ಬೆಂಗಳೂರು: ಗಂಗಾಮತ, ಬೆಸ್ತ, ಮೊಗವೀರ, ಕೊಹ್ಲಿ, ಕಬ್ಬಲಿಗ,ಅಂಬಿಗ ಸಮುದಾಯಕ್ಕೆ ಸೇರಿದ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಮತಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದಿಂದ ಭಾರತೀಯ ಜನತಾ ಪಾರ್ಟಿಗೆ ಮನವಿಯನ್ನು ಮಾಡಿಕೊಂಡರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಘದ ಅಧ್ಯಕ್ಷ ಡಾ. ಬಿ ಮೌಲಾಲಿ ಅವರು ಮಾತನಾಡಿ, ರಾಜ್ಯದಲ್ಲಿ ಒಟ್ಟು 60 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ಸಮುದಾಯದಲ್ಲಿ ಗುರುತಿಸಿಕೊಂಡು ಮೀನುಗಾರರ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಸರ್ವೋತೋಮುಕ ಅಭಿವೃದ್ಧಿ ಅವಶ್ಯಕವಾಗಿದೆ ಎಂದರು.
ಪ್ರಮುಖವಾಗಿ ಯುವಜನರನ್ನು ಸಂಘಟಿಸುವ ಯುವ ಪೀಳಿಗೆಯಲ್ಲಿ ನಾಯಕತ್ವ ಗುಣಗಳನ್ನು ರೂಪಿಸುವ ಪ್ರಾಮಾಣಿಕತೆ, ಪಾರದರ್ಶಕತೆ, ಬದ್ಧತೆ, ಪರಿಶ್ರಮ ಸಮರ್ಪಣಾ ಮನೋಭಾವದ ಚಿಂತನೆಯುಳ್ಳವರು ಹಾಗೂ ಕ್ರಿಯಾಶೀಲ ವ್ಯಕ್ತಿ ಪ್ರಮೋದ್ ಮುತ್ತುರಾಜ್, ಹೀಗಾಗಿ ಇಂಥ ವ್ಯಕ್ತಿಗೆ ಬಿಜೆಪಿಯಿಂದ ಟಿಕೆಟ್ ನೀಡುವುದೇ ಮನವಿಯನ್ನು ಸಹ ಇದೇ ವೇಳೆ ಮಾಡಿಕೊಂಡರು.
ಪ್ರಮೋದ್ ಅವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ರಾಜಕೀಯ ಪ್ರಜ್ಞೆ ಉಳ್ಳವರಾಗಿದ್ದಾರೆ, ಮೀನುಗಾರರ ಸಮಸ್ಯೆಗಳು ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹರಿಸುವ ರಾಜಕೀಯ ರಂಗದ ಸಮಚಿತ್ತ ಭಾವದ ರಾಜಕಾರಣಿಯಾಗಿದ್ದಾರೆ ಎಂದರು.
ಈಗಾಗಲೇ ಸಂಘದಿಂದ ಬಿಜೆಪಿಯ ರಾಜ್ಯಾಧ್ಯಕ್ಷರಿಗೂ, ರಾಜ್ಯದ ನಾಯಕರಿಗೂ ರಾಷ್ಟ್ರ ನಾಯಕರಿಗೂ ಗಮನಕ್ಕೆ ತಂದು ಮನವಿಯನ್ನು ನೀಡಿ ಒತ್ತಾಯವನ್ನು ಮಾಡಿದ್ದಾರೆ. ಮಧ್ವರಾಜ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿಪರ ಚಿಂತನೆ ಹಾಗೂ ರಾಜಕೀಯ ನಿಲುವು ಇಟ್ಟುಕೊಂಡ ವ್ಯಕ್ತಿಯಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಮಹಾದೇವ ಕರ್ಜಿಗಿ, ಉಪಾಧ್ಯಕ್ಷರಾದ ಮಣ್ಣೂರು ನಾಗರಾಜ, ಪ್ರಧಾನ ಕಾರ್ಯದರ್ಶಿಯಾದ ಮುರುಳಿಧರ್, ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಎಂಪಿ ಮಂಜುನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.