ಬೆಂಗಳೂರು: ಆನಂದ ಧ್ವನಿ ಮೂಸಿಕ್ ಎಸ್ ತನ್ನ ಬಯಜನಪ್ರಿಯ ವೈಟ್ ಫೀಲ್ ಸಂಗೀತ ಉತ್ಸವದ 7ನೇ ಆವೃತ್ತಿ ಘೋಷಿಸಿದೆ. ಎರಡು ದಿನಗಳ ಸಂಗೀತ ಸಂಭ್ರಮವುx ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಇನ್ನ ಸರ್ಕಲ್ ಮೈದಾನದಲ್ಲಿ ನಡೆಯಲಿದ್ದು, ದೇಶದ ಹೆಸರಾಂತ 18 ಸಂಗೀತ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಮೊದಲ ದಿನ ವಿದುಷಿ ಬಿಂಬಾವತಿ ಸಿಂಗ್ ಮತ್ತು ವಿದ್ಯು ಮದುಲಿ ಮಹಾಪಾತ್ರ ಅವರಿಂದ ಮಣಿಪುರಿ ಮತ್ತು ಒಡಿಸ್ಸಿ ಜುಗಲ್ಬಂದಿ ನಡೆಯಲಿದೆ, ಇಶಾನ್ ಘೋಷ್ ಅವರ ತಬಲಾ ಮತ್ತು ವಿನೋದ್ ಶ್ಯಾಮ್ ಅನೂರು ಮೃದಂಗದೊಂದಿಗೆ ರಕ್ಷಿತಾ ರಮೇಶ್ ಮತ್ತು ಎಸ್.ಆಕಾಶ್ ಅವರ ವೀಣಾ ವೇಣು ಜುಗಲ್ಬಂದಿ ಜರುಗಲಿದೆ. ವಿದುಷಿ ರಂಜನಿ-ಗಾಯತ್ರಿ ಅವರಿಂದ ಕರ್ನಾಟಿಕ್ ಗಾಯನ ವಾದನವೂ ನಡೆಯಲಿದೆ.
2ನೇ ದಿನ ಸಂಗೀತ ರತ್ನ, ಪುಬೀರ್ ಭಟ್ಟಾಚಾರ್ಯ ಹಾಗೂ ಪಂ. ಅನಿಂದೋ ಚಟರ್ಜಿ ಅವರಿಂದ ಸಿತಾ ಮತ್ತು ತಬಲಾ ವಾದನ ನಡೆಯಲಿದೆ. ನಂತರ ಮುರಾದ್ ಅಲಿ ಸಾರಂಗಿ, ಪಂಡಿತ್ ಅಜಯ್ಉಸ್ತಾದ್ ಜೋಗ್ಲೇಕರ್ ಹಾರ್ಮೋನಿಯಂ ಮತ್ತು ಪಂಡಿತ್ ಓಜಸ್ ಅಧಿಯಾ ಅವರ ತಬಲಾ ಸಾಥ್ನೊಂದಿಗೆ ವಿದುಷಿ ಕೌಶಿಕಿ ಚಕ್ರವರ್ತಿ ಅವರಿಂದ ಹಿಂದೂಸ್ತಾನಿ ಗಾಯನ ವಾದನ ನಡೆಯಲಿದೆ.
ಆನಂದ ಧ್ವನಿ ಮ್ಯೂಸಿಕ್ ಟ್ರಸ್ಟ್ ಬೆಂಗಳೂರು, ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ಮತ್ತು ವಿವಿಧ ಚಟುವಟಿಕೆಗಳ ಮೂಲಕ ಯುವ ಪೀಳಿಗೆಯಲ್ಲಿ ಸಂಗೀತ ಬೆಳೆಸುವ ಗುರಿಯನ್ನು ಹೊಂದಿರುವ ಲಾಭೋದೇಶವಿಲ್ಲದ ಸಂಸ್ಥೆಯಾಗಿದೆ, 2011 ರಲ್ಲಿ ಪ್ರಾರಂಭವಾದ ಟ್ರಸ್ಟ್ ಅನ್ನು ಔಪಚಾರಿಕವಾಗಿ 2017ರಲ್ಲಿ ನೋಂದಾಯಿಸಲಾಯಿತು. ನಂತರ ಹಿಂತಿರುಗಿ ನೋಡಲಿಲ್ಲ.. ಸಂಗೀತ ಜಗತ್ತಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಕಮ್ಮ
ಆನಂದ ಧ್ವನಿ ಕುರಿತು ಮಾತನಾಡಿದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂಗೀತ ರತ್ನ ಪುಬೀರ್ ಭಟ್ಟಾಚಾರ್ಯ, ”ಪುಸಿದ ಸಿತಾರ್ ವಾದಕ ಮತ್ತು ಮಹಾ ಘರಾನಾದ ಐಕಾನ್ ಗಳಲ್ಲಿ ಒಬ್ಬರೂ ಮತ್ತು ಭಾರತ ರತ್ನ ಪಂಡಿತ್ ರವಿಶಂಕರ್ ಅವರ ನೇರ ಶಿಷ್ಯರೂ ಆಗಿದೆ ದಿ.ಪಂಡಿತ್ ದೀಪಕ್ ಚೌಧರಿ ‘ಆನಂದ ಧ್ವನಿ’ಯ ಬೀಜ ಬಿತ್ತಿದವರು. ಈಗ ಅವರ ಶಿಷ್ಯರು ಸಂಸ್ಥೆಯನ್ನು ಬೆಳಸುತ್ತಿದ್ದಾರ, ದೀಪಕ್ ಜೀಯವರ ಸಂಯೋಜನೆಯಾದ ಆನಂದಧ್ವನಿ ಎಂಬ ರಾಗದ ಹೆಸರನ್ನೇ ಟ್ರಸ್ಟ್ ಗೆ ಇಡಲಾಗಿದೆ ಎಂದರು. ಈ ಸಲದ ಸಂಗೀತ ಉತ್ಸವಕ್ಕೆ 499 ರೂ. ಪುವೇಶ ಶುಲ್ಕವಿರುತ್ತದೆ ಎಂದು ಖಜಾಂಚಿ ಸುಶಾಂತ ಮುಖರ್ಜಿ ಹೇಳಿದರು.
ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.ananadhawani.in ಅಥವಾ ಮೋ 9606444452 ಸಂಪರ್ಕಿಸಬಹುದು.