ಬೆಂಗಳೂರು: ದಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸವಿ ನೆನಪು ಹಿನ್ನೆಲೆ ರಾಗ ಸುಧಾ ಕಾರ್ಯಕ್ರಮವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಗಸುಧ್ ಸಂಸ್ಥೆಯ ಅಧ್ಯಕ್ಷ ಭವ್ಯ ಹೆಬ್ಬಾಲೆ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಕಾರ್ಯಾಗಾರ ನಡೆಸಿ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಅವರ ಜ್ಞಾಪಕಾರ್ಥ ಹಲವು ಕಾರ್ಯಕ್ರಮಗಳನ್ನು ಮಾಡಲಾಗಿತ್ತು, ಅವು ಸಾಕಷ್ಟು ಮನ್ನಣೆ ನಮಗೆ ಸಿಕ್ಕಿದೆ, ಹೀಗಾಗಿ ಅಪ್ಯ ಅವರ ವಿಚಾರಧಾರೆಗಳನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರತ್ನ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬದ ಅಂಗವಾಗಿ ಅಪ್ಪು ಸವಿ ನೆನಪು ಸಂಗೀತ ಕಾರ್ಯಕ್ರಮವನ್ನು 9ನೇ ಮಾರ್ಚ್ 2024 ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರು ನಟಿಸಿರುವ ಹಾಡುಗಳ ಮೆಲುಕು ಹಾಕುವ ಕಾರ್ಯವಾಗಲಿದೆ.
ಇನ್ನು ಕಾರ್ಯಕ್ರಮಕ್ಕೆ ನಾಡಿನ ಖ್ಯಾತ ಗಾಯಕರಾದ ಇಂದು ನಾಗರಾಜ್, ಮಂಗಳ ರವಿ, ನಿತೀನ್ ರಾಜಾರಾಂ ಶಾಸ್ತ್ರಿ, ಅಂಕಿತ ಕುಂಡು, ರಮ್ಯ ಭಾರದ್ವಾಜ್, ಅನುರಾಗ್ ಗದ್ದಿ, ಸರಿಗಮಪ ವಿಜೇತ ಶ್ರೀನಿಧಿ ಶಾಸ್ತ್ರಿ, ಮಾಸ್ತರ್ ಸುರಾನು ಶ್ರೀಕಾಂತ್, ಮಾಸ್ಟರ್ ತಿಲಕ್ ಶ್ಯಾಮ್ ಶಾಸ್ತ್ರಿ ಮತ್ತು ಸಂಸ್ಥಾಪಕಿ ಭವ್ಯ ಹೆಬ್ಬಾಲೆ ರವರು ಅಪ್ಪು ಸಿನಿಮಾಗಳ ಹಾಡಿನ ರಸದೌತಣ ಬಡಿಸಲಿದ್ದಾರೆ ಎಂದರು.
ಪುನೀತ್ ಅಭಿನಯದ ಚಿತ್ರಗಳ ವೈವಿಧ್ಯಮಯ ಹಾಡುಗಳ ಮೂಲಕ ಅವರ ಸ್ಮರಣೆಯ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಹೃದಯ ಪೂರ್ವಕ ಅವಕಾಶವಿದೆ. ಕಾರ್ಯಕ್ರಮಕ್ಕೆ ಟಿಕೆಟ್ ಮಾಡಲಾಗಿದ್ದು, 199 ರೂಪಾಯಿ ಇದೆ. Book my show ನಲ್ಲಿಯೂ ಟಿಕೆಟ್ ಲಭ್ಯವಿದೆ. ಈ ಮೂಲಕ ಅಪ್ಪುಗೆ ನಮನ ಹಾಗೂ ಪ್ರೋತ್ಸಾಹ ನೀಡುವ ನೆಲಸವಾಗಬೇಕೆಂದರು.