ಬೆಂಗಳೂರು: ಕ್ರಿಸ್ಮಸ್ ಹಬ್ಬದ ಸಮಯ ಸಮೀಪಿಸುತ್ತಿದ್ದಂತೆಯೇ ಬೆ೦ಗಳೂರಿನ ಪ್ರೀಮಿಯರ್ ಶಾಪಿಂಗ್ ತಾಣ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಸಂದರ್ಶಕರಿಗೆ ಅಮೋಘ ಅನುಭವವನ್ನು ಒದಗಿಸುವುದಕ್ಕಾಗಿ 100 ಅಡಿ ಎತ್ತರದ ಕ್ರಿಸ್ಮಸ್ ಟ್ರೀ ಅನ್ನು ಅನಾವರಣಗೊಳಿಸಿದೆ. ಇದು ದೇಶದಲ್ಲಿ ಮೊದಲ ಬಾರಿಯಾಗಿದೆ ಎಂದು ದಕ್ಷಿಣ ಭಾರತಕ್ಕೆ ಮಾಲ್ನ ನಿರ್ದೇಶಕ ಗಜೇಂದ್ರ ಸಿಂಗ್ ರಾಠೋಡ್ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಯುರೋಪಿಯನ್ ಥೀಮ್ ಇರುವ ಮಾರ್ಕೆಟ್ ಕೂಡಾ ಇದ್ದು, ಕುಟುಂಬಗಳು ಮತ್ತು ಸ್ನೇಹಿತರಿಗೆ ಅಮೋಘ ಅನುಭವವನ್ನು ಒದಗಿಸಲಿದೆ. ಸುಂದರ ಕಾರ್ಯಕ್ರಮಗಳು, ಸಾಂತಾ ಮೀಟ್ ಆಂಡ್ ಗ್ರೀಟ್ನಲ್ಲಿ ಗ್ರಾಹಕರು ಈ ಹಬ್ಬದ ಸೀಸನ್ನ ಅದ್ಭುತವನ್ನು ಆನಂದಿಸಬಹುದು. ಅಲ್ಲದೆ, ಇದರಲ್ಲಿ ಕ್ಯಾರಲ್ ಗಾಯನ, ಆಕರ್ಷಕ ಸ್ನೋಮ್ಯಾನ್ ಮತ್ತು ಕ್ರಿಸ್ಮಸ್ ಪರೇಡ್ ಎಲ್ಲವನ್ನೂ ಕಣ್ತುಂಬಿಕೊಳ್ಳಬಹುದು.
ಮಾಲ್ಗೆ ಆಗಮಿಸಿದ ಎಲ್ಲರಿಗೂ ಅಮೋಘ ಮತ್ತು ಅಚ್ಚರಿಯ ಅನುಭವವನ್ನು ಒದಗಿಸುತ್ತದೆ. ಸಂಜೆಯ ಸಮಯದಲ್ಲಿ ಸಂಗೀತ ಮತ್ತು ಪ್ರದರ್ಶನ ಕಲೆಗಳನ್ನು ಆಸ್ವಾದಿಸಬಹುದು. ಇವು ಹಬ್ಬದ. ಖುಷಿ ಮತ್ತು ಸಂಭ್ರಮವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲಿವೆ.
ಕ್ರಿಸ್ಮಸ್ ಟ್ರೀಯ ಬಳಿಯಲ್ಲಿ ವೈಭವೋಪೇತ ಜಿಂಜರ್ಬ್ರೆಡ್ ಹೌಸ್ ಇದೆ. ಇದು ಆಹ್ಲಾದಕರ, ಹಳೆಯಕಾಲದ ಅನುಭವವನ್ನು ಉಂಟುಮಾಡುತ್ತದೆ. ಸುಂದರವಾಗಿ ವಿನ್ಯಾಸ ಮಾಡಿದ ಅಲಂಕಾರಗಳು, ಹಲವು ಸಣ್ಣ ಸಣ್ಣ ಮನೆ ಮತ್ತು ಸಟಕ್ ಪ್ರತಿಮೆಗಳನ್ನು ಇದು ಒಳಗೊಂಡಿದ್ದು. ಒಂದು ಮನುಷ್ಯನಷ್ಟೇ ಎತ್ತರದ ಜಿ೦ಜರ್ಬ್ರೆಡ್ ಹೌಸ್ ಅದ್ಭುತವಾದ ಕಲಾಕೃ ತಿಯಾಗಿ ಕಾಣಿಸುತ್ತದೆ. ಹಬ್ಬದ ತಿನಿಸುಗಳು, ಸೀಸನಲ್ ಉಡುಪುಗಳನ್ನು ಸ್ಟಾಲ್ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಎಲ್ಲ ವಯಸ್ಸಿನ ಸಂದರ್ಶಕರಿಗೂ ಶಾಪಿಂಗ್ನ ಅದ್ಭುತ ಅನುಭವವನ್ನು ಒದಗಿಸುತ್ತದೆ.
ಕ್ರಿಸ್ ಮಸ್ ಹಬಕ್ಕೆ ಪಿನಿಕ್ಸ್ ಮಾಲ್ ನಲ್ಲಿ ಮನೋರಂಜನೆ
ಮಾಲ್ ನಲ್ಲಿ ಮನರಂಜನೆ ಕಾರ್ಯಕ್ರಮವನ್ನು ಪ್ರತಿ ದಿನ ಸ೦ಜೆ ಆಯೋಜನೆ ಮಾಡಿದೆ. ಇದರಲ್ಲಿ ಜನಪ್ರಿಯ ಕಲಾಕಾರರು ಮತ್ತು ಕ್ಯಾರಲ್ ಗಾಯಕರು ಪ್ರದರ್ಶನ ನೀಡಲಿದ್ದಾರೆ. ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಟ್ರೆಂಡಿಂಗ್ ಅಕ್ಷೆಸರಿಗಳು, ಸು೦ದರ ಕಲಾಕೃತಿಗಳು, ಮನೆ ಅಲಂಕಾರಿಕ ಉತ್ಪನ್ನಗಳು ಮತ್ತು ಇತರ ಆಕರ್ಷಕ ಹಬ್ಬದ ಸಾಮಗ್ರಿಗಳು ಇದ್ದು. ಗ್ರಾಹಕರಿಗೆ ಆಯ್ಕೆಗಳ ಅಪಾರ ಅವಕಾಶವೇ ಸಿಗಲಿದೆ. ಗ್ರ್ಯಾಂಡ್ ಪ್ಲಾಜಾದಲ್ಲಿರುವ ವೇದಿಕೆಯು. ಕ್ರಿಸ್ಮಸ್, ನ ಅದ್ಭುತ ಸಂಭ್ರಮಾಚರಣೆಯಲ್ಲಿ ಮುಳಿಗೇಳಲಿದೆ. ಸಾ೦ತಾಸ್ ಗ್ರೊಟ್ಟೊಗೆ ಭೇಟಿ ನೀಡುವಂತೆ ಕುಟುಂಬಗಳನ್ನು ಆಹ್ವಾನಿಸಲಾಗುತ್ತಿದೆ. ಇಲ್ಲಿ ಮಕ್ಕಳು ಸಾ೦ತಾ ಕ್ಲಾಸ್ ಅನ್ನು ಭೇಟಿ ಮಾಡಬಹುದಾಗಿದೆ ಮತ್ತು ಕ್ರಿಸ್ ಮಸ್ ವಿಶ್ಗಳನ್ನು ಹಂಚಿಕೊಳ್ಳಬಹುದಾಗಿದೆ. ಫೋಟೋ ಸೆಷನ್ ಕೂಡಾ ಮಾಡಿಸಿಕೊಳ್ಳಬಹುದಾಗಿದೆ.
ಈ ಮೂಲಕ ನಾವು ಅದ್ಭುತ ಕ್ರಸ ಕ್ರಿಸ್ಮಸ್ ಟ್ರೀ “ಮತ್ತು ಕ್ರಿಸ್ ಮ್ ಮಾರ್ಕೆಟ್ ಅನ್ನು ರೂಪಿಸಿದ್ದೇವೆ”. ಕ್ರಿಸ್ಮಸ್ ಸಮಯದಲ್ಲಿ ಬೆಳಕು, ನಗು ಮತ್ತು ಹಬ್ಬದ ಉತ್ಸಾಹದ ಅದ್ಭುತ ಸಂಜೆ ಬೆ೦ಗಳೂರಿನ ಮಾಲ್ ಆಫ್ ಏಷ್ಯಾದಲ್ಲಿ ಅನಾವರಣಗೊಳ್ಳಲಿದೆ