ಬೆಂಗಳೂರು: ಮಾರುತಿ ಸುಜುಕಿ ನ್ಯೂ ಶಿಪ್ಟ್ ಬ್ರೆಝಾ ಕಾರ್ ಉದ್ಘಾಟನೆಯನ್ನು ಸ್ಯಾಂಡಲ್ ವುಡ್ ನ ಹಿರಿಯ ಕಾಮಿಡಿ ನಟ ಶಿನು ಮಿತ್ರಾ ಅವರು ಅದ್ದೂರಿಯಾಗಿ ನೆರವೇರಿಸಿದರು. 
ಬೆಂಗಳೂರಿನ ಮೈಸೂರು ರಸ್ತೆಯ ನಾಯಂಡಹಳ್ಳಿ ಸಿಗ್ನಲ್ ಸಮೀಪದಲ್ಲಿರುವ ಕಲ್ಯಾಣಿ ಮೋಟಾರ್ಸ್ ಮಾರುತಿ ಸುಜುಕಿ ಪ್ರಧಾನ ಕಚೇರಿಯಲ್ಲಿ The New Shift Brezza ಕಾರ್ ಲೋಕಾರ್ಪಣೆ ಮಾಡಿ ಮಾತನಾಡಿದ ಮಿತ್ರಾ ಅವರು, ಮಾರುತಿ ಸುಜುಕಿ ಸಂಸ್ಥೆ ನಮಗೆ ಸಾಕಷ್ಟು ಪರಿಚಯ ಸಂಸ್ಥೆಯಾಗಿದ್ದು ನಾನು ಮತ್ತು ನನ್ನ ಮಗನಿಗೆ ಮೊದಲ ಕಾರನ್ನು ಇಲ್ಲಿಯೇ ಖರಿದಿ ಮಾಡಲಾಗಿದೆ. ಮಾರುತಿ ಸುಜುಕಿ ಸಂಸ್ಥೆಯೊಂದಿಗೆ ಅಪಾರ ಪ್ರೀತಿ ಬಾಂಧವ್ಯವನ್ನು ಹಲವು ವರ್ಷಗಳಿಂದ ಹೊಂದಿದ್ದೇನೆ, ತಮ್ಮ ಮನೆಯವರಂತೆ ಕಾಣುವ ಸಿಬ್ಬಂದಿ ವರ್ಗದವರು ಹಾಗೂ ಸಂಸ್ಥೆ ಪ್ರಸ್ತುತ ಸಾಕಷ್ಟು ಸಂತೋಷವನ್ನು ನೀಡುತ್ತದೆ ಎಂದರು.
ಈಗ ಹೊಸದಾಗಿ ಮಾರುಕಟ್ಟೆಗೆಟ್ಟೆಗೆ ಮಾರುತಿ ಸುಜುಕಿ ಹಲವು ಬಣ್ಣದಲ್ಲಿ ಪೆಟ್ರೋಲ್ ಸಾಮಥ್ಯ ಹಾಗೂ ಕಾರಿನ ಒಳಗಡೆ ಇರುವಂತಹ ಫೀಚರ್ ಗಳ ಆಗಲಿ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದಾಗಿದೆ, ಗುಣಮಟ್ಟಕ್ಕೆ ಮತ್ತೊಂದು ಹೆಸರು ಕಲ್ಯಾಣಿ ಮೋಟರ್ಸ್ ನ ಮಾರುತಿ ಸುಜುಕಿ ಸಂಸ್ಥೆಯಾಗಿದೆ ಎಂದು ಸಂಸ್ಥೆಯ ಕಾರ್ಯವೈಖರಿ, ಸಾಧನೆಯನ್ನು ವ್ಯಕ್ತಪಡಿಸಿದರು.
ಕಲ್ಯಾಣಿ ಮೋಟಾರ್ಸ್ ನ ಉಪಾಧ್ಯಕ್ಷ ಎಸ್ ಎನ್ ಶೆಟ್ಟಿ ಮಾತನಾಡಿ, ನೂತನ ಬ್ರಿಜಾ ಇದು ಈಗ ಎಂದಿಗಿಂತಲೂ ಹೆಚ್ಚು ದಿಟ್ಟ, ಸ್ಮಾರ್ಟ್, ಸುರಕ್ಷಿತ ಮತ್ತು ಹೆಚ್ಚು ಶಕ್ತಿಶಾಲಿಯಾದ ಕಾಂಪ್ಯಾಕ್ಟ್ SUV ಆಗಿದೆ.
ಹೊಸ ಬ್ರೆಝಾ ಹೊಸ ವಿನ್ಯಾಸ, ಶಕ್ತಿಯುತ ಹೊಸ ಟರ್ಬೊ ಎಂಜಿನ್, ವರ್ಧಿತ ಸೌಕರ್ಯ, ಬುದ್ಧಿವಂತ ಸಂಪರ್ಕ ಮತ್ತು ವಿಭಾಗ-ಪ್ರಮುಖ ಸುರಕ್ಷತಾ ತಂತ್ರಜ್ಞಾನಗಳೊಂದಿಗೆ ವಿಕಸನಗೊಂಡಿದೆ, ಇದು ಇಂದಿನ ಆಧುನಿಕ ಭಾರತೀಯ ಗ್ರಾಹಕರಿಗೆ ಪರಿಪೂರ್ಣ SUV ಆಗಿದೆ.
The New Brezzaದ ವಿಶೇಷತೆಗಳು:
360 ಡಿಗ್ರಿ ಕ್ಯಾಮರಾ, 1.5ಲೀ ಹೈ ಬ್ರಿಡ್ ಎಂಜಿನ್ ,1.0L ಡೈರೆಕ್ಟ್ ಇಂಜೆಕ್ಷನ್ ಟರ್ಬೊ ಬೂಸ್ಟರ್‌ಜೆಟ್ ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನ ಪರಿಚಯವು ಅತ್ಯಂತ ದೊಡ್ಡ ಹೈಲೈಟ್ ಆಗಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 108 BHP ಮತ್ತು 170 Nm ಟಾರ್ಕ್ ಅನ್ನು ನೀಡುತ್ತದೆ.
ಹೊಸ ತಂತ್ರಜ್ಞಾನ ಅಳವಡಿಕೆ:
ವಿಶ್ವಾಸಾರ್ಹ 1.5L ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಸ್ಪೀಡ್ ಮ್ಯಾನುವಲ್ ಮತ್ತು ಗೆಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಮುಂದುವರಿಯುತ್ತದೆ.
ಸುಧಾರಿತ ಪ್ರಾಯೋಗಿಕತೆ ಮತ್ತು ದಕ್ಷತೆಗಾಗಿ CNG ರೂಪಾಂತರವು ಈಗ ಅಂಡರ್‌ಬಾಡಿ CNG ಟ್ಯಾಂಕ್ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ (ISS) ಅನ್ನು ಪಡೆಯುತ್ತದೆ. 64 ತರಹೇವಾರಿ ಬಣ್ಣದ ಲೈಟ್ಗಳು, ಹೊಸದಾಗಿ 10.1 ಅಡಿ ಅಕ್ರಮೈಸ್ ಶಬ್ದ ಅಳವಡಿಕೆ, ಸುಜುಕಿ 3.0 ಕನೆಕ್ಟ್ ಜೊತೆ 60ಕ್ಕಿಂತ ಹೆಚ್ಚು ಫೀಚರ್ಸ್ ಮತ್ತು 35ಕ್ಕಿಂತ ಹೆಚ್ಚು ಆ್ಯಪ್ ಗಳನ್ನು ಅಳವಡಿಸಲಾಗಿದೆ. 
ಕಾರ್ಯಕ್ರಮದಲ್ಲಿ ಮಾರುತಿ ಸುಜುಕಿ ಧಕ್ಷಿಣ ವಲಯದ ಸಿಒಒ ಮೋಹಿತ್ ಜಿಂದಾಲ್ , ಸಿಬಿಹೆಚ್ ವಿನೀತಾ ಜೈನ್ , ವಲಯ ವ್ಯವಸ್ಥಾಪಕ ಕುನಾಲ್ ವಿಜಿ,ಕಲ್ಯಾಣಿ ಮೋಟರ್ಸ್ ನಿರ್ದೇಶಕ ರೋಹನ್ ರಾಜ್ ,ಸಿಇಒ ವೆಂಕಟೇಶ್ವರ ಸೇರಿ ಸಂಸ್ಥೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.