ನವದೆಹಲಿ/ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರು, ಸಮಾಜ ಸೇವಕರು ಆಗಿರುವ ಸುಧಾ ಮೂರ್ತಿ ಅವರಿಗೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.
ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರಿಗೆ ರಾಜ್ಯಸಭಾ ಗೆ ನಾಮನಿರ್ದೇಶನ ಮಾಡಿರುವುದು ಅತ್ಯಂತ ಸಂತೋಷದ ಸಂಗತಿ. ‘ಮಹಿಳಾ ದಿನಾಚರಣೆ’ಯಂದೇ ಕನ್ನಡ ನೆಲದ ಸಾಧಕ ಮಹಿಳೆಯೊಬ್ಬರನ್ನು ಗುರುತಿಸಿ ಗೌರವಿಸಿರುವ ಪ್ರಧಾನಿಗಳಾದ ನರೇಂದ್ರ ಮೋದಿಯವರು ಅಭಿನಂದನಾರ್ಹರು ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು tweet ಮಾಡಿದ್ದಾರೆ.
ವಿನಮ್ರತೆ, ಸರಳ-ಸಜ್ಜನಿಕೆ, ಸೇವಾತತ್ಪರತೆಯ ಮೂಲಕ ಸಮಾಜಕ್ಕೆ ಮಿಡಿಯುತ್ತಿರುವ ಸುಧಾಮೂರ್ತಿ ಅವರಿಗೆ ಶುಭವಾಗಲಿ, ಅವರಿಂದ ಕನ್ನಡನಾಡಿಗೆ ಒಳಿತಾಗಲಿ ಎಂದು ಹಾರೈಸುತ್ತೇನೆ.