ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ, ಕನ್ನಡ ಚಿತ್ರರಂಗದ ದಂತಕಥೆ ಲೀಲಾವತಿ ಅವರನ್ನು ನೆಲಮಂಗಲದ ಅವರ ನಿವಾಸದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ. ಎಸ್. ರಕ್ಷಾ ರಾಮಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನೆಲಮಂಗಲದ ಅವರ ತೋಟದ ಮನೆಯಲ್ಲಿ ಲೀಲಾವತಿ ಅವರನ್ನು ಭೇಟಿ ಮಾಡಿದ ರಕ್ಷಾ ರಾಮಯ್ಯ ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ದೇವರಲ್ಲಿ ಹಾರೈಸಿದರು.
ಚಿತ್ರನಟ, ಪುತ್ರ ವಿನೋದ್ ರಾಜ್, ಅವರ ಕುಟುಂಬ ಸದಸ್ಯರನ್ನು ಭೇಟಿಮಾಡಿ ಹಿರಿಯ ನಟಿ ಬೇಗ ಚೇತರಿಸಿಕೊಂಡು ಚಿತ್ರರಂಗ ಮತ್ತು ಜನಪರ ಸೇವೆಯಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸಿದರು.