ಬೆಂಗಳೂರು:ಯುನಿಯನ್ ಬ್ಯಾಂಕ್ ವತಿಯಿಂದ ಬೆಂ.ಮ.ಸಾ.ಸಂ. ಸೇವೆ ಸಲ್ಲಿಸುತ್ತಿದ್ದು, ಅವರು ಮೃತ ಪಟ್ಟಿರುತ್ತಾರೆ, ಅಂತಹ ಸಿಬ್ಬಂದಿಯ ಅವಲಂಬಿತರಿಗೆ ರೂ.50 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿತರಣೆ ಮಾಡಿದರು.
ಮುಂದುವರೆದು ಸಾರಿಗೆ ಸಚಿವರು ಮಾತನಾಡುತ್ತಾ “ ದು:ಖತಪ್ತ ಕುಟುಂಬದವರಿಗೆ ಸಾಂತ್ವನ ಹೇಳಿ ಯುನಿಯನ್ ಬ್ಯಾಂಕ್ ದವರು ನೀಡಿರುವ ರೂ.50 ಲಕ್ಷ ಮೊತ್ತವನ್ನು ಸದುಪಯೋಗ ಪಡಿಸಿಕೊಳ್ಳಿ, ಮನೆಯನ್ನು ಕಟ್ಟಿಕೊಳ್ಳಿ, ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿರಿ. ನಮ್ಮ ಸಂಸ್ಥೆಯಲ್ಲಿಯೂ ಕೂಡ ಅವಲಂಬಿತರಿಗೆ ಅನುಕಂಪದ ಆಧಾರದ ಮೇರೆಗೆ ಕೆಲಸವನ್ನು ವರಿಷ್ಠತೆ ಅನುಸಾರ ನೀಡುತ್ತಿದ್ದೇವೆ. ಸಂಸ್ಥೆಯಿಂದ ಬರುವ ಉಪದಾನ, ಭವಿಷ್ಯ ನಿಧಿ, ಆತರೀಕ ಗುಂಪು ವಿಮಾ ಮೊತ್ತ ರೂ.3.00 ಲಕ್ಷ , ಗಳಿಕೆ ರಜೆ, ಡಿ.ಆರ್.ಬಿ.ಎಫ್., ಇ.ಡಿ.ಎಲ್.ಐ.(ಗುಂಪು ವಿಮೆ) ಮುಂತಾದ ಧನ ಸಹಾಯವನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳಲು ತಿಳಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೌಕರರ ಹಿತದೃಷ್ಟಿಯಿಂದ ಯೂನಿಯನ್ ಬ್ಯಾಂಕ್ನೊಂದಿಗೆ ದಿನಾಂಕ: 21.08.2023 ರಂದು ಮೂರು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಒಡಂಬಡಿಕೆಯನ್ವಯ ಯೂನಿಯನ್ ಬ್ಯಾಂಕ್ನಲ್ಲಿ Union Super Salary Account ಖಾತೆ ಹೊಂದಿದ ಸಿಬ್ಬಂದಿ ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಬ್ಯಾಂಕ್ ವತಿಯಿಂದ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತದೆ.
ಯಾರಿಗೆ ಯೋಜನೆ ಹೊಂದುತ್ತದೆ
1. ಮಾಸಿಕ ವೇತನ ರೂ.25,000/-ಕ್ಕಿಂತ ಕಡಿಮೆ ಇದ್ದಲ್ಲಿ ರೂ.50.00 ಲಕ್ಷ ವಿಮಾ ಮೊತ್ತ ಮತ್ತು ಡೆಬಿಟ್ ಕಾರ್ಡ್ ಹೊಂದಿದ್ದಲ್ಲಿ ರೂ.4.00 ಲಕ್ಷ ಒಟ್ಟು ರೂ.54.00 ಲಕ್ಷಗಳ ಮೊತ್ತ ಪಾವತಿಸಲಾಗುವುದು.
2. ಮಾಸಿಕ ವೇತನ ರೂ.25,000/-ಕ್ಕಿಂತ ಮೇಲ್ಲಟ್ಟಲ್ಲಿ ರೂ.50.00 ಲಕ್ಷ ವಿಮಾ ಮೊತ್ತ ಮತ್ತು ಡೆಬಿಟ್ ಕಾರ್ಡ್ ಹೊಂದಿದ್ದಲ್ಲಿ ರೂ.15 ಲಕ್ಷಗಳು ಒಟ್ಟು ರೂ.65.00 ಲಕ್ಷಗಳ ಮೊತ್ತ ಪಾವತಿಸಲಾಗುವುದು.
3. ರೂ.25,000/- ಕ್ಕಿಂತ ಹೆಚ್ಚು ವೇತನ ಇರುವ ಸಿಬ್ಬಂದಿಗಳಿಗೆ ವಾರ್ಷಿಕ ರೂ.15,000/- ವೈದ್ಯಕೀಯ ಮರುಪಾವತಿ ಸೌಲಭ್ಯ.
ಮಲ್ಲಿಕಾರ್ಜುನ, ಚಾಲಕ, ಬಿ.ಸಂ.15610, ಘಟಕ-34 ರವರು ದಿನಾಂಕ: 30.09.2023 ರಂದು ಚಿತ್ರದುರ್ಗದ ಬಳಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಸದರಿ ಸಿಬ್ಬಂದಿಯು ಯೂನಿಯನ್ ಬ್ಯಾಂಕ್ನಲ್ಲಿ ವೇತನ ಖಾತೆ ಹೊಂದಿದ್ದು, ಅವರ ಪತ್ನಿಯಾದ ಶ್ರೀಮತಿ.ರುದ್ರಮ್ಮ ಹಿರೇಮಠ ರವರಿಗೆ ಯೂನಿಯನ್ ಬ್ಯಾಂಕ್ ವತಿಯಿಂದ ರೂ.50.00 ಲಕ್ಷಗಳ ವಿಮಾ ಪರಿಹಾರ ಮೊತ್ತವನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ರವರು ವಿತರಣೆಮಾಡಿದರು.
ಈ ಸಂದರ್ಭದಲ್ಲಿ ಸತ್ಯವತಿ .ಜಿ., ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ಸಾ.ಸಂಸ್ಥೆ, ಜಿ.ಟಿ.ಪ್ರಭಾಕರ್ ರೆಡ್ಡಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ಆ) ರವರು, ದಿವಾಕರ್, ಮುಖ್ಯ ಕಾಮಿ೯ಕ ಕಲ್ಯಾಣಾಧಿಕಾರಿ ಹಾಗೂ ಯುನಿಯನ್ ಬ್ಯಾಂಕ್ ಪ್ರಾದೇಶಿಕ ಅಧಿಕಾರಿರವರಾದ ಆಸೀಮ್ ಹಾಗೂ ಸಂಸ್ಥೆಯ ಎಲ್ಲಾ ಇಲಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು.