ಬೆಂಗಳೂರು: ತಮಿಳುನಾಡಿನ ವಿಶ್ವಾಸಾರ್ಹ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ಗಳಲ್ಲಿ ಒಂದಾದ ನವೀನ್ಸ್ ಇಂದು 250 ಕೋಟಿ ರೂ. ಹೂಡಿಕೆಯೊಂದಿಗೆ ಬೆಂಗಳೂರು ವಸತಿ ಮಾರುಕಟ್ಟೆಗೆ ತನ್ನ ಪ್ರವೇಶವನ್ನು ಘೋಷಿಸಿದೆ.
ಕಂಪನಿಯು ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿ ತನ್ನ ಹೊಸ ಕಚೇರಿಯನ್ನು ಪ್ರಾರಂಭಿಸಿದ್ದು ಪ್ರೆಸ್ಟೀಜ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇರ್ಫಾನ್ ರಜಾಕ್ ಅವರು ಉದ್ಘಾಟಿಸಿದರು. ಜೆಪಿ ನಗರ 4ನೇ ಹಂತದಲ್ಲಿ ತನ್ನ ಮೊದಲ ಐಷಾರಾಮಿ ವಸತಿ ಅಪಾರ್ಟ್ಮೆಂಟ್ ಯೋಜನೆಯನ್ನು ಘೋಷಿಸಿತು. ಮೂರು ದಶಕಗಳಿಂದ 125+ ಯೋಜನೆಗಳ ಮೂಲಕ, ವಸತಿಗೃಹಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೂಲಕ ಚೆನ್ನೈನಲ್ಲಿ ರಿಯಾಲ್ಟಿ ಬ್ರ್ಯಾಂಡ್ ಆಗಿದ್ದು, ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಸ್ತರಣೆ ಹೆಚ್ಚಿಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನವೀನ್ಸ್ನ ಸಂಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಆರ್ ಕುಮಾರ್, “ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಘೋಷಿಸಲು ಸಂತಸವಾಗುತ್ತಿದೆ. ಇದು ಅಭೂತಪೂರ್ವ ಬೆಳವಣಿಗೆ ಮತ್ತು ಬೇಡಿಕೆಗೆ ಸಾಕ್ಷಿಯಾಗಿದೆ. ಬಲವಾದ ನೈತಿಕ ತತ್ವಗಳು ಮತ್ತು ಗ್ರಾಹಕರ ಕೇಂದ್ರಿತ ಅಭ್ಯಾಸಗಳ ಮೇಲೆ ಸ್ಥಾಪಿತವಾಗಿರುವ ನವೀನ್ಸ್ನಲ್ಲಿ ನಾವು, ಕಟ್ಟಡದ ನಿಯಮಗಳನ್ನು 100% ಅನುಸರಿಸುತ್ತೇವೆ. ನಿವಾಸಗಳ ಗುಣಮಟ್ಟದ, ಕ್ರಿಯಾತ್ಮಕವಾಗಿ ಸೊಗಸಾದ ಮನೆಗಳನ್ನು ನಿರ್ಮಿಸಲು ನಾವು ಬದ್ಧವಾಗಿದ್ದೇವೆ” ಎಂದರು.
ಬೆಂಗಳೂರು ಮಾರುಕಟ್ಟೆಗೆ ತನ್ನ ಪ್ರವೇಶದ ಭಾಗವಾಗಿ, ನವೀನ್ಸ್ ನಗರದಲ್ಲಿ ತನ್ನ ಉದ್ಘಾಟನಾ ಯೋಜನೆಯನ್ನು ಘೋಷಿಸಿದೆ. 2024 ರ ಆರಂಭದಲ್ಲಿ ಯೋಜನೆ ಪ್ರಾರಂಭಿಸಲಾಗುವುದು. ಐಷಾರಾಮಿ ಯೋಜನೆಯನ್ನು ಸೂಕ್ಷ್ಮವಾಗಿ ಬಯೋಫಿಲಿಕ್ ಥೀಮ್ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ದೊಡ್ಡ ಡೆಕ್ಗಳು ಮತ್ತು ಹಸಿರು ಟೆರೇಸ್ಗಳನ್ನು ಸಂಯೋಜಿಸಲಾಗಿದೆ. ಈ ಪರಿಕಲ್ಪನೆಯು ನಿವಾಸಿಗಳಿಗೆ ಶಾಂತವಾದ ‘ಭೂದೃಶ್ಯದೊಳಗೆ ಇರುವ’ ಅನುಭವವನ್ನು ನೀಡುವ ಗುರಿಯನ್ನು ಹೊಂದಿದ್ದು, ಆಧುನಿಕ ಜೀವನವನ್ನು ಪ್ರಕೃತಿಯ ಪ್ರಶಾಂತತೆಯೊಂದಿಗೆ ಸಮನ್ವಯಗೊಳಿಸುತ್ತದೆ.
ನವೀನ್ಸ್ ಸಂಸ್ಥೆಯ ನಿರ್ದೇಶಕರಾದ ನವೀನ್ ಪ್ರತಿಕ್ರಿಯಿಸಿ “ಈ ಯೋಜನೆಯು ಬೆಂಗಳೂರಿಗೆ ಬಂದಿದ್ದು, ಚೆನ್ನೈ ಗ್ರಾಹಕರಲ್ಲಿ ಬಹುಕಾಲದಿಂದ ಮೆಚ್ಚುಗೆ ಮತ್ತು ಪ್ರೀತಿ ಗಳಿಸಿರುವ ನವೀನ್ಸ್, ಗ್ರಾಹಕರಿಗೆ ಗುಣಮಟ್ಟದ ಅನುಭವ ನೀಡುತ್ತದೆ” ಎಂದರು.
ನವೀನ್ಸ್ನ ಸಂಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಆರ್ ಕುಮಾರ್ ಮತ್ತು ನವೀನ್ಸ್ನ ನಿರ್ದೇಶಕರಾದ ನವೀನ್ ಹಾಜರಿದ್ದರು. ನವೀನ್ಸ್ ನೂತನ ಕಚೇರಿಗೆ ಬ್ರಿಗೇಡ್ ಗ್ರೂಪ್ ನ ಕಾರ್ಯಾಧ್ಯಕ್ಷ ಎಂ.ಆರ್.ಜೈಶಂಕರ್ ಭೇಟಿ ನೀಡಿದರು. ಕಂಪನಿಯು 1989 ರಿಂದ ನವೀನ್ಸ್ನ ಮೊದಲ ಉದ್ಯೋಗಿಯಾಗಿದ್ದ ಕೆ.ಷಣ್ಮುಗಂ ಅವರನ್ನು ಬೆಂಗಳೂರು ನಗರ ಮುಖ್ಯಸ್ಥರಾಗಿ ನೇಮಿಸಿದೆ.
ನಂ.125 ಇನ್ಫೆಂಟ್ರಿ ರಸ್ತೆ, ಶಿವಾಜಿನಗರ, ಬೆಂಗಳೂರು 560001 ವಿಳಾಸದಲ್ಲಿ ಕಚೇರಿ ಇದೆ.