ಬೆಂಗಳೂರು : ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಚೊಕ್ಕಸಂದ್ರದ ಮಹಿಮಪ್ಪ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಮತ್ತು ಬೂತ್ ಸಮಿತಿ ಅಭಿಯಾನಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಿದರು.
ನಂತರ ಸಭೆಯನ್ನ ಉದ್ದೇಶಿಸಿ ಮಾತನಾಡಿದ ನಿಖಿಲ್ ಅವರು ಈ ಸರ್ಕಾರ ವೈಟ್ ಟಾಪಿಂಗ್ ದುಡ್ಡು ಹೊಡೆಯುತ್ತಿದೆ. ಹೆಚ್ಚು ತೆರಿಗೆ ವಸೂಲಿ ಮಾಡೋ ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಿಲ್ಲ. ಇದು ಈ ರಾಜ್ಯದ ಪರಿಸ್ಥಿತಿ.ಆ ದೇವರೇ ಬಂದರು ಅಭಿವೃದ್ಧಿ ಸದ್ಯವಿಲ್ಲ ಅಂತ ಡಿಸಿಎಂ ಹೇಳ್ತಾರೆ, ಸತ್ಯವಾದ ಮಾತು ಆ ರೀತಿ ಬೆಂಗಳೂರು ನಗರವನ್ನ ಸೃಷ್ಟಿ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
*ವೈಟ್ ಟ್ಯಾಪಿಂಗ್ ಹೆಸರಲ್ಲಿ ದುಡ್ಡು ಹೊಡೆಯುತ್ತಿದೆ*
ದೇವರೇ ಬಂದರು ಬೆಂಗಳೂರು ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರ: ಹೌದು ಅದು ಸತ್ಯ ,ಆ ಭಗವಂತ ಬಂದ್ರು ಈ ಟ್ರಾಫಿಕ್ ನಲ್ಲಿ ಮನೆಗೆ ತಲುಪೋಕೆ ಆಗಲ್ಲ. ಅಂತಹ ಪರಿಸ್ಥಿತಿ ವಾತಾವರಣ ಈ ಸರ್ಕಾರ ಸೃಷ್ಟಿ ಮಾಡಿದೆ. ವೈಟ್ ಟ್ಯಾಪಿಂಗ್ ನಲ್ಲಿ ಎಷ್ಟು ದುಡ್ಡು ಮಾಡ್ತಿದೆ. ಒಂದು ರಸ್ತೆ ಗುಂಡಿ ಮುಚ್ಚಿಸುವ ಕೆಲಸ ಕೂಡ ಆಗಿಲ್ಲ. ಬೆಂಗಳೂರು ನಗರದಲ್ಲಿ ಹೆಚ್ಚು ತೆರಿಗೆ ವಸೂಲಿ ಮಾಡ್ತಾ ಇರುವ ಸರ್ಕಾರ ಬೆಂಗಳೂರು ಎಲ್ಲಿಗೆ ತಲುಪಿದೆ ಎಂದು ವಾಗ್ದಾಳಿ ನಡೆಸಿದರು.
ಮೊನ್ನೆ ಕೆಸಿಆರ್ ಅವರ ಮಗ ಹೇಳ್ತಾ ಇದ್ರು, ಹೈದರಾಬಾದ್ ಗೆ ಬಂದು ನೋಡಿ ಅಂತ. ಎಐ ತಂತ್ರಜ್ಞಾನ ದೇವೇಗೌಡ ಕಾಲದಲ್ಲಿ ಕ್ರಾಂತಿ ಆಯ್ತು. ಆದ್ರೆ ಇವತ್ತು ಐಟಿ ಕಂಪನಿಗಳಿಗೆ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಕೊಡ್ತಾ ಇಲ್ಲ ಈ ಸರ್ಕಾರ. ಹೈದರಾಬಾದ್ ಗೆ ಬನ್ನಿ ಅಂತ ಕರೀತಿದ್ರು ಇದು ಈ ಸರ್ಕಾರದ ಸಾಧನೆ ಎಂದರು.
*ನುಡಿದಂತೆ ನಡೆಯುತ್ತೇವೆ ಅಂತ ಭಾಷಣ ಮಾಡ್ತರೆ!*
ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ.ಸಿಎಂ, ಡಿಸಿಎಂ ಹೇಳ್ತಾರೆ ಎರಡು ಮೂರು ತಿಂಗಳ ಆ ಕಡೆ ಈ ಕಡೆ ಆಗಬಹುದು ಅಂತ ಹೇಳ್ತಾರೆ. ಮಾತು ಕೊಟ್ಟಿದ್ದು ಯಾರು. ಒಂದ್ಕಡೆ ನಾವು ನುಡಿದಂತೆ ನಡೆಯುತ್ತೇವೆ ಅಂತಾರೆ.ಇವತ್ತು ಕಣ್ಣ ಮುಂದೆ ಕಾಣ್ತಾ ಇದೆ ಇದು ಇವರು ನುಡಿದಂತೆ ನಡೆಯುತ್ತಿರುವುದು ಎಂದು ಡಿಸಿಎಂ,ಸಿಎಂ ವಿರುದ್ಧ ನಿಖಿಲ್ ಕಿಡಿಕಾರಿದರು.
*ಇದು ರಾಜ್ಯದ ಪರಿಸ್ಥಿತಿ*
ಈಗಾಗಲೇ ಕಾಂಗ್ರೆಸ್ ಸರ್ಕಾರ ನೀರಿನ ದರ, ಹಾಲಿನ ದರ, ಮೆಟ್ರೋ ದರವನ್ನ ಹೆಚ್ಚಿಗೆ ಮಾಡಿದ್ದಾರೆ, ಈ ಉಪಯೋಗಿಸುವ ತೈಲದ ಬೆಲೆ ಏರಿಕೆ ಮಾಡಬೇಕು ಅಂತ ಚಿಂತನೆ ರಾಜ್ಯ ಸರ್ಕಾರ ನಡೆಸುತ್ತಿದೆ. ಇದು ರಾಜ್ಯದಲ್ಲಿರುವ ಪರಿಸ್ಥಿತಿ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬೆಂಗಳೂರು ನಗರ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಈ ಸದಸ್ಯ ಅಭಿಯಾನ ಮಹತ್ವದಾಗಿದೆ. ನಗರ ಭಾಗದಲ್ಲಿ ಈ ಅಭಿಯಾನವನ್ನ ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಸುವಂತೆ ಕಾರ್ಯಕರ್ತರು ಮತ್ತು ಮುಖಂಡರಿಗೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಶ್ರೀ ಟಿ.ಎ.ಶರವಣ, ಬೆಂಗಳೂರು ಜೆಡಿಎಸ್ ಘಟಕದ ಅಧ್ಯಕ್ಷರಾದ ಹೆಚ್.ಎಂ. ರಮೇಶ್ ಗೌಡ, ದಾಸರಹಳ್ಳಿ ನಗರಸಭೆ ಮಾಜಿ ಅಧ್ಯಕ್ಷರಾದ ಡಾ. ಅಂದಾನಪ್ಪ, ದಾಸರಹಳ್ಳಿ ಜೆಡಿಎಸ್ ಘಟಕದ ಅಧ್ಯಕ್ಷರಾದ ಮುನಿಸ್ವಾಮಿ, ಬೆಂಗಳೂರು ನಗರ ವಿಭಾಗದ ಉಸ್ತುವಾರಿ ಜಗದೀಶ್ ನಾಗರಾಜಯ್ಯ, ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಛಾಯಾ, ಮುಖಂಡರಾದ ಕೆ.ಹನುಮಂತರಾಯಪ್ಪ, ಮಂಜೇಗೌಡ ಅವರು, ಭರತ್ ಗುಂಡಪ್ಪ, ಬಿ. ಬಲರಾಮ್, ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ಚಂದನ್ ದೊರೆ ಅವರುಗಳು ಸೇರಿದಂತೆ ಪ್ರಮುಖ ಮುಖಂಡರು ಮತ್ತು ಪದಾಧಿಕಾರಿಗಳು ಹಾಗೂ ವಾರ್ಡಿನ ಮುಖಂಡರು ಉಪಸ್ಥಿತರಿದ್ದರು.