ಯಶವಂತಪುರ: ಎಂ.ಇ.ಐ.ಸಂಸ್ಥೆಯಲ್ಲಿ ಭಾರತೀಯ ಸೈನಿಕರು ಪಾಕಿಸ್ತಾನದಲ್ಲಿ 9ಕಡೆಗಳಲ್ಲಿ ನೂರಾರು ಉಗ್ರರನ್ನು ಸೆದೆಬಡಿದು ದಿಟ್ಟ ಸಾಹಸಕ್ಕೆ ಮೆಚ್ಚಿ ಬೆಂಬಲ ಸೂಚಿಸಿ ಫಲಕ ಹಿಡಿದು ಪ್ರದರ್ಶನ ಮಾಡಿದರು.
ಎಂ.ಇ.ಐ. ಸಂಸ್ಥೆಯ ಅಧ್ಯಕ್ಷರಾದ ಎಸ್.ಮನೋಹರ್ ರವರು, ವ್ಯವಸ್ಥಾಪಕ ನಿರ್ದೇಶಕರಾದ ಡಿ.ಪದ್ಮಾವತಿರವರು ಅಧಿಕಾರಿ, ನೂರಾರು ನೌಕರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್.ಮನೋಹರ್ ರವರು ಮಾತನಾಡಿ ಪಹಲ್ಲಾಮ್ ನಲ್ಲಿ 26ಅಮಾಯಕರು ಹತ್ಯೆ ಮಾಡಿದ ಪ್ರತಿಕಾರ ತಿರಿಸಲು ಭಾರತೀಯ ಸೈನಿಕರು ಪಾಕಿಸ್ತಾನ ಉಗ್ರರ ಅಡುಗುತಾಣ ನುಗ್ಗಿ ನೂರಾರು ಉಗ್ರರನ್ನ ಸೆದೆ ಬಡಿದರು.
ಭಾರತೀಯ ಸೈನಿಕರ ದಿಟ್ಟ ಸಾಹಸಕ್ಕೆ ಅಭಿನಂದನೆಗಳು, ಸೈನಿಕರ ಹೋರಟಕ್ಕೆ ನಾವೆಲ್ಲ ಸಹಕಾರ ನೀಡುತ್ತೇವೆ.
ಪಹಾಲ್ಲಾಮ್ ದುರಂತದಲ್ಲಿ ಮಡಿದ ಭರತ್ ಭೂಷಣ್ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಲಾಯಿತು. ಭಾರತೀಯ ಸೈನ್ಯದ ಮಹಿಳಾ ಅಧಿಕಾರಿಗಳ ದಿಟ್ಟ ಸಾಹಸ ಇಡಿ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ, ಮಹಿಳೆಯರು ಎಲ್ಲ ರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಪಾಕಿಸ್ತಾನದ ವಿರುದ್ದ ಹೋರಾಟದಲ್ಲಿ ಭಾರತೀಯ ಸೈನಿಕರ ಜೊತೆಯಲ್ಲಿ ನಿಲ್ಲಲು ಯುದ್ದದಲ್ಲಿ ಹೋರಾಟ ಮಾಡಲು ನಾವು ಸಿದ್ದರಾಗಿದ್ದೇವೆ ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದಶಕಿ ಡಿ.ಪದ್ಮಾವತಿ ರವರು ಮಾತನಾಡಿ, 26ಅಮಾಯಕ ಜನರ ಪ್ರಾಣಕ್ಕೆ ಸರಿಯಾದ ಪ್ರತಿಕಾರ ಭಾರತದ ಸೇನೆ ಕೊಟ್ಟಿದೆ. ದೇಶ ಮೊದಲು ದೇಶಕ್ಕಾಗಿ ನಾವು ಹೋರಾಟ ಮತ್ತು ಯುದ್ದಕ್ಕೆ ಭಾಗವಹಿಸಲು ಸಿದ್ದರಾಗಬೇಕು ಎಂದು ಹೇಳಿದರು.