ಮೈಸೂರು: 2023-24 ನೇ ಸಾಲಿನ ಮೈಸೂರು ಜಿಲ್ಲಾ ವಾರ್ಷಿಕ ಕ್ರೀಡಾಕೂಟದಲ್ಲಿ ಮೈಸೂರು ಗ್ರಾಮಾಂತರ ವೃತ್ತದ ವೃತ ನಿರೀಕ್ಷಕರಾದ ಶಿವನಂಜಶೆಟ್ಟಿ ರವರು ಅಧಿಕಾರಿ ವರ್ಗದ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳ ಸುರಿಮಳೆಯನ್ನೇ ಬಾಚಿಕೊಂಡಿದ್ದಾರೆ.
7 ಪ್ರಥಮ ಬಹುಮಾನ ಹಾಗೂ ಎರಡು ದ್ವಿತೀಯ ಬಹುಮಾನ ಒಟ್ಟು 9 ಪದಕಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಮೈಸೂರು ಜಿಲ್ಲಾ ವಾರ್ಷಿಕ ಕ್ರೀಡಾ ಕೂಟದ ಅಧಿಕಾರಿ ವರ್ಗದವರ ಸರ್ವೋತ್ತಮ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಅಲ್ಲದೆ ಶಿವನಂಜ ಶೆಟ್ಟಿಯವರು ಇತ್ತೀಚೆಗೆ ಮಲೇಶಿಯಾದಲ್ಲಿ ನಡೆದ ಓಪನ್ ಅಂತರರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ಶಿಪ್ 2023 ರಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದು ಭಾರತಕ್ಕೆ ಹಾಗೂ ಕರ್ನಾಟಕಕ್ಕೆ ಅದರಲ್ಲೂ ಮೈಸೂರಿಗೆ ಹೆಮ್ಮೆಪಡುವಂಥ ಸಾಧನೆಗೈದು ಪೊಲೀಸ್ ಇಲಾಖೆಗೆ ಗೌರವತಂದು ಕೊಟ್ಟಿದ್ದನ್ನು ಗುರುತಿಸಿ ಪ್ರಸಂಶಿಸಿ ಅಡಿಷನಲ್ ಎಸ್ಪಿ ನಂದಿನಿ, ಎಸ್ ಪಿ ಸೀಮಾ ಲಟ್ಕರ್ ಹಾಗೂ ದಕ್ಷಿಣ ವಲಯದ ಐಜಿಪಿ ಡಾ. ಬೋರ ಲಿಂಗಯ್ಯ ರವರುಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ್ದಾರೆ.
ಜಿಲ್ಲಾಧ್ಯಕ್ಷರ ಜಿಲ್ಲಾ ಉಪ್ಪಾರ ಯುವಕರ ಸಂಘದ ಜಿಲ್ಲಾಧ್ಯಕ್ಷರಾದ ಎಂ ಜಯಕುಮಾರ್ಶಿ ಶಿವನಂಜಪ್ಪ ಶೆಟ್ಟಿ ರವರು ಪಡೆದ ಪದಕಗಳು, ಪೋಲೀಸ್ ಇಲಾಖೆಗೆ ಮತ್ತು ಉಪ್ಪಾರ ಸಮಾಜಕ್ಕೆ ಕೀರ್ತಿ ತಂದಿರುವ ಇವರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ಕೋರಿದರು.
ಚಾಮರಾಜನಗರ ಜಿಲ್ಲೆ ಇವರು ಚಾಮರಾಜನಗರ ಜಿಲ್ಲೆಯ ತಾಲೂಕಿನ ಕೋಡಿಮೋಳೆ ಗ್ರಾಮದವರು ಪದಕಗಳ ವಿವರ ಈ ಕೆಳಗಿನಂತಿವೆ.
Annual District sports-2023
1)100 mtr ………………….. 1st
2)Firing………………………..2nd
3)Shutle singles ………….1st
4)Shutle doubles…………1st
5)Shutle Mixed doubles.2nd
6)Tennis………………………1st
7)Shot put…………………….1st
8)Javelin throw……………..1st
9)Discuss throw…………….1st