ಭದ್ರಾವತಿ: ದಮ್ಮು, ತಾಕತ್ತು ಇದ್ರೆ ಶಾಸಕ ಬಿ ಕೆ ಸಂಗಮೇಶ್ ಅವರ ಮಗನ ಮೇಲೆ ಎಫ್ಐಆರ್ ದಾಖಲು ಮಾಡಲಿ. ಶಾಸಕರ ಮಗನ ಧ್ವನಿಯನ್ನು ಎಫ್ಎಸ್ಎಲ್ ಪರೀಕ್ಷೆ ಮಾಡಿಸಲಿ. ಅಧಿಕಾರಿಗಳು ಭದ್ರಾವತಿ ತಾಲೂಕಿಗೆ ಬರಲು ಹೆದರುತ್ತಿದ್ದಾರೆ. ಭದ್ರಾವತಿಯ ಮರ್ಯಾದೆಯನ್ನು ಕಾಂಗ್ರೆಸ್ ಶಾಸಕರು ಹರಾಜು ಹಾಕುತ್ತಿದ್ದಾರೆ. ಮುಂದಿನ ದಿನದಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಅಧಿಕಾರಿಗಳ ಮೇಲೆ ಭದ್ರಾವತಿಯ ಕಾಂಗ್ರೆಸ್ ಶಾಸಕರು ಮತ್ತು ಮತ್ತವರ ಮಕ್ಕಳ ದೌರ್ಜನ್ಯ, ಅಕ್ರಮ ದಂಧೆಗಳನ್ನು ಖಂಡಿಸಿ ಇಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಭದ್ರಾವತಿಯ ಮಾಧವಾಚರ್ ವೃತ್ತದಿಂದ ತಾಲ್ಲೂಕು ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಶಾಸಕರ ಪುತ್ರನನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಭದ್ರಾವತಿ ತಹಸೀಲ್ದಾರ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರು ಮನವಿ ಸಲ್ಲಿಸಲಾಯಿತು.
ಈ ಕುರಿತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಭದ್ರಾವತಿಲ್ಲಿ ಕಾಂಗ್ರೆಸ್ ಶಾಸಕರ ದೌರ್ಜನ್ಯ ಬಹಳ ದಿನ ನಡೆಯಲ್ಲ. ಅಭಿವೃದ್ದಿಗೆ ಮಿಸಲಿಡಬೇಕಾದ ಸಮಯವನ್ನು ಇಸ್ಪಿಟ್ ದಂಧೆ ಮತ್ತು ಮಾದಕ ವಸ್ತುಗಳ ಸಪ್ಲೆಗೆ ಶಾಸಕರು ಸಾಯವನ್ನ ಮೀಸಲಿಟ್ಟಿದ್ದಾರೆ ಎಂದು ಶಾಸಕ ಸಂಗಮೇಶ್ ವಿರುದ್ಧ ನಿಖಿಲ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರೋಧಿಗಳನ್ನ ಮುಗಿಸುವ ಕೆಲಸ
ಶಾಸಕರ ಕುಟುಂಬಕ್ಕೆ ಅಧಿಕಾರಿಗಳು ತಲೆ ತಗ್ಗಿಸುತ್ತಿರೋದು ಪ್ರಜಾಪ್ರಭುತ್ವದ ಕಗ್ಗೂಲೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಘಟನೆ ನಡೆಯುತ್ತಿದೆ.ಸರ್ಕಾರದ ವಿರೋಧಿಗಳನ್ನು ಮುಗಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ.ಸದನದ ಒಳಗಡೆ ಸಿ.ಟಿ ರವಿ ಅವರು ಅತ್ಯಂತ್ಯ ಪ್ರಭಾವಿ ಮಂತ್ರಿಗಳ ಬಗ್ಗೆ ಕೀಳಾಗಿ ಮಾತಾಡಿದರು ಅಂತ ಎಷ್ಟು ಠಾಣೆಗಳಿಗೆ ಅಲೆದಾಡಿಸಿದರು. ಆದರೆ ಈ ಪ್ರಕರಣದಲ್ಲಿ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಕಿಡಿಕಾರಿದರು.
ನಾನು ಯಾವ ಅಧಿಕಾರಿಗೂ ಕಾಲ್ ಮಾಡಿ ಇಂತ ಕೆಲಸ ಮಾಡಿ ಅಂತ ಹೇಳಿಲ್ಲ
ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷಭೇದ ಮಾಡದೇ ಕೆಲಸ ಮಾಡಿದ್ರು, ಕುಮಾರಣ್ಣ ಸಿಎಂ ಆದಾಗ ಒಂದೇ ಒಂದು ದಿನ ನಾನು ಅಧಿಕಾರಿಗೆ ಕಾಲ್ ಮಾಡಿ ಇಂತ ಕೆಲಸ ಮಾಡಿ ಅಂತ ಹೇಳಲಿಲ್ಲ. ಭದ್ರಾವತಿಯ ಜನರ ಪರ ನಾವಿದ್ದೇವೆ ಯಾರು ಹೆದರಬೇಡಿ.ನಿಮ್ಮ ಜತೆ ಪಕ್ಷ ಇದೆ. ನಾವಿದ್ದೇವೆ. ಇಂತಹ ಗೊಡ್ಡು ಬೆದರಿಕೆಗೆ ಎದರಬೇಡಿ ಎಂದು ಭದ್ರಾವತಿ ಮಹಾಜನತೆಗೆ ಮನವಿ ನಿಖಿಲ್ ಅವರು ಮನವಿ ಮಾಡಿದರು.
ಪಾರದರ್ಶಕವಾಗಿ ಕೆಲಸ ಮಾಡಿ
ಪೊಲೀಸ್ ನವರಿಗೆ ಕೈ ಮುಗಿದು ಕೇಳುತ್ತೇನೆ ಪಾರದರ್ಶಕವಾಗಿ ಕೆಲಸ ಮಾಡಿ. ಇಡೀ ರಾಜ್ಯಾಧ್ಯಂತ ಶಾಸಕರ ದುರಹಕಾರ ಗೊತ್ತಾಗಿದೆ. ರಾಜ್ಯದ ಜನರಿಗೆ ಮಾಧ್ಯಮದವರು ವಾಸ್ತವ ತಿಳಿಸಿದ್ದಾರೆ. ಅಪ್ಪಾಜಿ ಗೌಡರನ್ನ ನಾವು ನೆನಪಿಸಿಕೊಳ್ಳಬೇಕು ಆಸ್ತಿ ಮಾಡದೆ ಜನರ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಅಪ್ಪಾಜಿ ಗೌಡರು ಮರೆಯದ ಮಾಣಿಕ್ಯರಂತೆ ಭದ್ರಾವತಿಯಲ್ಲಿದ್ದರು.ಮುಂದಿನ ದಿನಗಳಲ್ಲಿ ಶಾರದಾ ಅಪ್ಪಾಜಿ ಗೌಡರನ್ನ ಗೆಲ್ಲಿಸಬೇಕಿದೆ. ದೇವೆಗೌಡರು ನಿನ್ನೆ ಅಧಿವೇಶನದಲ್ಲಿ ರೈತರ ಬಗ್ಗೆ ಸುಧಿರ್ಘವಾಗಿ ಮಾತಾಡಿದ್ದಾರೆ. ಏಳು ಬಾರೀ ಸಂಸದರಾಗಿರುವ ದೇವೇಗೌಡರು ಅದಿವೇಶನಕ್ಕೆ ಗೈರಾಗಿಲ್ಲ. ಆರೋಗ್ಯವನ್ನು ಲೆಕ್ಕಿಸದೇ ನದಿ ಮೂಲಗಳನ್ನು ಉಳಿಸಬೇಕು ಅಂತ ರೈತರ ಬಗ್ಗೆ ಅದಿವೇಶನದಲ್ಲಿ ಮಾತನಾಡಿದ್ದಾರೆ.ಅಂತಹ ವ್ಯಕ್ತಿ ಈ ದೇಶದಲ್ಲಿ ಮತ್ತೊಂಬ್ಬರು ಹುಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
VISL ಕಾರ್ಖಾನೆ ಪುನರ್ಶ್ಚೇತನ
ಕುಮಾರಣ್ಣ ಕೇಂದ್ರ ಸಚಿವರಾದ ಆರು ತಿಂಗಳಲ್ಲಿ ವೈಜಾಕ್ ಸ್ಟೀಲ್ ಕಂಪನಿಗೆ ಅನುಧಾನ ನೀಡಿದ್ದಾರೆ. ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಹದಿನೈದು ಸಾವಿರ ಕೋಟಿಯಷ್ಟು ಅನುಧಾನ ನೀಡಿ ಕಾರ್ಖಾನೆಗೆ ಮರು ಜೀವ ಕೊಡಲು ನಿರ್ಧರಿಸಿದ್ದಾರೆ. ಕುಮಾರಣ್ಣ ವಿಐಎಸ್ಎಲ್ ಉಳಿಸಲು ಸವಾಲಾಗಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಕಾರ್ಖಾನೆ ಪುನರ್ಶ್ಚೇತನ ಗೊಳ್ಳಲಿದೆ. ಎಂದು ತಿಳಿಸಿದರು.
ಇಲ್ಲಿಂದ ಹೊಸ ಅಧ್ಯಾಯ
ಈ ಪ್ರತಿಭಟನೆ ಇಲ್ಲಿಗೆ ಮುಕ್ತಾಯ ಆಗಲ್ಲ, ಇಲ್ಲಿಂದ ಹೊಸ ಅಧ್ಯಾಯ ಶುರುವಾಗಲಿದೆ. ಭದ್ರಾವತಿಯ ನಾಗರೀಕರು ಜಾಗೃತರಾಗಿರಬೇಕು ನಿಮ್ಮ ಜೊತೆ ನಾವಿರುತ್ತೇವೆ ಎಂದು ನಿಖಿಲ್ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾಪೂರ್ಯ ನಾಯಕ್ ಅವರು, ಮುಖಂಡರಾದ ಶ್ರೀಮತಿ ಶಾರದಾ ಅಪ್ಪಾಜಿಗೌಡರು, ಮಾಜಿ ಶಾಸಕರಾದ ಪ್ರಸನ್ನ ಕುಮಾರ್ ಅವರು, ತಾಲ್ಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಅಜಿತ್ ಅಪ್ಪಾಜಿ, ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಧರ್ಮ ಪ್ರಸಾದ್ ಅವರು ಸೇರಿದಂತೆ ತಾಲ್ಲೂಕು ಘಟಕಗಳ ಎಲ್ಲಾ ಅಧ್ಯಕ್ಷರು, ಮುಖಂಡರು, ಪದಾಧಿಕಾರಿಗಳು, ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.