂಕೋಲಾ: ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದ ಫಲವಾಗಿ ರೈತರಿಗೆ ಬೆಳೆ ವಿಮೆ ಜಮಾ ಮಾಡಲಾಗಿದೆ ಎಂದು ಅಂಕೋಲಾ ಬಿಜೆಪಿ ಪ್ರಮುಖರು ತಿಳಿಸಿದರು.
ಅಂಕೋಲಾ ಬಿಜೆಪಿ ಪ್ರಮುಖರಿಂದ ಪತ್ರಿಕಾಗೋಷ್ಠಿ ನಡೆಸಿ ಸಂಸದ ಕಾಗೇರಿ ರವರಿಗೆ ಅಭಿನಂದನೆ ಸಲ್ಲಿಸಿದರು. ನಂತರ ಮಾತನಾಡಿ, ಅಂಕೋಲಾ ಬಿಜೆಪಿ ಪ್ರಮುಖರು ಪತ್ರಿಕಾಗೋಷ್ಠಿ ನಡೆಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಅಡಿಕೆ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.ಕೊಳೆ ರೋಗ ಸೇರಿದಂತೆ ಪಾಕೃತಿಕ ಸಮಸ್ಯೆಯಿಂದ ಅಡಿಕೆ ಇಳುವರಿ ಕುಂಠಿತವಾಗಿತ್ತು.ಈ ಬಗ್ಗೆ ಜಿಲ್ಲೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ರವರು ವಿಶೇಷ ಮುತುವರ್ಜಿ ವಹಿಸಿ ಕೇಂದ್ರ ಕೃಷಿ ಸಚಿವರೊಂದಿಗೆ ಚರ್ಚಿಸಿದ ಪರಿಣಾಮ ರೈತರ ಖಾತೆಗೆ ಹಂತ ಹಂತವಾಗಿ ಹಣ ಜಮಾ ಆಗುತ್ತಲಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ.ಓಬಿಸಿ ಮೋರ್ಚ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ.ನಿಕಟ ಪೂರ್ವ ಅಧ್ಯಕ್ಷ ಸಂಜಯ ನಾಯ್ಕ.ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಾಂತ ನಾಯ್ಕ.ಶ್ರೀಧರ ನಾಯ್ಕ.ಪುರಸಭೆ ಸದಸ್ಯರಾದ ನಾಗರಾಜ ಐಗಳ.ಶ್ರೀಮತಿ ತಾರಾ ನಾಯ್ಕ.
ಪಕ್ಷದ ಪ್ರಮುಖರಾದ ದಾಮೋಧರ ರಾಯ್ಕರ.ರಾಘವೇಂದ್ರ ಭಟ್ಟ ಸುಂಕಸಾಳ.ಮಂಕಾಳು ಗೌಡ.ನಾಗೇಂದ್ರ ನಾಯ್ಕ.ನಾಗೇಶ ಕಿಣಿ.ಪುತ್ತು ಮಹಾಲೆ.ಶ್ರೀಮತಿ ರಾಜೇಶ್ವರಿ ಕೇಣಿಕರ.ಸುಬ್ರಮಣ್ಯ ರೇವಣಕರ.ಸುಧಾಕರ ಭಟ್ಟ.ನಾರಾಯಣ ಹೆಗಡೆ ಕರಿಕಲ್ಲ.ಸುರೇಶ ನಾಯ್ಕ ಸುಂಕಸಾಳ್.ಸುರೇಶ ನಾಯ್ಕ ಬೇಳಾ.ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಪತ್ರಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.