ಬೆಂಗಳೂರು: ಕಲಾ ಸೌರಭ ಸಂಸ್ಥೆಯವರು ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಯಾವುದೇ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಸ್ಪರ್ಧೆಗಿಂತಲೂ ಕಡಿಮೆ ಇಲ್ಲದಂತೆ ಮೊದಲನೇ ಬಾರಿಗೆ ಅಚ್ಚುಕಟ್ಟಾಗಿ ನಟಿಸಿದ ಕೀರ್ತಿ ದತ್ತಾತ್ರೇಯ ಅವರಿಗೆ ಸಲ್ಲುತ್ತದೆ ಎಂದು ಸಂಸ್ಥೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್ ಗುಂಡೂರಾವ್ ಅವರು ತಿಳಿಸಿದರು.
ನಂತರ ಮಾತನಾಡಿದ ಅವರು ದೊಡ್ಡ ದೊಡ್ಡ ಮಟ್ಟದಲ್ಲಿ ಸಂಗೀತ ಸ್ಪರ್ಧೆಗಳು ನಡೆಸುತ್ತಿರುವುದನ್ನು ನಾವು ನೋಡಿದ್ದೇವೆ, ಭಾಗವಹಿಸಿದ್ದೇವೆ ಆದರೆ ಕಲಾ ಸೌರಭ ಸಂಸ್ಥೆಯವರು ಸಂಗೀತ ಪಂದ್ಯವನ್ನು ಕ್ರಿಕೆಟ್ ಮಾದರಿಯಲ್ಲಿ ನಡೆಸಿರುವುದು ಇದು ಸಂಗೀತ ಕ್ಷೇತ್ರದಲ್ಲಿ ಪ್ರಥಮ ಎನ್ನಬಹುದು.
ಸಂಗೀತ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಐಪಿಎಲ್ ಕ್ರಿಕೆಟ್ ಮಾದರಿಯಲ್ಲಿ ಕಲಾ ಸೌಲಭ್ಯ ಫೌಂಡೇಶನ್ ವತಿಯಿಂದ ಕಲಾ ಸೌಲಭ್ಯ ದ್ರೋಣ ಅರ್ಜುನ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಸಹ ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಂಗೀತಕ್ಕೆ ಮೃದಂಗ ಹಾಗೂ ಪಿಟೀಲು ಪರಿಣಿತರು ಸಾತ್ ನೀಡಿದ್ದು ಮೆಚ್ಚುಗೆ ಸಂಗತಿಯಾಗಿತ್ತು ಎಂದರು.
ಕಲಾ ಸೌರಭ ಸಂಸ್ಥೆಯ ಮುಖ್ಯಸ್ಥರಾದ ಹಾಗೂ ವಿದ್ವಾನ್ ಬಿವಿ ದತ್ತಾತ್ರೇ ಅವರು ಮಾತನಾಡಿ, ಸಂಸ್ಥೆ 2012ರಲ್ಲಿ ಹುಟ್ಟಿಕೊಂಡಿದ್ದು ಈ ಒಂದು ಸಂಸ್ಥೆಯಲ್ಲಿ ಸಂಗೀತ, ಫೈನ್ ಆರ್ಟ್ಸ್, ನೃತ್ಯ ಹೀಗೆ ವಿವಿಧ ರೀತಿಯ ಕಲಾ ಪ್ರಕಾರಗಳಿಗೆ ತರಬೇತಿಯನ್ನು ಸಹ ನೀಡಲಾಗಿದೆ. ಸಂಸ್ಥೆಯ ಮುಖ್ಯ ಉದ್ದೇಶ ಸಾಮಾನ್ಯ ಜನರಿಗೂ ಸಹ ಸಂಗೀತವನ್ನು ಕಲಿಸುವುದು, ಅವರನ್ನು ಉನ್ನತ ಮಟ್ಟದಲ್ಲಿ ಬೆಳೆಸುವ ಪ್ರಕ್ರಿಯೆಯನ್ನು ಸಂಸ್ಥೆ ನಿರಂತರವಾಗಿ ರೂಡಿಸಿಕೊಂಡು ಬಂದಿದೆ ಎಂದು ತಿಳಿಸಿದರು.
ಸಂಗೀತ ಪ್ರಕಾರಗಳನ್ನು ಕಲಿಯುವುದರಲ್ಲಿ ಯಾವುದೇ ರೀತಿಯ ಜಾತಿ, ಭೇದ, ವರ್ಣ, ಬಡವ ಬಲ್ಲಿದ ಎನ್ನದೇ ಎಲ್ಲರಿಗೂ ಸಹ ಸಮಾನವಾಗಿ ಕಲಾ ಪ್ರಕಾರಗಳನ್ನು ಕಲಿಸಲಾಗುತ್ತದೆ. ಸಂಗೀತ ಕ್ಷೇತ್ರದಲ್ಲಿ ವಿವಿಧ ಆಯಮಗಳಲ್ಲಿ ಸಂಗೀತ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿರುವುದನ್ನು ನೋಡಬಹುದು ಆದರೆ ನಮ್ಮ ಸಂಸ್ಥೆಯಿಂದ ವಿಭಿನ್ನವಾಗಿ ಮೊಟ್ಟಮೊದಲಿಗೆ ಐಪಿಎಲ್ ಕ್ರಿಕೆಟ್ ಮಾದರಿಯೇ ಸಂಗೀತ ಸ್ಪರ್ಧೆಯನ್ನು ಮಾಡಿದ್ದೇವೆ ಅದು ಪೈಲೆಟ್ ಯೋಜನೆಯಲ್ಲಿ ಯಶಸ್ವಿಯು ಸಹ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮ ನಡೆಸಿದ ವಿಧಾನ
ಕರ್ನಾಟಕ ಸಂಗೀತ ಸ್ಪರ್ಧೆಯಲ್ಲಿ ಒಟ್ಟು 8 ತಂಡಗಳನ್ನಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ತಲಾ 2 ಗುಂಪುಗಳನ್ನು ಮಾಡಲಾಗಿದೆ, ಒಂದೊಂದು ಗುಂಪಿನಲ್ಲಿ ನಾಲ್ಕು ತಂಡಗಳು ಇದ್ದವು, ಮೂರು ದಿನಗಳ ಕಾಲ ಎರಡು ಕಡೆ ಸಂಗೀತ ಸ್ಪರ್ಧೆ ನಡೆಸಲಾಯಿತು, ಈ ಪದದಲ್ಲಿ ವಿನದಂತಹ ಸ್ಪರ್ಧಾಳುಗಳನ್ನು ಸೆಮಿ ಫೈನಲ್ ಮತ್ತು ಫೈನಲ್ ಗೆ ಆಯ್ಕೆ ಮಾಡಲಾಗಿತ್ತು. ಅಂತಿಮ ಹಣಾಹಣಿ ಸ್ಪರ್ಧೆ ಡಿಸೆಂಬರ್ 17ರಂದು ಮಲ್ಲೇಶ್ವರಂನ ಗುಂಡೂರಾವ್ ಕ್ರೀಡಾ ಕ್ಲಬ್ ನಲ್ಲಿ ನಡೆಯಿತು. ವಿವಿಧ ಸಂಗೀತ ಪ್ರತಿಭೆಗಳು ಕರ್ನಾಟಕ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಿದರು.
ಸಂಗೀತಕ್ಕೆ ವಯೋಲಿನ್ ಪರಿಣಿತ ಹಾಗೂ ವಿದ್ವಾನ್ ಅರ್ಜುನ್, ಮೃದಂಗವಾದಕ ವಿದ್ವಾನ್ ಶ್ರೀಧರ್ ಅವರು ಮನೋಜ್ಞವಾಗಿ ವಾದ್ಯಗಳನ್ನು ನುಡಿಸಿದರು.
ಅದರಲ್ಲಿ ತಂಡಗಳಾದ ಮಾಯ ಮಳವಗೌಳ, ಕನಕಾಂಗಿ, ಮೆಚ್ಚ ಕಲ್ಯಾಣಿ, ಷಣ್ಮುಖ ಪ್ರಿಯ, ಪಂತುವರಾಲಿ, ಸಿಂಹೇಂದ್ರ ಮಾಧ್ಯಮ, ಹನುಮ ತೋಡಿ, ಧೀರ ಶಂಕರಾಭರಣ ಸೆಮಿ ಫೈನಲ್ ಗೆ ಆಯ್ಕೆ ಮಾಡಲಾಯಿತು, ಸಂಗೀತ ವಿದ್ಯಾರ್ಥಿ ಶ್ರುತಿ ಭಟ್ಟವರ ಅಂತಿಮವಾಗಿ ಹನುಮಾನ್ ತೋಡಿ ಹಾಗೂ ಶಿಲ್ಪಾ ಸೊರಬ ಅವರ ಧೀರ ಶಂಕರಾಭರಣ ತಂಡ ಅಂತಿಮ ಸುತ್ತಿಗೆ ಕಾಲಿಟ್ಟವು, ಕೊನೆ ಸುತ್ತಿನಲ್ಲಿ ಇವೆರಡು ತಂಡಗಳ ಮಧ್ಯೆ ಸಂಗೀತ ಜುಗಲ್ ಬಂದಿ ನಡೆದು ಸಮ ಅಂಕಗಳನ್ನು ಪಡೆದುಕೊಂಡವು, ನಂತರ ಎರಡು ತಂಡಗಳಿಗೂ ಒಂದೊಂದು ಅವಕಾಶ ಕೊಟ್ಟು ಅಂತಿಮವಾಗಿ ಶೃತಿ ಭಟ್ಟರವರ ಹನುಮಾ ತೋಡಿ ತಂಡವು ಗೆದ್ದು ಬೀಗಿತು.
ಬಹುಮಾನ ವಿತರಣೆ
ಕಲಾಂ ಸೌರಭ ಫೌಂಡೇಶನ್ ವತಿಯಿಂದ ನಡೆದ ಕರ್ನಾಟಕ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಹನುಮಾನ್ ತೋಡಿ ತಂಡಕ್ಕೆ ಕಲಾ ಸೌರಭ ದ್ರೋಣಾರ್ಜುನ ಟ್ರೋಫಿ ಹಾಗೂ 10,000 ಮೊದಲ ಬಹುಮಾನವನ್ನು ನೀಡಲಾಯಿತು. ದ್ವಿತೀಯ ಬಹುಮಾನವನ್ನು ಧೀರ ಶಂಕರಾಭರಣ ತಂಡಕ್ಕೆ 5000 ರೂಪಾಯಿ ನೀಡಿ ಗೌರವಿಸಲಾಯಿತು.
ಇನ್ನು ಸಂಗೀತ ಸ್ಪರ್ಧೆಯ ಜೊತೆಯಲ್ಲಿಯೇ ಸಂಗೀತ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಮಹಾಭಾರತ ಚಿತ್ರಾವಳಿಗಳ ಬಗ್ಗೆ ಚಿತ್ರಕಲೆ ಸ್ಪರ್ಧೆ ನಡೆಸಲಾಯಿತು, ವಿದ್ಯಾರ್ಥಿಗಳು ತರಹೇವಾರಿ ಚಿತ್ರಗಳನ್ನು ಬಿಡಿಸಿ ಅವುಗಳ ಮಾರಾಟ ಪ್ರದರ್ಶನವನ್ನು ಸಹ ಏರ್ಪಡಿಸಲಾಯಿತು.
ಮುಂದಿನ ವರ್ಷ 2024 ಡಿಸೆಂಬರ್ 15 ರಂದು ಐಪಿಎಲ್ ಕ್ರಿಕೆಟ್ ಮಾದರಿಯಲ್ಲಿ ಕಲಾ ಸೌರಭ ಸಂಸ್ಥೆಯಿಂದ ಸಂಗೀತ ಕಾರ್ಯಕ್ರಮವನ್ನು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಬಿವಿ ದತ್ತಾತ್ರಿ ಅವ್ರು ಪಂದ್ಯಗಳ ವಿವರ ಹಾಗೂ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು.
ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದ ರವಿ ಕೋಟೆ ಗದೆ , ರಮೇಶ್ ಸಾಸನೂರ್, ನಿವೇದಿತಾ ದತ್ತಾತ್ರಿ, ಕು.ಘೃಣಿ ಭಾಗಿಯಾಗಿದ್ದರು.